HOME » NEWS » State » CHIKMAGALUR POLICE STATION EMPLOYEES ARRANGED BABY SHOWER FOR PSI AND CONSTABLES IN POLICE STATION VCTV SCT

ಚಿಕ್ಕಮಗಳೂರಿನ ಪಿಎಸ್​ಐ, ಇಬ್ಬರು ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ

ಚಿಕ್ಕಮಗಳೂರಿನ ಮಹಿಳಾ ಠಾಣೆಯ ಪಿಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇತ್ರಾವತಿ ಹಾಗೂ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗಳಾದ ರಾಜೇಶ್ವರಿ ಹಾಗೂ ವೇದಾ ಅವರಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ ಮಾಡಲಾಗಿದೆ.

news18
Updated:February 3, 2021, 9:39 AM IST
ಚಿಕ್ಕಮಗಳೂರಿನ ಪಿಎಸ್​ಐ, ಇಬ್ಬರು ಕಾನ್​ಸ್ಟೇಬಲ್​ಗೆ ಪೊಲೀಸ್ ಠಾಣೆಯಲ್ಲಿ ಸೀಮಂತ
ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಸೀಮಂತ
  • News18
  • Last Updated: February 3, 2021, 9:39 AM IST
  • Share this:
ಚಿಕ್ಕಮಗಳೂರು (ಫೆ. 3): ತುಂಬು ಗರ್ಭಿಣಿಯಾಗಿದ್ದ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆ ಪಿ.ಎಸ್.ಐ. ಹಾಗೂ ಮತ್ತಿಬ್ಬರು ಮಹಿಳಾ ಪೇದೆಗಳಿಗೆ ಠಾಣೆಯ ಸಿಬ್ಬಂದಿಗಳೇ ಸೀಮಂತ ಮಾಡಿ ಸಹೋದ್ಯೋಗಿಗಳ ಸಂತೋಷದ ಸಮಯವನ್ನ ಕುಟುಂಬಸ್ಥರಂತೆ ಸಂಭ್ರಮಿಸಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಆವರಣದಲ್ಲಿರೋ ಮಹಿಳಾ ಠಾಣೆಯ ಪಿಎಸ್ ಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇತ್ರಾವತಿ ಹಾಗೂ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗಳಾದ ರಾಜೇಶ್ವರಿ ಹಾಗೂ ವೇದಾ ಎಂಬುವವರು 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಇದೀಗ, ಮೂವರು ಡೆಲಿವರಿಗೆ ಹೋಗುವ ಮುನ್ನ ಠಾಣೆಯ ಸಿಬ್ಬಂದಿಗಳೆಲ್ಲಾ ಸೇರಿ ಮೂವರಿಗೂ ಠಾಣೆಯಲ್ಲಿ ಸೀಮಂತ ಮಾಡಿ ಖುಷಿ ಪಟ್ಟಿದ್ದಾರೆ.

ನಮ್ಮ ಸಿಬ್ಬಂದಿಗಳು ಇಡೀ ದಿನ ನಮ್ಮೊಂದಿಗೆ ಕೆಲಸ ಮಾಡೋರೆಂದು ಠಾಣೆಯ ಎಲ್ಲರೂ ಸೇರಿ ಅವರ ಸಂತೋಷದ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ಠಾಣೆಯ ಸಿಬ್ಬಂದಿಗಳೇ ಠಾಣೆಯನ್ನ ತಳಿರು-ತೋರಣಗಳಿಂದ ಅಲಂಕರಿಸಿದ್ದರು. ಠಾಣೆಗೆ ಬಣ್ಣ-ಬಣ್ಣದ ಪೇಪರ್ ಹಾಗೂ ಬಟ್ಟೆಗಳನ್ನ ಕಟ್ಟಿ ನೋಡುಗರಿಗೆ ಇದು ಪೊಲೀಸ್ ಠಾಣೆಯಾ ಎಂದು ಅನುಮಾನ ಮೂಡುವಂತೆ ಬದಲಿಸಿದ್ದರು.

Chikmagalur Police Station Employees arranged Baby Shower for PSI and Constables in Police Station
ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಸೀಮಂತ


ಇದನ್ನೂ ಓದಿ: Aero India 2021: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರ್ ಶೋ; ಏರೋ ಇಂಡಿಯಾಗೆ ರಾಜನಾಥ್ ಸಿಂಗ್ ಚಾಲನೆ

ಠಾಣೆಯ ಪ್ರತಿ ಸಿಬ್ಬಂದಿಯೂ ಕೂಡ ತಮ್ಮ ಮನೆಯ ಕಾರ್ಯಕ್ರಮದಂತೆ ಖಾಕಿ ಬಟ್ಟೆ ಬಿಟ್ಟು ಬಿಳಿ ಪಂಜೆ ಹಾಗೂ ಬಿಳಿ ಶರ್ಟ್ ಧರಿಸಿ ಸಿಬ್ಬಂದಿಗಳ ಮಧುರ ಕ್ಷಣದಲ್ಲಿ ಪಾಲ್ಗೊಂಡಿದ್ದಾರೆ. ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಇದೇ ವೇಳೆ, ಗರ್ಭೀಣಿಯರಿಗೆ ಅಕ್ಷತೆ ಹಾಕಿ ಹಾಕಿ ಫಲ- ತಾಂಬೂಲ ನೀಡಿ ಹಾರೈಸಿದ್ದಾರೆ.
ಮಹಿಳಾ ಠಾಣೆಯ ಪಿಎಸ್​ ಐ ನೇತ್ರಾವತಿ ಗರ್ಭಿಣಿಯಾಗಿದ್ದರೂ ಹೆಚ್ಚು ಕಾಲ ಠಾಣೆಯಲ್ಲಿ ಕಳೆಯುತ್ತಿದ್ದರು. ಅಲ್ಲದೆ, ಕರ್ತವ್ಯಕ್ಕೆ ರಜೆ ಹಾಕದೇ ಮಹಿಳಾ ಠಾಣೆಗೆ ಬರುವ ಸಮಸ್ಯೆಗಳನ್ನ ಬಗ್ಗೆ ಆಲಿಸಿ ಕೆಲಸ ಮಾಡುತ್ತಿದ್ದರು. ಆದ್ದರಿಂದ ಪಿಎಸ್ ಐ  ಹಾಗೂ ಮತ್ತಿಬ್ಬರು ಮಹಿಳಾ ಸಿಬ್ಬಂದಿಯ ಸೀಮಂತ ಮಾಡಬೇಕೆಂದು ಸಿಬ್ಬಂದಿ ತಯಾರಿ ನಡೆಸಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿ ಸಂಭ್ರಮ ಮಾಡಿದ್ದಾರೆ.
Youtube Video

ಒಟ್ಟಾರೆ, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮಾಡಿರುವ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಠಾಣೆಯ ಸಿಬ್ಬಂಧಿಗಳು ಮಾಡಿರುವ ಕೆಲಸದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

(ವರದಿ: ವೀರೇಶ್ ಹೆಚ್​.ಜಿ)
Published by: Sushma Chakre
First published: February 3, 2021, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories