ಉಕ್ಕಿ ಹರಿಯುವ ಭದ್ರೆಯಲ್ಲಿ ಹುಟ್ಟು ಹಾಕಿಯೇ ಜೀವನ ನಡೆಸಬೇಕು ಇಲ್ಲಿನ ಗ್ರಾಮಸ್ಥರು

news18
Updated:August 28, 2018, 3:46 PM IST
ಉಕ್ಕಿ ಹರಿಯುವ ಭದ್ರೆಯಲ್ಲಿ ಹುಟ್ಟು ಹಾಕಿಯೇ ಜೀವನ ನಡೆಸಬೇಕು ಇಲ್ಲಿನ ಗ್ರಾಮಸ್ಥರು
news18
Updated: August 28, 2018, 3:46 PM IST
ವಿರೇಶ್​ ಜಿ. ಹೊಸೂರ್​, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು (ಆ.28): ಮಳೆಗಾಲ ಬಂತೆಂದರೆ ಸಾಕು ಕಾಫಿನಾಡಿನಲ್ಲಿ ನದಿಗಳು ಉಕ್ಕಿ ಹರಿಯುತ್ತ, ಅಪಾಯದ ಮುನ್ಸೂಚನೆ ನೀಡುತ್ತಿರುತ್ತವೆ. ಆದರೆ ಇಲ್ಲೊಂದು ಗ್ರಾಮಕ್ಕೆ ಮಾತ್ರ ಈ ನದಿ ದಾಟದೇ ಬದುಕು ಅಸಾಧ್ಯವಾಗಿದೆ.

ಜಿಲ್ಲೆಯ  ಮೂಡಿಗೆರೆ ತಾಲೂಕಿನ ಮಾಗುಂಡಿ ಸಮೀಪದ ಹೊಳೆಕೂಡಿ ಗ್ರಾಮ ಇಂದಿಗೂ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಇಲ್ಲಿನ ರಸ್ತೆ ಮಾರ್ಗವನ್ನು ಹೊಂದಿರದೆ . ಭದ್ರೆಯನ್ನು ದಾಟಿ ಜೀವನ ನಡೆಸುತ್ತಿದ್ದಾರೆ.

1974ರಲ್ಲಿ ಇಂದಿರಾ ಗಾಂಧಿ ಘೋಷಿಸಿದ ಊಳುವವನೇ ಭೂಮಿಯ ಒಡೆಯ ಕಾಯ್ದೆಯ ಮೂಲಕ ಈ ಗ್ರಾಮದಲ್ಲಿ ಭೂಮಿ ಪಡೆದ ಜನರು ಹೊಸ ಬದುಕು ನಡೆಸುವ ಕನಸಿನೊಂದಿಗೆ ಈ ಗ್ರಾಮಕ್ಕೆ ಬಂದರು. ಆದರೆ,  ಅವರ ಕನಸು ಇಲ್ಲಿಯವರೆಗೂ ನನಸಾಗಿಲ್ಲ.ಭದ್ರಾ ನದಿಯ ತಟದಲ್ಲಿ ಇರುವ ಈ ಗ್ರಾಮಸ್ಥರು ಯಾವುದೇ ಕೆಲಸಕ್ಕೂ ಕೂಡ ನದಿ ದಾಟಬೇಕಾಗಿರುವುದು ಅನಿವಾರ್ಯವಾಗಿದೆ. ಅಲ್ಲದೇ ಇವರ ಬದುಕು- ಸಾವು ಆಧಾರಿಸಿರುವುದು ಕೂಡ ತೆಪ್ಪದಲ್ಲಿ. ನದಿಗೆ ಇಲ್ಲಿಯವರೆಗೂ ಸೇತುವೆ ಕಟ್ಟಿಕೊಡುತ್ತೇವೆ ಎಂದು ಜನಪ್ರತಿನಿಧಿಗಳ ಭರವಸೆಯಲ್ಲಿಯೇ ಬದುಕುತ್ತಿರುವ ಇವರಿಗೆ ಈ ಆಶ್ವಾಸನೆಗಳು ಇಂದಿಗೂ ಮರೀಚಿಕೆಯಾಗಿದೆ.

ಕಳೆದ 20 ವರ್ಷಗಳಿಂದಲೂ ಈ ಬಗ್ಗೆ ಸರ್ಕಾರಕ್ಕೆ ಜನಪ್ರತಿನಿಧಿಗಳು ಮನವಿ ಮಾಡುತ್ತಾ ಬಂದರೂ ಪ್ರಯೋಜನವಾಗಿಲ್ಲ.  ಜನ ಪ್ರತಿನಿಧಿಗಳ ನಂಬಿ ಕುಳಿತರೆ ಬದುಕು ಅಸಾಧ್ಯ ಎಂದು ತಾವೇ  ನದಿ ದಾಟಿ ನಗರದೊಂದಿಗೆ ಸಂಪರ್ಕ ಬೆಳೆಸಿರುವ ಇಲ್ಲಿನ ಜನರಿಗೆ ತೆಪ್ಪವೊಂದೆ ಆಸರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತೆಪ್ಪದ ಹುಟ್ಟು ಹಾಕಿ ದಾಡ ಸೇರುವರು. ಈ ಮಧ್ಯೆ ಯಾವುದೇ ಅನಾಹುತ ಸಂಭವಿಸಿದರು ಅವರೇ ಜವಾಬ್ದಾರರಾಗಿರುತ್ತಾರೆ.
Loading...

ಇಷ್ಟೆಲ್ಲಾ ಕಷ್ಟಪಡುತ್ತಿರುವು ಇವರಿಗೆ ಯಾವುದೇ ಪರ್ಯಾಯ ಮಾರ್ಗ ಇಲ್ಲದಂತಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇರೇ ದಾರಿ ಇದೆ. ಆದರೆ ಈ ದಾರಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪರ್ಯಾಯ ಮಾರ್ಗ ಕಾಣದೇ ಇಲ್ಲಿನ ಜನರು ನದಿ ಮೂಲಕವೇ ಹೊರ ಜಗತ್ತಿನೊಂದಿಗೆ ಸಂಪರ್ಕಿಸಬೇಕಾಗಿದೆ.ಇಲ್ಲಿನವರ ಸ್ಥಿತಿ ಅರಿತು ಮೂಡಿಗೆರೆ ಶಾಸಕ ಕುಮಾರಸ್ವಾಮಿ, ಈ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಜನರ ಸಮಸ್ಯೆ ಆಲಿಸಿದ್ದಾರೆ. ಗ್ರಾಮಕ್ಕೆ ಶೀಘ್ರದಲ್ಲಿಯೇ ಮಾರ್ಗ ಕಲ್ಪಿಸುವುದಾಗಿ ಕೂಡ ಆಶ್ವಾಸನೆ ನೀಡಿದ್ದಾರೆ.

ಈ ಭರವಸೆ ಈ ಹಿಂದೆ ನೀಡಿದಂತೆ ಹುಸಿಯಾಗದೇ ಇರದೆ ಇರಲಿ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿದ್ದು, ನದಿ ದಾಟುವುದು ಅನಿವಾರ್ಯವಾಗಿದೆ. ಈಗಲಾದರೂ ಶಾಸಕರು ಮನಸ್ಸು ಮಾಡಿ ನಮಗೆ ದಾರಿ ತೋರಿಸಿದರೆ ನಾವು ಕೂಡ ನೆಮ್ಮದಿಯಿಂದ ಬದುಕುತ್ತೇವೆ ಎನ್ನುತ್ತಾರೆ ಇಲ್ಲಿನ ಜನರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...