ಬೆಳಕು ನೋಡದ ಜನ.. ಕುಗ್ರಾಮದವರ ಗೋಳು ಕೇಳೋರಿಲ್ಲ!

ಸರ್ಕಾರದ ಬೇಜಾವಾಬ್ದಾರಿ ಕಂಡು ರೋಸಿ ಹೋದ ಹಳ್ಳಿಗರು, ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರಿಗೂ ಲೆಟ್ರು ಬರೆದಿದ್ದಾರೆ. ನಮಗೆ ಏನೂ ಬೇಡ. ಎಲ್ಲಾ ನಾವೇ ಮಾಡ್ಕೊಳ್ತೇವೆ. ನಮ್ಗೆ ರೋಡು-ಕರೆಂಟು ಕೊಟ್ರೆ ಸಾಕು ಅನ್ನೋದು ಇವ್ರ ವಿನಮ್ರ ಮನವಿ.

ಮಳೆಗಾಲದಲ್ಲಿ ರಸ್ತೆ ಇಲ್ಲದ ಈ ಗ್ರಾಮದ ಸ್ಥಿತಿ.

ಮಳೆಗಾಲದಲ್ಲಿ ರಸ್ತೆ ಇಲ್ಲದ ಈ ಗ್ರಾಮದ ಸ್ಥಿತಿ.

  • Share this:
ಚಿಕ್ಕಮಗಳೂರು : ಓಡಾಡೋದಕ್ಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ರೋಗಿಗಳನ್ನ ಮೂರ್ನಾಲ್ಕು ಕಿ.ಮೀ. ಹೊತ್ತುಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಮಕ್ಕಳು ಶಾಲೆಗೆ ಹೋಗ್ಬೇಕು ಅಂದ್ರು ಇಷ್ಟೇ ದೂರ ನಡೀಬೇಕು. ಅದು ಅನಿವಾರ್ಯ. 80 ವರ್ಷದಿಂದ ಕೊಟ್ಟ ಮನವಿಗಳಿಗೆ ಲೆಕ್ಕವಿಲ್ಲ. ಅದಕ್ಕೆ ಅಧಿಕಾರಿಗಳು-ರಾಜಕಾರಣಿಗಳ ಬಳಿ ಉತ್ತರವಿಲ್ಲ. ಪ್ರಧಾನಿಗೆ ಲೆಟ್ರು ಬರ್ದು-ಅಲ್ಲಿಂದ ಉತ್ರ ಬಂದು ವರ್ಷವೇ ಕಳೆದಿದೆ. ಆದ್ರೆ, ಅಧಿಕಾರಿಗಳು-ರಾಜಕಾರಣಿಗಳು ಮಾತ್ರ ಡೋಂಟ್ ಕೇರ್. ಇದು ಮಲೆನಾಡಿಗರ ನೋವಿನ ಕಥೆ.

ಇದು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಕಸ್ಕೆಮನೆ ಗ್ರಾಮ. ಸುಮಾರು 25-30 ಕುಟುಂಬಗಳಿವೆ. ಇವ್ರಿಗೆ ಮೂಲಭೂತ ಸೌಲಭ್ಯ ಅಂದ್ರೆ ಏನೂ ಅಂತಾನೆ ಗೊತ್ತಿಲ್ಲ. ಯಾಕಂದ್ರೆ, ಇವ್ರಿಗೆ ರೋಡಿಲ್ಲ. ಕರೆಂಟ್ ಇಲ್ಲ. ಕೇಳಿ-ಕೇಳಿ ಸುಮ್ಮನಾಗಿದ್ದಾರೆ. ಮನೆಗೆ ಒಂದ್ಕಲ್ ಉಪ್ಪು ಬೇಕಂದ್ರು ಮೂರ್ನಾಲ್ಕು ಕಿ.ಮೀ. ಕಾನನದ ಕಾಲು ದಾರಿಯಲ್ಲಿ ಬರ್ಬೇಕು.

ಏಳೆಂಟು ದಶಕಗಳಿಂದ ಮಾಡದ ಮನವಿಗಳಿಲ್ಲ. ಬೇಡದ ರೀತಿ ಇಲ್ಲ. ಆದ್ರೆ, ಇವ್ರ ಬಗ್ಗೆ ಅಧಿಕಾರಿಗಳಾಗ್ಲಿ, ಜನಪ್ರತಿನಿಧಿಗಳಾಗ್ಲಿ ತಲೆಕೇಡಿಸಿಕೊಂಡಿಲ್ಲ. ಕೊಟ್ಟ ಮನವಿಗಳನ್ನ ಧೂಳ್ ಹಿಡಿಸಿದ್ದಾರೋ ವಿನಃ ಒಂದ್ ಲೈಟ್ ಕಂಬ ಕೂಡ ನೆಟ್ಟು, ಸೌಕರ್ಯದತ್ತ ಮನಸ್ಸು ಮಾಡಿಲ್ಲ. ಇವ್ರು ಪ್ರಧಾನಿ ಮೋದಿಗೂ ಪತ್ರ ಬರೆದಿದ್ದಾರೆ. ಅಲ್ಲಿಂದ ಅಧಿಕಾರಿಗಳಿಗೆ ನೋಟಿಸ್ ಬಂದಿದೆ. ಈಗ ಆ ನೋಟೀಸ್ಗೂ ಧೂಳ್ ಹಿಡಿಸಿದ್ದಾರೆ.

ವಿದ್ಯುತ್‌ಗಾಗಿ ಆಗ್ರಹಿಸಿ ಗ್ರಾಮಸ್ಥರು ಬರೆದಿರುವ ಪತ್ರ.
ರಸ್ತೆ ವಿದ್ಯುತ್‌ಗಾಗಿ ಆಗ್ರಹಿಸಿ ಗ್ರಾಮಸ್ಥರು ಬರೆದಿರುವ ಪತ್ರ.


ಸರ್ಕಾರದ ಬೇಜಾವಾಬ್ದಾರಿ ಕಂಡು ರೋಸಿ ಹೋದ ಹಳ್ಳಿಗರು, ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರಿಗೂ ಲೆಟ್ರು ಬರೆದಿದ್ದಾರೆ. ನಮಗೆ ಏನೂ ಬೇಡ. ಎಲ್ಲಾ ನಾವೇ ಮಾಡ್ಕೊಳ್ತೇವೆ. ನಮ್ಗೆ ರೋಡು-ಕರೆಂಟು ಕೊಟ್ರೆ ಸಾಕು ಅನ್ನೋದು ಇವ್ರ ವಿನಮ್ರ ಮನವಿ. 2018ರಲ್ಲೇ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಕಚೇರಿಯಿಂದ ಇವರಿಗೆ ಉತ್ತರವೂ ಬಂದಿದೆ. ಆದ್ರೆ, ಕೆಲಸವಾಗಿಲ್ಲ.

ಅಧಿಕಾರಿಯೊಬ್ಬರು ಬಂದು ನೋಡಿ ಹೋಗಿದ್ದೇ ಇವ್ರ ಪತ್ರಕ್ಕೆ ಸಿಕ್ಕ ಗೆಲುವು. ಬಂದವರು ಕೂಡ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರಂತೆ. ಇರೋದು ಒಂದೂವರೆ ಕಿ.ಮೀ. ಸಿಎಂಗೆ ಮಾಹಿತಿ ಕೊಟ್ಟಿದ್ದು 4 ಕಿ.ಮೀ ದೂರದ ಗುಡ್ಡಗಾಡು ಪ್ರದೇಶದ ರಸ್ತೆ ನಿರ್ಮಾಣ ಸಾಧ್ಯವಿಲ್ಲ ಎಂದು ವರದಿ ಕೊಟ್ಟಿದ್ದಾರಂತೆ. ಜಿಲ್ಲೆಯಿಂದ ಪ್ರಧಾನಿವರೆಗೂ ಎಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಆದ್ರೆ, ದಶಕಗಳಿಂದಲೂ ಯಾವುದೇ ಜನಪ್ರತಿನಿಧಿಗಳಾಗ್ಲಿ, ಅಧಿಕಾರಿಗಳಾಗ್ಲಿ ಇವ್ರಿಗೆ ಸ್ಪಂದಿಸೇ ಇಲ್ಲ.

ಒಟ್ಟಾರೆ, ಸ್ವಾತಂತ್ರ್ಯ ಬಂದಾಗಿನಿಂದಲೂ ಕತ್ತಲ ಗ್ರಾಮದಲ್ಲಿ ಕಲ್ಲುಗುಡ್ಡೆಯ ದಾರಿ ಮೇಲೆ ಇಲ್ಲಿನ ಜನ ಬದುಕ್ತಿದ್ದಾರೆ. ಒಂದೂವರೆ-ಎರಡು ಕಿ.ಮೀ. ರಸ್ತೆ ಮಾಡಿ ಇವ್ರಿಗೆ ಮೂಲಭೂತ ಸೌಲಭ್ಯ ಕೊಡೋದು ಸರ್ಕಾರಕ್ಕೆ ನೀರು ಕುಡಿದಷ್ಟು ಸುಲಭದ ಕೆಲಸ. ಆದ್ರೆ, ಯಾವ ಕಾರಣಕ್ಕೆ ಸರ್ಕಾರ ಇವ್ರನ್ನ ಲೆಕ್ಕಕ್ಕೇ ಇಟ್ಕೊಂಡಿಲ್ಲ ಅನ್ನೋದು ಯಕ್ಷಪ್ರಶ್ನೆ. ಈ ಸರೌಂಡಿಂಗ್ನಲ್ಲಿ 200 ಳ-250 ಮತಗಳು ಇವೆ. ಆದ್ರು, ರಾಜಕಾರಣಿಗಳಿಗೆ ಯಾಕಿಷ್ಟು ಅಸಡ್ಡೆಯೋ ಗೊತ್ತಿಲ್ಲ. ಇನ್ನಾದ್ರು ಅಧಿಕಾರಿಗಳು ಈ ಗ್ರಾಮಕ್ಕೆ ಮೂಲಭೂತ ಸೌಲಭ್ಯ ನೀಡಲಿ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ : ಕೊರೋನಾವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ ಕೇಂದ್ರ; ವೈರಸ್​ ನಿಯಂತ್ರಣಕ್ಕೆಂದು ರಾಜ್ಯಕ್ಕೆ 84 ಕೋಟಿ ರೂ
First published: