Chikamgaluru: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು; ಕೊರೋನಾ ನಿಯಮಗಳ ಪಾಲಿಸದ ಜನರು

ಪ್ರವಾಸಿಗರ ಈ ಬೇಜಾವಾಬ್ದಾರಿಗೆ ಸರ್ಕಾರದ ನಿರ್ಲಕ್ಷ್ಯವೂ ಕಾರಣವಾಗಿದೆ. ಜಿಲ್ಲಾಡಳಿತ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಮುಳ್ಳಯ್ಯನಗಿರಿಗೆ ಪೊಲೀಸರು ಅಥವಾ ಅಧಿಕಾರಿಗಳನ್ನ ನೇಮಕ ಮಾಡಬೇಕು. ಕಡೆಪಕ್ಷ ಜಾಗೃತಿ ಮೂಡಿಸೋಕಾದ್ರು ಸಿಬ್ಬಂದಿಗಳಿದ್ದರೆ ಒಳ್ಳೆಯದು.

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ

  • Share this:
ಚಿಕ್ಕಮಗಳೂರು(ಮಾ.21): ಎರಡನೇ ಅಲೆಯ ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಮಾಸ್ಕ್  ಹಾಕಿಕೊಳ್ಳಲು ಸರ್ಕಾರ ತಿಳಿಸಿದೆ, ಆದ್ರೆ, ಕಾಫಿನಾಡಿನ ಮುಳ್ಳಯ್ಯನಗಿರಿಗೆ ಬಂದಂತಹ ಪ್ರವಾಸಿಗರಲ್ಲಿ ಬಹುತೇಕರು ಮಾಸ್ಕ್ ಹಾಕದೇ ಪ್ರವಾಸಿ ತಾಣದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಸಾವಿರಗಟ್ಟಲೇ ಏರುತ್ತಿದೆ. ಮಾಸ್ಕ್ ಹಾಕದೇ ಓಡಾಡುತ್ತಿರೋ ಪ್ರವಾಸಿಗರ ವರ್ತನೆಗೆ ಸ್ಥಳೀಯರು ಹಾಗೂ ಕೆಲ ಪ್ರವಾಸಿಗರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಜಾಗದಲ್ಲಿ ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡಿದ್ರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ಆಗ, ನಾವು ಲಾಕ್​ಡೌನ್ ಬೇಡ ಅಂದರೂ ಸರ್ಕಾರಕ್ಕೆ ಬೇರೆ ದಾರಿ ಉಳಿಸಿರುವುದಿಲ್ಲ. ಹಾಗಾಗಿ, ಪ್ರವಾಸಿಗರು ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡರೆ ಎಲ್ಲರಿಗೂ ಒಳ್ಳೆಯದು, ಲಾಕ್‍ಡೌನ್ ಆಗಲ್ಲ ಅನ್ನೋದು ಮಾಸ್ಕ್ ಹಾಕಿದ ಪ್ರವಾಸಿಗರ ಮಾತು.

ಬಾಗಲಕೋಟೆ: ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಕಾಲ ಕೂಡಿ ಬರೋದು ಯಾವಾಗ?

ಪ್ರವಾಸಿಗರ ಈ ಬೇಜಾವಾಬ್ದಾರಿಗೆ ಸರ್ಕಾರದ ನಿರ್ಲಕ್ಷ್ಯವೂ ಕಾರಣವಾಗಿದೆ. ಜಿಲ್ಲಾಡಳಿತ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಮುಳ್ಳಯ್ಯನಗಿರಿಗೆ ಪೊಲೀಸರು ಅಥವಾ ಅಧಿಕಾರಿಗಳನ್ನ ನೇಮಕ ಮಾಡಬೇಕು. ಕಡೆಪಕ್ಷ ಜಾಗೃತಿ ಮೂಡಿಸೋಕಾದ್ರು ಸಿಬ್ಬಂದಿಗಳಿದ್ದರೆ ಒಳ್ಳೆಯದು. ಇಲ್ಲವಾದರೆ, ಸೆಲ್ಫಿಗೆ ಸಮಸ್ಯೆ, ಫೋಟೋಗೆ ಕಷ್ಟ ಅಂತ ಕಾರಣಗಳೇಳಿ ಜನ ಬೇಕಾಬಿಟ್ಟಿ ಓಡಾಡ್ತಾರೆ. ಇಲ್ಲಿ ಯಾರೂ ಇಲ್ಲದಿರೋದೆ ಈ ಪರಿಸ್ಥಿತಿಗೆ ಕಾರಣವಾಗಿದೆ. ಜನ ಲಾಕ್‍ಡೌನ್ ಬೇಡ ಅಂತಾರೆ.

ಮುಂಜಾಗೃತ ಕ್ರಮ ಕೈಗೊಳ್ಳೋದಕ್ಕೆ ಯಾರೂ ತಯಾರಿಲ್ಲ. ಪ್ರವಾಸಿ ತಾಣ ಸೇರಿದಂತೆ ಎಲ್ಲಾ ಕಡೆ ಜನ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿದ್ರೆ ಶೇಕಡ 60-70ರಷ್ಟು ಕೊರೋನಾವನ್ನ ತಡೆಯಬಹುದು ಅನ್ನೋದು ಪ್ರವಾಸಿಗರ ಮಾತು. ಅದು ಸತ್ಯ ಕೂಡ. ಆದ್ರೆ, ಎಲ್ಲಾ ಪ್ರವಾಸಿಗರಲ್ಲೂ ಇದೇ ಮನಸ್ಥಿತಿ ಇಲ್ಲ. ಹಾಗಾಗಿ, ಸರ್ಕಾರ, ಮುಳ್ಳಯ್ಯನಗಿರಿಯಲ್ಲಿ ಅಧಿಕಾರಿಗಳು ಅಥವಾ ಪೊಲೀಸರನ್ನ ನೇಮಿಸಿದ್ರೆ ಭಯದಿಂದಾದ್ರು ಜನ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವಂತಾಗುತ್ತದೆ. ಜನ ಹೀಗೆ ಬೇಜಾವಾಬ್ದಾರಿ ತೋರಿದ್ರೆ ಸರ್ಕಾರಕ್ಕೆ ಲಾಕ್‍ಡೌನ್ ಬಿಟ್ಟು ಬೇರೆ ದಾರಿ ಇಲ್ಲ ಅಂತಾರೆ ಪ್ರವಾಸಿಗರು.

ಒಟ್ಟಾರೆ, ಮಕ್ಕಳಿಗೆ ಆನ್‍ಲೈನ್ ಶಿಕ್ಷಣ, ಪರೀಕ್ಷೆ, ಬಿಸಿಲು ಸೇರಿದಂತೆ ವಿವಿಧ ಕಾರಣಗಳಿಂದ ಕಾಫಿನಾಡ ಸೌಂದರ್ಯ ಸವಿಯೋಕೆ ಬರ್ತಿರೋರ ಸಂಖ್ಯೆ ತುಸು ಕಡಿಮೆಯೇ. ಆದ್ರೆ, ಬರುತ್ತಿರುವ ಪ್ರವಾಸಿಗರು ಕೂಡ ತಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವು ಮುಖ್ಯ ಎಂದು ಯೋಚಿಸಿ ಯಾರೂ ಮಾಸ್ಕ್ ಹಾಕ್ತಿಲ್ಲ. ಇದು ಪ್ರವಾಸಿಗರಲ್ಲೇ ಬೇಸರ ಮೂಡಿಸಿದೆ. ದಿನಕಳೆದಂತೆ ಸೆಕೆಂಡ್ ವೇವ್ ಕೊರೋನಾ ಕೇಕೆ ಹಾಕ್ತಿದೆ. ಪ್ರವಾಸಿಗರು ಸೋಮಾರಿತನ ತೋರಿಸುತ್ತಿದ್ದಾರೆ. ಮುಂದೇನಾಗುತ್ತೋ ಗೊತ್ತಿಲ್ಲ. ಆದ್ರೆ, ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಬಹಳಷ್ಟಿದೆ. ಇಲ್ಲವಾದರ, ಪರಿಸ್ಥಿತಿ ಕೈ ಮೀರೋದು ಗ್ಯಾರಂಟಿ.
Published by:Latha CG
First published: