ಅನ್ವರ್ ಕೊಲೆಯಾಗಿ 200 ದಿನವಾದ್ರೂ ಆರೋಪಿಗಳ ಸುಳಿವಿಲ್ಲ – ಪ್ರಧಾನಿ ಸೇರಿ ಹಲವರಿಗೆ ಪತ್ರ ಬರೆದ ಬಿಜೆಪಿ ಮುಖಂಡನ ಸೋದರ

ಜನವರಿ 25 ರೊಳಗೆ ಆರೋಪಿಗಳನ್ನ ಬಂಧಿಸದಿದ್ರೆ ಉಪವಾಸ ಸತ್ಯಾಗ್ರಹ ಮಾಡೋದಾಗಿ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಅನ್ವರ್ ಕುಟುಂಬಸ್ಥರು.

Vijayasarthy SN | news18
Updated:January 11, 2019, 6:34 PM IST
ಅನ್ವರ್ ಕೊಲೆಯಾಗಿ 200 ದಿನವಾದ್ರೂ ಆರೋಪಿಗಳ ಸುಳಿವಿಲ್ಲ – ಪ್ರಧಾನಿ ಸೇರಿ ಹಲವರಿಗೆ ಪತ್ರ ಬರೆದ ಬಿಜೆಪಿ ಮುಖಂಡನ ಸೋದರ
ಅನ್ವರ್
Vijayasarthy SN | news18
Updated: January 11, 2019, 6:34 PM IST
- ವೀರೇಶ್ ಜಿ. ಹೊಸೂರ್,

ಚಿಕ್ಕಮಗಳೂರು(ಜ. 11): ಅದು ಅಂತಿಂಥ ಮರ್ಡರ್ ಅಗಿರಲಿಲ್ಲ. ಆ ರೀತಿ ಕೊಲ್ಲಬೇಕಂದ್ರೆ ಗುಂಡಿಗೆ ಕೂಡ ಎರಡಿರಬೇಕು. ಯಾಕಂದ್ರೆ, ಓರ್ವ ವ್ಯಕ್ತಿಯನ್ನ ನಡು ರಸ್ತೆಯಲ್ಲಿ ಡ್ರ್ಯಾಗನ್ನಿಂದ 15 ಬಾರಿ  ಇರಿದು ಕೊಲ್ಲೋದಂದ್ರೆ ಸುಮ್ನೆನ. ಆ ಬರ್ಬರ ಕೊಲೆಯಿಂದ ಕಾಫಿನಾಡೇ ಬೆಚ್ಚಿ ಬಿದ್ದಿತ್ತು. ಆದ್ರೆ, ಅಂದು ಆ ಅನ್ವರ್ ಕೊಲೆ ನಡೆದು 203 ದಿನಗಳೇ ಕಳೆದರೂ ಕೊಲೆಗಡುಕರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರೇ ಸೋತಿದ್ದಾರೆ. ಆರು ತಿಂಗಳಿಂದ ತನಿಖೆ ನಿಂತಿಲ್ಲ. ಕೊಲೆಗಡುಕರು ಸುಳಿವು ಇಂಚಷ್ಟು ಇಲ್ಲ.

ಮೊಹಮ್ಮದ್ ಅನ್ವರ್ ಚಿಕ್ಕಮಗಳೂರಿನ ಬಿಜೆಪಿ ಮುಖಂಡ. ಶಾಸಕ ಸಿಟಿ ರವಿ ಆಪ್ತ ಕೂಡ. ಜೂನ್ 22ರಂದು ಸಂಬಂಧಿಕರ ಮನೆಗೆ ಹೋಗುವಾಗ ದಾರಿ ಮಧ್ಯೆ ಸಂಚು ರೂಪಿಸಿದ್ದ ಹಂತಕರ ಕೈಗೆ ಸಿಕ್ಕಿ ಸತ್ತೇ ಹೋಗಿದ್ದ. ಕೊಲೆಯ ಮಾದರಿ ಕಂಡು ಕಾಫಿನಾಡಿಗೂ ಕೇರಳ, ಕರಾವಳಿ ಮಾದರಿಯ ಹತ್ಯಾ ರಾಜಕಾರಣ ಕಾಲಿಟ್ಟಿದ್ಯಾ ಎಂಬ ಅನುಮಾನ ವ್ಯಕ್ತವಾಗಿತ್ತು. ಅಂದು ಕಾಫಿನಾಡಿ ಕಂಗಾಲಾಗಿತ್ತು. ನಗರದ ಗೌರಿಕಾಲುವೆ ಬಡಾವಣೆ ಬಳಿ ಬೈಕಲ್ಲಿ ಹಂತಕರು ಡ್ರ್ಯಾಗನ್​ನಿಂದ ಅನ್ವರ್ ದೇಹದ ಮೇಲೆ ಹದಿನೈದು ಬಾರಿ ಇರಿದು, ಎಸ್ಕೇಪ್ ಆಗಿದ್ರು. ಆದ್ರೆ, ಕೊಲೆ ಮಾಡಿದ್ಯಾರು? ಮಾಡ್ಸಿದ್ಯಾರು? ಯಾಕೆ ಕೊಲೆಯಾದ? ಅನ್ನೋದು ಅಂದಿಗೆ ನಿಗೂಢವಾಗಿತ್ತು. ಇಂದಿಗೂ ಕೂಡ ಅದು ನಿಗೂಢವಾಗಿಯೇ ಇದೆ. ಯಾಕಂದ್ರೆ, ಅನ್ವರ್ ಕೊಲೆಯಾಗಿ 200 ದಿನಗಳೇ ಕಳೆದರೂ ಹಂತಕರ ಸುಳಿವು ಸಿಕ್ಕಿಲ್ಲ. ಅನುಮಾನವಿದ್ದವರನ್ನ ತನಿಖೆ ಮಾಡಿದರೂ ಪ್ರಯೋಜವಾಗಿಲ್ಲ. ಉತ್ತರ ತನಿಖೆ ನಡೆಯುತ್ತಿದೆ ಅನ್ನೋದಷ್ಟೇ ಪೊಲೀಸರ ಉತ್ತರ. ಅದಕ್ಕಾಗಿ ಅನ್ವರ್ ಕುಟುಂಬ ಮೋದಿ, ಅಮಿತ್ ಶಾ, ಸಿಎಂ, ಗೃಹ ಮಂತ್ರಿ, ರಾಜ್ಯಪಾಲ, ಜಿಲ್ಲೆಯ ಶಾಸಕರು, ಎಂಎಲ್​ಸಿಗಳು ಸೇರಿದಂತೆ ಎಲ್ಲರಿಗೂ ಪತ್ರ ಬರೆದು ನ್ಯಾಯಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ.

ಕೊಲೆ ಸಂಬಂಧ ಅನ್ವರ್ ಸಹೋದರ ಕಬೀರ್ ಅನುಮಾನವಿರುವ ಹೆಸರನ್ನ ಉಲ್ಲೇಖಿಸಿ ಪೊಲೀಸರಿಗೆ ದೂರು ನೀಡಿದ್ದರು.

8 ವರ್ಷದ ಹಿಂದೆ ಮಸೀದಿ ವಿಚಾರವಾಗಿ ಗಲಾಟೆಯಾಗಿತ್ತು. 5 ಜನ ಉಪ್ಪಳ್ಳಿಯಲ್ಲಿ ಅನ್ವರ್ ಮೇಲೆ ಅಟ್ಯಾಕ್ ಮಾಡಿದ್ರು. ಆ ಕೇಸಲ್ಲಿ ನಮಗೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ನಿಂದಲೂ ನ್ಯಾಯ ಸಿಕ್ಕಿತ್ತು. ಈ ಗಲಾಟೆಯಲ್ಲಿದ್ದ ಕೆಲವರಿಗೆ ಜಾಮೀನು ಸಿಕ್ಕಿದ್ರೆ, ಇನ್ನು ಕೆಲವರು ಜೈಲಲ್ಲಿದ್ದಾರೆ. ಕೋರ್ಟ್ ತೀರ್ಪು ಬಂದ ಮೇಲೂ ನಿನ್ನನ್ನು ಕೊಲೆ ಮಾಡ್ತೀವಿ ಎಂದಿದ್ರು ಅಂತ ಅನ್ವರ್ ಸಹೋದರ ಅನುಮಾನವಿದ್ದೋರ ಮೇಲೆ ದೂರು ಕೊಟ್ಟಿದ್ದರು. ಆ ಶಂಕಿತರನ್ನು ಪೊಲೀಸರು ವಿಚಾರಣೆಗೊಳಪಡಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆದ್ರೀಗ, ಮರ್ಡರ್ ಆಗಿ 200 ದಿನ ಕಳೆದ್ರು ಹಂತಕರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಸೋತು ಕೈಚೆಲ್ಲಿರುವಂತಿದೆ. ಪೊಲೀಸರ ನಿರ್ಲಕ್ಷ್ಯ ಕಂಡ ಅನ್ವರ್ ಕುಟುಂಬ ದೇಶದ ಉನ್ನತ ವ್ಯಕ್ತಿಗಳಿಗೆಲ್ಲಾ ಪತ್ರ ಬರೆದು ನ್ಯಾಯದ ಮೊರೆ ಹೋಗಿದ್ದಾರೆ. ಜನವರಿ 25ರವರೆಗೆ ಗಡುವು ನೀಡಿರೋ ಅನ್ವರ್ ಕುಟುಂಬ 25ರ ನಂತರ ಅಮರಣಾಂತ ಉಪವಾಸ ಕೂರುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪೊಲೀಸರು 3 ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ, ಆದ್ರೆ, 200 ದಿನವಾದ್ರು ಹಂತಕರ ಸುಳಿವು ಸಿಕ್ಕಿಲ್ಲ. ಕುಟುಂಬಸ್ಥರ ನೋವು ಮಾಸಿಲ್ಲ. ಹತ್ಯೆಯ ಹಿಂದೆ ರಾಜಕೀಯ ಕಾರಣವಿದ್ಯೋ ಅಥವಾ ವೈಯಕ್ತಿಕ ಕಾರಣವಿದ್ಯೋ ಅನ್ನೋದು ಯಕ್ಷ ಪ್ರಶ್ನೆಯಾಗಿದ್ದು, ಪೊಲೀಸರ ತನಿಖೆಯಿಂದಷ್ಟೆ ಸತ್ಯ ತಿಳಿಯಬೇಕಿದೆ. ಆದ್ರೆ, ಪೊಲೀಸರು ಶೀಘ್ರವೇ ಕೊಲೆಗಾರರನ್ನ ಬಂಧಿಸದಿದ್ದರೆ ದುಷ್ಕರ್ಮಿಗಳಿಗೆ ಪೊಲೀಸ್ ಅಂದ್ರೆ ಭಯವೇ ಇಲ್ಲದಂತಾಗೋದ್ರಲ್ಲಿ ಅನುಮಾನವಿಲ್ಲ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...