ನಿರ್ಗತಿಕರಿಗಾಗಿ ನಿರಾಶ್ರಿತರ ಕೇಂದ್ರ ಆರಂಭಿಸಿದ ಚಿಕ್ಕಮಗಳೂರಿನ ಯುವಕರು; ಹಸಿದವರಿಗೆ ಅನ್ನ ನೀಡುತ್ತಿರುವ ಕಾಫಿನಾಡಿಗರು

ಯಾರೂ ಉಪವಾಸ ಇರಬಾರದು ಎಂದು ಚಿಕ್ಕಮಗಳೂರಿನ ಮಲೆನಾಡು ಕ್ರಿಶ್ಚಿಯನ್ ಅಸೋಸಿಯೇಶನ್​ ಯುವಕರು ಚಿಕ್ಕಮಗಳೂರು ನಗರದಲ್ಲಿ ನಿರಾಶ್ರಿತರ ಕೇಂದ್ರ ತೆರೆದು ಚಿಕ್ಕಮಗಳೂರಿನ ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ.

ಚಿಕ್ಕಮಗಳೂರಿನ ನಿರಾಶ್ರಿತರ ಕೇಂದ್ರ

ಚಿಕ್ಕಮಗಳೂರಿನ ನಿರಾಶ್ರಿತರ ಕೇಂದ್ರ

  • Share this:
ಚಿಕ್ಕಮಗಳೂರು : ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಈಗಾಗಲೇ ರಾಜ್ಯ ತತ್ತರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಸರ್ಕಾರ ಜನತಾ ಕಫ್ರ್ಯೂನಿಂದ ಲಾಕ್‍ಡೌನ್‍ನತ್ತ ಮುಖ ಮಾಡಿದೆ. ಜನತಾ ಕಫ್ರ್ಯೂ ಜಾರಿಗೆ ಬಂದ ಮೇಲೆ ನಿರಾಶ್ರಿತರು ನಿರ್ಗತಿಕರು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿದ್ದಾರೆ. ಹಾಗಾಗಿ, ಯಾರೂ ಉಪವಾಸ ಇರಬಾರದು ಎಂದು ಚಿಕ್ಕಮಗಳೂರಿನ ಮಲೆನಾಡು ಕ್ರಿಶ್ಚಿಯನ್ ಅಸೋಸಿಯೇಶನ್​ ಯುವಕರು ಚಿಕ್ಕಮಗಳೂರು ನಗರದಲ್ಲಿ ನಿರಾಶ್ರಿತರ ಕೇಂದ್ರ ತೆರೆದು ಚಿಕ್ಕಮಗಳೂರಿನ ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ.

ಹೊರ ರಾಜ್ಯ-ಜಿಲ್ಲೆಯಿಂದ ಕೆಲಸಕ್ಕೆ ಬಂದು ವಾಪಸ್ಸಾಗದವರು, ಭಿಕ್ಷಕರು ಸೇರಿದಂತೆ ಎಲ್ಲರಿಗೂ ವಸತಿ-ಊಟದ ಸೌಲಭ್ಯ ಕಲ್ಪಿಸಿದ್ದಾರೆ. ಚಿಕ್ಕಮಗಳೂರಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಈಗಾಗಲೇ 25ಕ್ಕೂ ಹೆಚ್ಚು ನಿರಾಶ್ರಿತರು ನೆಲೆ ಕಂಡುಕೊಂಡಿದ್ದಾರೆ. ಇಂದು ಮತ್ತಷ್ಟು ಜನ ಈ ಕೇಂದ್ರಕ್ಕೆ ಬರಲಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಬಿಹಾರ, ಕೇರಳ, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ರಾಜ್ಯದ ಜನರೂ ಇದ್ದಾರೆ. ಲಾಕ್‍ಡೌನ್ ಮುಗಿಯುವವರೆಗೂ ಎಲ್ಲರನ್ನೂ ನೋಡಿಕೊಂಡು ಅಮೇಲೆ ಊರಿಗೆ ಕಳಿಸಿಕೊಡುವುದು ಅಥವಾ ಇಲ್ಲೇ ಕೆಲಸ ಕೊಡಿಸಲು ಸಂಸ್ಥೆ ಮುಂದಾಗಿದೆ. ಕೊರೋನಾ ಮೊದಲ ಅಲೆಯಲ್ಲೂ ಇಲ್ಲಿ ಸುಮಾರು 60ಕ್ಕೂ ಹೆಚ್ಚು ನಿರಾಶ್ರಿತರಿದ್ದರು. ಅವರಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸಿದ್ದರು.

ಇದನ್ನೂ ಓದಿ: Karnataka Lockdown: ರಾಜ್ಯದಲ್ಲಿ ಕಂಪ್ಲೀಟ್​​​ ಲಾಕ್​​​​​ಡೌನ್​ ; ಮೇ 10ರಿಂದ 2 ವಾರ ಕರ್ನಾಟಕ ಸ್ತಬ್ಧ!

ಕಳೆದ ಬಾರಿಯಂತೆ ಈ ಬಾರಿಯೂ ಬೀದಿಬದಿಯ ಭಿಕ್ಷುಕರು, ನಿರಾಶ್ರಿತರು, ನಿರ್ಗತಿಕರು, ಅನಾಥರಿಗಾಗಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಜಿಲ್ಲಾಡಳಿತದ ಸಹಕಾರದಿಂದ ನಿರಾಶ್ರಿತರ ಕೇಂದ್ರವನ್ನು ಆರಂಭಿಸಲಿದೆ, ಕಲ್ಯಾಣನಗರ ಬೈಪಾಸ್ ರಸ್ತೆಯಲ್ಲಿರುವ  ಚಿಕ್ಕಮಗಳೂರು ಕಾಫಿ ಕ್ಯೂರಿಂಗ್ ಹಿಂಭಾಗದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ ನಿರಾಶ್ರಿತರ ಕೇಂದ್ರವನ್ನು ಆರಂಭಿಸಿದ್ದಾರೆ, ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಊಟದ ವ್ಯವಸ್ಥೆ, ಮಲಗುವ ವ್ಯವಸ್ಥೆ, ಅವರಿಗೆ ಅವಶ್ಯಕತೆ ಇರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ,  ಸ್ನಾನದ ವ್ಯವಸ್ಥೆ, ಬಟ್ಟೆಯ ವ್ಯವಸ್ಥೆ, ಬೆಡ್ ಶೀಟ್, ಟವಾಲ್ ಸೇರಿದಂತೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡಲಾಗುತ್ತದೆ ಎಂದಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ:7411749728 ಮೂಲಕ ಸಂಪರ್ಕಿಸಬಹುದಾಗಿದೆ.

ಇನ್ನು ಕಳೆದ ವರ್ಷವೂ ಈ ತಂಡ ಸುಮಾರು 45 ದಿನಗಳ ಕಾಲ ನಿರಾಶ್ರಿತರ ಕೇಂದ್ರ ತೆರೆದು ಹಸಿದವರ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಿದ್ದರು, ಈಗ ಮತ್ತೆ ಲಾಕ್ ಡೌನ್ ಆಗುತ್ತಿರುವುದರಿಂದ ನಿರಾಶ್ರಿತರ ಕೇಂದ್ರ ಓಪನ್ ಮಾಡಿ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ.  ಅಲ್ಲದೆ, ವಸತಿ ವ್ಯವಸ್ಥೆ ಕಲ್ಪಸಿ ರಸ್ತೆ ಮಧ್ಯೆ ಊಟ ಇಲ್ಲದವರನ್ನ ಕರೆತಂದು ಅಂತಹವರನ್ನ ಕಂಟಿಂಗ್ ಮಾಡಿ, ಸ್ನಾನ ಮಾಡಿಸಿ ಅಂತವರಿಗೆ ಊಟ ನೀಡಿ ಉಪಚಾರ ಮಾಡ್ತಾ ಇದ್ದಾರೆ. ಈ ಯುವಕರ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Sushma Chakre
First published: