ಚಿಕ್ಕಮಗಳೂರಿನಲ್ಲಿ 50 ವರ್ಷಗಳಿಂದ ಸೂರಿಗಾಗಿ ನಿಲ್ಲದ ವಸತಿ ರಹಿತರ ಹೋರಾಟ; ಜನಪ್ರತಿನಿಧಿಗಳಿಗೆ ಧ್ವನಿ ಕೇಳುವುದೆಂದೋ?

ಕಳೆದ 50 ವರ್ಷಗಳಿಂದ ಆಶ್ರಯ ಮನೆಗಾಗಿ ಅಲೆದು-ಅಲೆದು ಸುಸ್ತಾಗಿ ರೋಸಿ ಹೋಗಿರೋ 150ಕ್ಕೂ ಹೆಚ್ಚು ವಸತಿ ರಹಿತರು ಮೂಡಿಗೆರೆ ತಾಲೂಕಿನ ಕಳಸ ಬಳಿಯ ಮಾವಿನಕೆರೆ ಸರ್ವೇ ನಂಬರ್ 85 ರಲ್ಲಿ ಸಾಲು-ಸಾಲು ಟೆಂಟ್ ಕಟ್ಟಿ ಸೂರಿಗಾಗಿ ಹೋರಾಟ ಆರಂಭಿಸಿದ್ದಾರೆ.

news18-kannada
Updated:February 18, 2020, 7:07 AM IST
ಚಿಕ್ಕಮಗಳೂರಿನಲ್ಲಿ 50 ವರ್ಷಗಳಿಂದ ಸೂರಿಗಾಗಿ ನಿಲ್ಲದ ವಸತಿ ರಹಿತರ ಹೋರಾಟ; ಜನಪ್ರತಿನಿಧಿಗಳಿಗೆ ಧ್ವನಿ ಕೇಳುವುದೆಂದೋ?
ಸೂರಿಗಾಗಿ ಪ್ರತಿಭಟಿಸುತ್ತಿರುವ ಚಿಕ್ಕಮಗಳೂರಿನ ಜನ.
  • Share this:
ಚಿಕ್ಕಮಗಳೂರು : ಕಳೆದ 40-50 ವರ್ಷಗಳಿಂದ ಸೂರಿಗಾಗಿ ನಿರಂತರ ಹೋರಾಟ. ಮಳೆ, ಬಿಸಿಲು, ಚಳಿಯಲ್ಲೇ ಜೀವನದ ಜಂಜಾಟ. ಸರ್ಕಾರಕ್ಕೆ ಮನವಿ ಮಾಡಿ ಮಾಡಿ ಸುಸ್ತಾಗಿ ರೊಚ್ಚಿಗೆದ್ದಿರೋ ವಸತಿ ರಹಿತರು ಇದೀಗ ಮಲೆನಾಡಿನಲ್ಲಿ ಸೂರಿಗಾಗಿ ಸಮರಕ್ಕೆ ಇಳಿದಿದ್ದಾರೆ. ಹಸಿರು ಕಾನನದ ನಡುವೆ ತಾವೇ ಸೂರಿಗೆ ಬೇಕಾಗುವಷ್ಟು ಜಾಗ ಗುರುತಿಸಿಕೊಂಡು ಸೂರಿಗಾಗಿ ಹೋರಾಟ ಆರಂಭಿಸಿದ್ದಾರೆ.

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ವಸತಿ ರಹಿತರು ಸೂರಿಗಾಗಿ ನಡೆಸ್ತಿರೋ ಹೋರಾಟ. ಕಳೆದ 50 ವರ್ಷಗಳಿಂದ ಆಶ್ರಯ ಮನೆಗಾಗಿ ಅಲೆದು-ಅಲೆದು ಸುಸ್ತಾಗಿ ರೋಸಿ ಹೋಗಿರೋ 150ಕ್ಕೂ ಹೆಚ್ಚು ವಸತಿ ರಹಿತರು ಮೂಡಿಗೆರೆ ತಾಲೂಕಿನ ಕಳಸ ಬಳಿಯ ಮಾವಿನಕೆರೆ ಸರ್ವೇ ನಂಬರ್ 85 ರಲ್ಲಿ ಸಾಲು-ಸಾಲು ಟೆಂಟ್ ಕಟ್ಟಿ ಸೂರಿಗಾಗಿ ಹೋರಾಟ ಆರಂಭಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಗೆ ಮನೆ ಕಳೆದುಕೊಂಡವರೂ ಕೂಡಾ ಆಶ್ರಯ ಮನೆಗಾಗಿ ಹೋರಾಟಕ್ಕೆ ಕೈ ಜೋಡಿಸಿರೋದು ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಟೆಂಟ್ ತೆರವುಗೊಳಿಸುವಂತೆ ಆದೇಶ ನೀಡಿದ್ರೂ ಕೇರ್ ಮಾಡದ ವಸತಿ ರಹಿತರು ಮನೆ ನೀಡೋವರೆಗೂ ಇದೇ ಜಾಗದಲ್ಲಿ ಉಪವಾಸ ಕೂರ್ತಿವಿ ಅಂತಾ ಹಠ ಹಿಡಿದ್ದಾರೆ.

ಮಲೆನಾಡು ಭಾಗದಲ್ಲಿ ವಸತಿ ರಹಿತರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದು ರೀತಿಯಲ್ಲಿ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್. ಆರ್ ಪುರ ತಾಲೂಕುಗಳಲ್ಲಿ ವಸತಿ ರಹಿತರು ಕೊನೆಪಕ್ಷ ಬದುಕು ಕಟ್ಟಿಕೊಳ್ಳಲು ಒಂದು ಸೂರು ನೀಡುವಂತೆ ಸರ್ಕಾರಿ ಕಚೇರಿಗಳಿಗೆ ಮನವಿ ಮಾಡೋದು ಸಾಮಾನ್ಯವಾಗಿದೆ.

ಇದನ್ನೂ ಓದಿ : ಹಲವು ಆರೋಪ ಹೊತ್ತ ನನ್ನ ಕಾಂಗ್ರೆಸ್​​ಗೆ ಹೇಗೆ ಸೇರಿಸಿಕೊಂಡ್ರಿ?: ಸಿದ್ದರಾಮಯ್ಯಗೆ ಆನಂದ್​​ ಸಿಂಗ್ ಪ್ರಶ್ನೆ​​​

ಹಲವು ವರ್ಷಗಳಿಂದ ಜಿಲ್ಲೆಯ ಕಾಫಿ ತೋಟಗಳಲ್ಲಿ ಕೂಲಿ ಮಾಡುತ್ತಾ ಇನ್ನು ಕೂಲಿಯಾಳಾಗೇ ಉಳಿದಿರೋ ಬಡ ಮೂಲ ನಿವಾಸಿಗಳ ಆಕ್ರೋಶದ ಕಟ್ಟೆಯೊಡೆದಿದ್ದು ನಮಗೂ ಸೂರಿ ನೀಡಿ ಎಂದು ಸರ್ಕಾರದ ವಿರುದ್ಧ ಇದೀಗ ಹೋರಾಟಕ್ಕೆ ಇಳಿದಿದ್ದಾರೆ.

ಇದೇ ವೇಳೆ ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ವಸತಿ ರಹಿತರ ಕಷ್ಟ ಆಲಿಸದೆ ಇರುವುದು ಹೋರಾಟಗಾರರನ್ನ ಮತ್ತಷ್ಟು ಕಂಗೆಡುವಂತೆ ಮಾಡಿದೆ. ಇನ್ನು ಈ ಬಗ್ಗೆ ಕಳಸ ಪಿಡಿಓ ಕವೀಶ್ ಕೇಳಿದ್ರೆ ನಮ್ಮಲ್ಲಿ ಸಾಕಷ್ಟು ಜನ ನಿವೇಶನ ರಹಿತರು ಇದ್ದಾರೆ, ನಾವು ಈಗಾಗಲೇ ಸ್ಥಳ ಪರಿಶೀಲನೆ ಹೆಚ್ಚು ಜಾಗ ನೀಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಜಾಗ ನೀಡಿದ್ದಲ್ಲಿ ಎಲ್ಲರಿಗೂ ನಿವೇಶನ ನೀಡುವಂತಹ ಕೆಲಸ ಮಾಡುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ.ಕಳಸ ಗ್ರಾಮ ಪಂಚಾಯ್ತಿಗೆ ಮನೆ ನೀಡುವಂತೆ ದಶಕಗಳಿಂದಲೂ ಮನವಿ ಮಾಡ್ತಾ ಬಂದಿದ್ದರೂ ಯಾವುದೇ ಪ್ರಯೋಜವನಾಗಿಲ್ಲ. ಈ ಮಧ್ಯೆಯೂ ಸೂರು ನೀಡೋವರೆಗೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ನಿವೇಶನ ರಹಿತರು ಹಠ ಹಿಡಿದಿದ್ದಾರೆ.

ಒಟ್ಟಿನಲ್ಲಿ ಸ್ವಾತ್ಯಂತ್ರ ಬಂದು ದಶಕಗಳೇ ಕಳೆದರೂ ಮಲೆನಾಡಿನ ಜನ ಸೂರಿಗಾಗಿ ಹೋರಾಟ ನಡೆಸುತ್ತಿರುವುದು ನಮ್ಮ ವ್ಯವಸ್ತೆಯನ್ನೇ ಅಣಕಿಸುವಂತಿದೆ. ಮಲೆನಾಡಲ್ಲಿ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿರೋ ವಸತಿ ತಹಿತರ ಹೋರಾಟವನ್ನು ಹತ್ತಿಕ್ಕುವ ಬದಲು ಸೂಕ್ತ ಜಾಗ ಗುರುತಿಸಿ ಅರ್ಹರಿಗೆ ಸೂರು ಕಲ್ಪಿಸೋ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸಬೇಕಿದೆ.

ಇದನ್ನೂ ಓದಿ : ಆರ್ಥಿಕ ಸಂಕಷ್ಟ; ಇತಿಹಾಸದ ಪುಟ ಸೇರಿದ ಮಲೆನಾಡಿನ ಸಹಕಾರ ಸಾರಿಗೆ ಬಸ್​
First published: February 18, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading