• Home
  • »
  • News
  • »
  • state
  • »
  • Love Jihad: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಕಿರುಕುಳ; ಸಂತ್ರಸ್ತೆಯಿಂದ ದೂರು

Love Jihad: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಕಿರುಕುಳ; ಸಂತ್ರಸ್ತೆಯಿಂದ ದೂರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್​ ರೋಫ್​ ವಿರುದ್ಧ ಸಂತ್ರಸ್ತೆ ಸೋದರ ದೂರು ದಾಖಲಿಸಿದ್ದರು. ಈ ಸಂಬಂಧ ರೋಫ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

  • Share this:

ಚಿಕ್ಕಮಗಳೂರಿನ (Chikkamagaluru) ಲವ್ ಜಿಹಾದ್ ಪ್ರಕರಣಕ್ಕೆ (Love Jihad Case) ಸಂಬಂಧಿಸಿದಂತೆ ಸಂತ್ರಸ್ತೆ ಹರಿಹರಪುರ ಪೊಲಸ್ ಠಾಣೆಗೆ (Hariharapur Police Station) ದೂರು ನೀಡಿದ್ದಾರೆ. ಮೂರು ವರ್ಷದಿಂದ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದು ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಮಹಮ್ಮದ್ ರೌಫ್ ಎಂಬಾತ ಬಲವಂತವಾಗಿ ಅಮಲು ಪದಾರ್ಥಗಳ ಜ್ಯೂಸ್ ಕುಡಿಸಿ ತಾಳಿ ಕಟ್ಟಿದ್ದನು. ನಂತರ ದೈಹಿಕವಾಗಿ ಬಳಸಿಕೊಂಡ ವಿಡಿಯೋವನ್ನ (Video) ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಡುವ ಬೆದರಿಕೆ ಹಾಕಿದ್ದನು. ಸದ್ಯ ವಿದೇಶದಲ್ಲಿರುವ ರೌಫ್​ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾನೆ. ಸಂತ್ರಸ್ತೆ ರೌಫ್ ಜೊತೆಯಲ್ಲಿ ಇರ್ಫಾನ್, ಸೈಫ್ ಸೇರಿದಂತೆ ನಾಲ್ಕು ಜನರ ಮೇಲೆ ದೂರು ದಾಖಲಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್​ ರೋಫ್​ ವಿರುದ್ಧ ಸಂತ್ರಸ್ತೆ ಸೋದರ ದೂರು ದಾಖಲಿಸಿದ್ದರು. ಈ ಸಂಬಂಧ ರೋಫ್ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.


ಯುವತಿಯ ಅಣ್ಣನ ದೂರಿನ ಮೇರೆಗೆ ಮೊಹಮ್ಮದ್​ ರೌಫ್, ಇನ್ಸ್​ಪೆಕ್ಟರ್​ ಜಾಕೀರ್​ ಹುಸೇನ್​​ ವಿರುದ್ಧವೂ ದೂರು ದಾಖಲಾಗಿದೆ.


ಲವ್​ ಜಿಹಾದ್ ಪಿತೂರಿ


ತನ್ನ ಸಹೋದರಿಯ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣ ದೂರು ದಾಖಲಿಸಿದ್ದಾರೆ.


ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ ಎಂದು ಸೆನ್​ ಠಾಣೆ ಇನ್ಸ್​ಪೆಕ್ಟರ್​ ಜಾಕೀರ್ ಹುಸೇನ್ ಮೇಲೆಯೂ ದೂರು ದಾಖಲಿಸಿದ್ದರು.  ಯುವತಿಯ ಸಹೋದರ ಎಸ್​ಪಿ ಅವರಿಗೂ ಲಿಖಿತ ದೂರು ನೀಡಿದ್ದಾರೆ.


ಲವ್ ಜಿಹಾದ್ ಎಂದು ಮದ್ವೆ ನಿಲ್ಲಿಸಿದ ಹಿಂದೂ ಸಂಘಟನೆಗಳು


ಸಬ್ ರಿಜಿಸ್ಟ್ರಾರ್​ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ (Hindu Girl)-ಮುಸ್ಲಿಂ ಹುಡುಗ (Muslim Boy) ವಿವಾಹ (Marriage) ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು (Hindu organization), ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿತ್ತು.


ಇದನ್ನೂ ಓದಿ:  Girl Suicide: ಮದುವೆ ಆಗಲು ಮತಾಂತರದ ಕಂಡಿಷನ್; ಲವ್ ಜಿಹಾದ್​ಗೆ ಯುವತಿ ಬಲಿ; ಆರೋಪಿ ಪರಾರಿ


ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ದೂರಿನನ್ವಯ ಹಿಂದೂಪರ ಸಂಘಟನೆ ನಾಲ್ವರು ಕಾರ್ಯಕರ್ತರ ವಿರುದ್ದ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ವಿಚಾರಣೆ ಬಳಿಕ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಯುವತಿ ತಾನು ಇಷ್ಟಪಟ್ಟು ಮದುವೆ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದರು.


ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ ತಾಯಿ


ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಯುವತಿ ತಾಯಿ ಶೋಭಾ, ನನಗೆ ಮಗಳು ಅಂದ್ರೆ ಜೀವ. ಆಕೆಯ ಪ್ರೇಮ ವಿವಾಹಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಮಗಳು ಮತ್ತು ಅಳಿಯನಿಗೆ ತೊಂದರೆ ಕೊಡಬೇಡಿ. ಹಾರ ಬದಲಿಸಿಕೊಂಡು ನಮ್ಮ ಲಕ್ಷ್ಮಿಪುರ ಗ್ರಾಮಕ್ಕೆ ಬರಲಿ, ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು.


ಇದನ್ನೂ ಓದಿ:  Serial Actress: ಲವ್ ಜಿಹಾದ್ ಬಲೆಗೆ ಸಿಲುಕಿದ್ರಾ ಕನ್ನಡ ಸೀರಿಯಲ್ ನಟಿ!? ಮದುವೆಯಾಗಿ ಚಿತ್ರ ಹಿಂಸೆ ಕೊಟ್ಟ ಅಮ್ಜದ್ ಖಾನ್!


ನಾಲ್ವರ ವಿರುದ್ಧ ಪ್ರಕರಣ ದಾಖಲು


ನೈತಿಕ ಪೊಲೀಸ್ ಗಿರಿ ದೂರಿನ್ವಯ ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಸಬ್ ರೆಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಹೋದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ.


ಯುವಕ ಮತ್ತು ಯುವತಿ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಸಮೀಪ ಲಕ್ಷ್ಮೀಪುರದ ನಿವಾಸಿಗಳು ಎಂದು ಎಸ್​ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದರು.

Published by:Mahmadrafik K
First published: