ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಕಗ್ಗೊಲೆ


Updated:June 23, 2018, 8:29 AM IST
ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಕಗ್ಗೊಲೆ
ಚಿಕ್ಕಮಗಳೂರಿನಲ್ಲಿ ಹತ್ಯೆಯಾದ ಬಿಜೆಪಿ ಮುಖಂಡ ಮೊಹಮ್ಮದ್ ಅನ್ವರ್

Updated: June 23, 2018, 8:29 AM IST
- ರಾಜಕುಮಾರ, ನ್ಯೂಸ್18 ಕನ್ನಡ

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಚಿಕ್ಕಮಗಳೂರಿನ ಸ್ಥಳೀಯ ಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೆ ರಾಜಕೀಯ ಕಾರಣ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ತಣ್ಣಗಿದ್ದ ಕಾಫಿನಾಡಿನ ರಾಜಕೀಯಕ್ಕೆ ಈಗ ಮತ್ತೆ ನೆತ್ತರು ಮೆತ್ತಿಕೊಂಡಿದೆ. ಚಿಕ್ಕಮಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಅವರನ್ನ ಹಂತಕರು ಗೌರಿ ಕಾಲುವೆ ಬಳಿ ಚಾಕುವಿನಿಂದ ಇರಿದು ಕೊಂದುಹಾಕಿದ್ದಾರೆ. ನಗರದ ಗೌರಿ ಕಾಲುವೆ ಬಳಿ ಈ ಹತ್ಯೆ ನಡೆದಿದೆ.

ರಾಜಕೀಯ ಕಾರಣಕ್ಕೆ ಕೊಲೆ ಮಾಡಿದ್ದಾರೆ ಅನ್ನೋದು ಬಿಜೆಪಿಯವ್ರ ಆರೋಪ. ಆದರೆ, ಅನ್ವರ್ ಹತ್ಯೆಗೆ ಹಳೆ ವೈಷಮ್ಯ ಕಾರಣ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಪ್ರಕರಣವೊಂದರಲ್ಲಿ ಅನ್ವರ್ ವಿರೋಧಿಗಳಿಗೆ ಜೈಲು ಶಿಕ್ಷೆಯಾಗಿತ್ತು. ಇದೇ ವೈಷಮ್ಯದಲ್ಲಿ ಅನ್ವರ್ ಹತ್ಯೆಗೆ ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಈ ಬಾರಿ ಕೊಂದು ಹಾಕಿದ್ದಾರೆ ಅಂತ ಸ್ಥಳೀಯ ನಾಯಕರು ಆರೋಪಿಸಿದ್ದಾರೆ..

ಇನ್ನೊಂದೆಡೆ ರಾಜಕೀಯ ಕಾರಣಕ್ಕೆ ಅನ್ವರ್ ಹತ್ಯೆ ನಡೆದಿದೆ ಅನ್ನೋದು ಕೆಲ ಸ್ಥಳೀಯ ಬಿಜೆಪಿ ನಾಯಕರ ಆರೋಪ. ಅನ್ವರ್ ಅವರಿಂದಾಗಿ ಚಿಕ್ಕಮಗಳೂರಿನ ಮುಸ್ಲಿಮರು ಬಿಜೆಪಿ ಪರವಾಗಿದ್ದರು. ಇದನ್ನ ಸಹಿಸದೇ ಕೊಂದು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ.

ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಈ ಹತ್ಯೆಯನ್ನು ಖಂಡಿಸಿದ್ದು, ಮೂಲಭೂತವಾದಿಗಳಿಂದಲೇ ಈ ಕೃತ್ಯ ನಡೆದಿದೆ ಎಂದು ಅನುಮಾನಿಸಿ ಟ್ವೀಟ್ ಮಾಡಿದ್ದಾರೆ.ಯಾರೇ ಕೊಲೆ ಮಾಡಿದ್ರೂ ಹಂತಕರನ್ನ ಶೀಘ್ರದಲ್ಲೇ ಬಂಧಿಸಬೇಕೆಂದು ಎಸ್​ಪಿ ಅಣ್ಣಾಮಲೈಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ತಪ್ಪಿದ್ರೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...