HOME » NEWS » State » CHIKMAGALUR RAPE AFTER SRINGERI RAPE 14 YEAR OLD GIRL GET RAPED IN CHIKMAGALUR AGAIN VCTV SCT

Chikmagalur Rape: ಚಿಕ್ಕಮಗಳೂರಿನಲ್ಲಿ 14 ವರ್ಷದ ಬಾಲಕಿ ಮೇಲೆ ಮತ್ತೊಂದು ಅತ್ಯಾಚಾರ; ಬಾಲಕಿಯ ನಗ್ನ ಫೋಟೋ ತೆಗೆದು ಬ್ಲಾಕ್​ಮೇಲ್

Chikmagalur Crime: ಚಿಕ್ಕಮಗಳೂರಿನಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆಕೆಯ ಊರಿನ ಸಂದೇಶ್ ಎಂಬ ಯುವಕ ಮನೆಗೆ ಕರೆದು ಹೆದರಿಸಿ, ಅತ್ಯಾಚಾರ ಎಸಗಿ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡು ಸ್ನೇಹಿತರಿಗೆ ಶೇರ್ ಮಾಡಿದ್ದ. ಕರೆದಾಗ ಬರಬೇಕು, ಇಲ್ಲವಾದರೆ ಸಾಮಾಜಿಕ ಜಾಲತಾಣಕ್ಕೆ ಹಾಕೋದಾಗಿ ಹೆದರಿಸಿದ್ದ.

news18-kannada
Updated:February 14, 2021, 8:12 AM IST
Chikmagalur Rape: ಚಿಕ್ಕಮಗಳೂರಿನಲ್ಲಿ 14 ವರ್ಷದ ಬಾಲಕಿ ಮೇಲೆ ಮತ್ತೊಂದು ಅತ್ಯಾಚಾರ; ಬಾಲಕಿಯ ನಗ್ನ ಫೋಟೋ ತೆಗೆದು ಬ್ಲಾಕ್​ಮೇಲ್
ಚಿಕ್ಕಮಗಳೂರು ಪೊಲೀಸ್ ಠಾಣೆ
  • Share this:
ಚಿಕ್ಕಮಗಳೂರು (ಫೆ. 14): ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ 30ಕ್ಕಿಂತ ಹೆಚ್ಚು ಜನ ಅತ್ಯಾಚಾರಗೈದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ನಡೆದಿದ್ದು, ಕಾಫಿನಾಡಿನ ಜನ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. 14 ವರ್ಷದ ಬಾಲಕಿ ಶಾಲೆಗೆ ಹೋಗುವಾಗ ಬೆದರಿಸಿ ಆಕೆ ಜೊತೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ರೆಕಾರ್ಡ್ ಮಾಡಿಕೊಂಡು ಮತ್ತೊಂದಷ್ಟು ಜನ ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ಶೃಂಗೇರಿ ಪ್ರಕರಣದಲ್ಲೇ ಚಿಕ್ಕಮಗಳೂರು ಜಿಲ್ಲೆಯ ಜನ ನೆಮ್ಮದಿ ಕಳೆದುಕೊಂಡಿದ್ದರು. ಇದೀಗ, ಮತ್ತೊಂದು ಅದೇ ರೀತಿಯ ಕೇಸ್ ಕಂಡು ಕಾಫಿನಾಡಿನ ನಾಗರೀಕ ಸಮಾಜ ಎತ್ತ ಸಾಗುತ್ತಿದೆ ಎಂದು ಮಲೆನಾಡಿಗರು ಭವಿಷ್ಯದ ಬಗ್ಗೆ ಭಯಗೊಂಡಿದ್ದಾರೆ.

ಐದು ತಿಂಗಳಿಂದ 15 ವರ್ಷದ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರಗೈದಿದ್ದರು ಎಂಬ ಸುದ್ದಿ ಕೇಳಿಯೇ ಮಲೆನಾಡಿಗರು ಬೆಚ್ಚಿ ಬಿದ್ದಿದ್ದರು. ಆ ಕೇಸಿನ ಆರೋಪಿಗಳೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಪತ್ತೆಯಾಗಿಲ್ಲ. ಖಾಕಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ಆದರೆ, ಈ ಪ್ರಕರಣ ಮಾಸುವೇ ಮುನ್ನವೇ ಮಲೆನಾಡಲ್ಲಿ ಮತ್ತೊಂದು ಅಂತಹ ಪ್ರಕರಣ ನಡೆದಿದೆ. ಚಿಕ್ಕಮಗಳೂರಿನ ಮಲ್ಲಂದೂರು ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶಾಲೆಗೆ ಬರುತ್ತಿದ್ದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ.

Chikmagalur Crime: after Sringeri Rape 14 year old Girl get Raped in Chikmagalur again.

ಅತ್ಯಾಚಾರ ನಡೆಸಿದ ಯುವಕ ಅದನ್ನು ರೆಕಾರ್ಡ್ ಮಾಡಿಕೊಂಡು, ಬಾಲಕಿಯ ನಗ್ನ ಫೋಟೋ ತೆಗೆದು ಸ್ನೇಹಿತರಿಗೆ ಕಳಿಸಿದ್ದಾನೆ. ಬಳಿಕ ಆ ಫೋಟೋ ಇಟ್ಟುಕೊಂಡು ಆಕೆಯನ್ನು ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ಮಲ್ಲಂದೂರು ಠಾಣೆಯಲ್ಲಿ ಎಫ್.ಐ.ಆರ್. ಆಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ನಗ್ನವಾಗಿರೋ ಫೋಟೋ ಹಾಗೂ ವಿಡಿಯೋ ಏಳೆಂಟು ಜನಕ್ಕೆ ಶೇರ್ ಆಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ, ಬಾಲಕಿ ಗಾಬರಿಯಿಂದ ಓರ್ವನ ಹೆಸರನ್ನ ಮಾತ್ರ ಹೇಳುತ್ತಿದ್ದು, ಪೊಲೀಸರು ಅತ್ಯಾಚಾರಗೈದವನ ಜೊತೆ ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಎರಡು ಪ್ರಕರಣಗಳಿಂದ ಜಿಲ್ಲೆಯ ಜನ ಕಂಗಾಲಾಗಿದ್ದಾರೆ.

ಇದನ್ನೂ ಓದಿ: Sringeri Rape: ಶೃಂಗೇರಿ ಅಪ್ತಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ 5 ಆರೋಪಿಗಳ ಬಂಧನ

ಈ ಬಾಲಕಿ ಕೂಡ 8ನೇ ತರಗತಿ ಓದುತ್ತಿದ್ದಳು. ಪ್ರತಿ ದಿನ ಶಾಲೆಗೆ ಬರಬೇಕು ಅಂದರೆ 4 ಕಿ.ಮೀ. ನಡೆದುಕೊಂಡೇ ಬರಬೇಕಿತ್ತು. ಹೀಗೆ ದಿನವೂ ಶಾಲೆಗೆ ಬರುವಾಗ ಅದೇ ಊರಿನ ಸಂದೇಶ್ ಎಂಬ ಯುವಕ ಮನೆಗೆ ಕರೆದು ಹೆದರಿಸಿ ಅತ್ಯಾಚಾರ ಎಸಗಿ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡು ಸ್ನೇಹಿತರಿಗೆ ಶೇರ್ ಮಾಡಿದ್ದ. ಕರೆದಾಗ ಬರಬೇಕು, ಇಲ್ಲವಾದರೆ ಸಾಮಾಜಿಕ ಜಾಲತಾಣಕ್ಕೆ ಹಾಕೋದಾಗಿ ಹೆದರಿಸಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿ ಸಂದೇಶ್‍ನನ್ನ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ವಿಡಿಯೋ ಕಳಿಸಿದ್ದ ಚರಣ್ ಹಾಗೂ ಪ್ರವೀಣ್ ಎಂಬುವವರನ್ನೂ ಬಂಧಿಸಲಾಗಿದೆ.

ಮಲೆನಾಡು ಭಾಗ ಬಹುತೇಕ ಬೆಟ್ಟಗುಡ್ಡಗಳಿಂದ ಕೂಡಿದೆ. ಕುಗ್ರಾಮಗಳೇ ಹೆಚ್ಚು. ಇಲ್ಲಿನ ಬಹುತೇಕ ಭಾಗದ ಮಕ್ಕಳು ಶಾಲೆಗೆ ಬರಬೇಕೆಂದರೆ ಕನಿಷ್ಟ 2-3 ಕಿ.ಮೀ. ನಡೆಯಬೇಕು. ಮೇಲಿಂದ ಮೇಲೆ ಇಂತಹ ಪ್ರಕರಣ ನಡೆಯುತ್ತಿದ್ದು ಮಲೆನಾಡಿಗರು ಭಯಗೊಂಡಿದ್ದಾರೆ. ಮಕ್ಕಳನ್ನ ಹೇಗೆ ಶಾಲೆಗೆ ಕಳಿಸೋದು ಎಂದು ಕಂಗಾಲಾಗಿದ್ದಾರೆ. ಅತ್ಯಾಚಾರಿಗಳಿಗೆ ಹೈದರಾಬಾದ್‍ನಲ್ಲಿ ಮಾಡಿದಂತೆ ಗುಂಡಿಕ್ಕಿ ಕೊಲ್ಲಬೇಕು. ಓರ್ವನಿಗೆ ಸರಿಯಾದ ಶಿಕ್ಷೆ ಕೊಟ್ಟರೆ ಉಳಿದವರು ಬುದ್ಧಿ ಕಲಿಯುತ್ತಾರೆ ಅಂತಿದ್ದಾರೆ ಕಾಫಿನಾಡಿನ ಜನ.
Youtube Video

ಒಟ್ಟಾರೆ, ಶೃಂಗೇರಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ನಡೆದಿರೋದ್ರಿಂದ ಕಾಫಿನಾಡಿನ ನಾಗರೀಕ ಸಮಾಜ ಎತ್ತ ಸಾಗುತ್ತಿದೆ ಎಂದು ಜಿಲ್ಲೆಯ ಜನ ಆತಂಕಕ್ಕೀಡಾಗಿ, ಭವಿಷ್ಯದ ಬಗ್ಗೆ ಚಿಂತೆಗೀಡಾಗಿ, ಗ್ರಾಮೀಣ ಭಾಗದ ಜನ ಮಕ್ಕಳನ್ನ ಹೇಗೆ ಶಾಲೆಗೆ ಕಳಿಸೋದು ಎಂದು ಭಯಗೊಂಡಿದ್ದಾರೆ. ಎರಡು ಪ್ರಕರಣಗಳಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯಾವುದೇ ಮುಲಾಜಿಗೂ ಒಳಗಾಗದೆ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡಿ ಜಿಲ್ಲೆಯ ಜನ ಹಾಗೂ ಮಕ್ಕಳು ನೆಮ್ಮದಿಯಾಗಿರುವಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಮಾಡಿ ಎಂದು ಜಿಲ್ಲೆಯ ಜನ ಪೊಲೀಸರಿಗೆ ಮನವಿ ಮಾಡಿದ್ದಾರೆ.

(ವರದಿ : ವೀರೇಶ್ ಹೆಚ್. ಜಿ)
Published by: Sushma Chakre
First published: February 14, 2021, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories