ಚಿಕ್ಕಮಗಳೂರು (ಅ. 6): ಕಾಳಿಂಗ ಸರ್ಪವನ್ನು ಕಂಡರೆ ಜನ ಬೆಚ್ಚಿಬೀಳುತ್ತಾರೆ. ಕಾಳಿಂಗ ಸರ್ಪ ಕಂಡ ಕೂಡಲೇ ಎದ್ನೋ ಬಿದ್ನೋ ಎಂದು ಓಡುತ್ತಾರೆ. ಆದರೆ, ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಅದರ ಹೆಣೆಗೆ ಮುತ್ತಿಡುವುದು ಬಹುಶಃ ಕನಸಲ್ಲೂ ಆಗದ ಮಾತು. ಆದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸ್ನೇಕ್ ಅರ್ಜುನ್ ನೋಡುವವರಿಗೆ ಎದೆಯಲ್ಲಿ ಭಯ ಹುಟ್ಟುವಂತೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಸುಗೂಸಿನಂತೆ ಆಡಿಸಿ, ಅದರ ಹಣೆಗೆ ಮುತ್ತಿಟ್ಟಿದ್ದಾರೆ.
ಬಹುಶಃ ಇಂತಹ ವಿಡಿಯೋಗಳು ನೋಡ ಸಿಗೋದು ತೀರಾ ವಿರಳ. ಅಪರೂಪಕ್ಕೊಮ್ಮೆ ಎಂಬಂತೆ ಅಲ್ಲೊಂದು-ಇಲ್ಲೊಂದು ಇಂತಹ ವಿಡಿಯೋ ನೋಡಿ ಜನ ವಾವ್... ಸೂಪರ್... ಹಾರಿಬಲ್... ಅವನಿಗೆ ಎಂಥಾ ಧೈರ್ಯ ಮಾರಾಯ ಅಂತಿದ್ದರು. ಆದರೆ, ಮಲೆನಾಡಲ್ಲೂ ಅತ್ಯಂತ ವಿಷಕಾರಿ ಹಾಗೂ ಮೋಸ್ಟ್ ಡೇಂಜರ್ ಸ್ನೇಕ್ ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಹಣೆಗೆ ಮುತ್ತಿಕ್ಕುವ ಧೈರ್ಯವಂತರು ಇದ್ದಾರೆಂದು ಸ್ಥಳೀಯರು ಸ್ನೇಕ್ ಅರ್ಜುನ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಭಯ ಕೂಡ ಪಟ್ಟಿದ್ದಾರೆ.
ಇದನ್ನೂ ಓದಿ: Drug Case: ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ; ಡ್ರಗ್ ಕೇಸ್ ಸುಳಿಯಲ್ಲಿ ಮಾಜಿ ಡಾನ್ ಮಗ ರಿಕ್ಕಿ ರೈ
ಉರಗ ಪ್ರೇಮಿ ಸ್ನೇಕ್ ಅರ್ಜುನ್, ಕಾಳಿಂಗ ಅಲಿಯಾಸ್ ಕಿಂಗ್ ಕೋಬ್ರಾದ ಜೊತೆ ನಾನಾ-ನೀನಾ ನೋಡೇ ಬಿಡೋಣ ಎಂಬಂತೆ ಕಾಳಿಂಗನ ಜೊತೆ ದೃಷ್ಟಿಯುದ್ಧ ನಡೆಸಿದ್ದಾರೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿದರೆ ಭಯ ಆಗುತ್ತದೆ. ಅಂಥದರಲ್ಲಿ ಸ್ನೇಕ್ ಅರ್ಜುನ್ ಹಾವನ್ನು ಸೆರೆ ಹಿಡಿದು, ಆಡಿಸಿ, ಹಣೆಗೆ ಮುತ್ತಿಕ್ಕಿ ಕಾಡಿಗೆ ಬಿಟ್ಟಿದ್ದಾರೆ. ಕಾಡಿಗೆ ಬಿಡುವ ಮುನ್ನ ಕಿಂಗ್ ಕೋಬ್ರಾದ ಜೊತೆ ಈ ಉರಗ ಪ್ರೇಮಿ ನಡೆಸಿರುವ ಭಯಾನಕ ಸೆಣಸಾಟ ಜನರನ್ನು ಬೆಚ್ಚಿ ಬೀಳಿಸುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ