ಭದ್ರ ನದಿ ಸೇರುತ್ತಿದೆ ಮಾಂಸ ತ್ಯಾಜ್ಯ; ಮೊಸಳೆ ಭೀತಿಯಲ್ಲಿ ಚಿಕ್ಕಮಗಳೂರಿನ ಜನರು

ಭದ್ರೆಯ ಒಡಲು ಮಳೆಗಾಲದಲ್ಲಿ ಮಾತ್ರ ಭಯಂಕರವಲ್ಲ. ಬೇಸಿಗೆ-ಚಳಿಗಾಲದಲ್ಲೂ ಭಯಂಕರವೇ. ಇದಕ್ಕೆ ಕಾರಣ ಇಲ್ಲಿನ ಮಾಂಸದ ಅಂಗಡಿ ಮಾಲೀಕರು ಎಂದರೂ ತಪ್ಪಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು (ಜ.23): ಭದ್ರೆಯ ಒಡಲಲ್ಲಿನ ಇಲ್ಲಿನ ಜನರಿಗೆ ಮಳೆಗಾಲ ಬಂತೆಂದರೆ ಮೊಸಳೆ ಭಯ. ಆದರೆ, ಬೇಸಿಗೆಯಲ್ಲಿಯೂ ಈ ಆತಂಕ ಈಗ ಮಲೆನಾಡಿನ ಜನರಿಗೆ ಕಾಡಾತೊಡಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. 

ಮಳೆಗಾಲದ ಸಮಯದಲ್ಲಿ ಅಧಿಕ ಮಳೆಯಿಂದಾಗಿ ನದಿ ನೀರಿಗೆ ಮೊಸಳೆಗಳು ತೇಲಿ ಬರುವುದು ಇಲ್ಲಿ ಸಹಜ. ಆದರೆ, ಈ ಬಾರಿ ಬೇಸಿಗೆ ಸಮಯದಲ್ಲಿಯೇ ಈ ಬಾರಿ ಮೊಸಳೆ ಭೀತಿ ಕಾಡುತ್ತಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರೆಯ ತಟದಲ್ಲಿ ಯಾವಾಗ ಎಲ್ಲಿ ಮೊಸಳೆಇರುತ್ತದೆ ಎಂದು ಹೇಳುವುದೇ ಅಸಾಧ್ಯವಾಗಿದೆ. ನದಿ ಸಮೀಪ ಹೋಗಲು ಕೂಡ ಜನರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಇಲ್ಲಿನ ಮಾಂಸದ ಅಂಗಡಿಗಳು.

ಮಾಂಸ ತ್ಯಾಜ್ಯ ವಸ್ತಗಳನ್ನೆಲ್ಲಾ ಇಲ್ಲಿನ ಅಂಗಡಿ ಮಾಲೀಕರು ನದಿ ತಟದಲ್ಲಿ ಬಂದು ಸುರಿಯುತ್ತಿದ್ದು, ಮಾಂಸದ ರುಚಿಕಂಡ ಮೊಸಳೆಗಳು ಇದಕ್ಕಾಗಿ ಕಾದು ಕುಳಿತಿರುತ್ತವೆ. ನದಿ ತಟದ ಉದ್ದಕ್ಕೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಅಂಗಡಿ ಮಾಲೀಕರು ಹಾಗೂ ಪಂಚಾಯತಿ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಮಾಂಸದ ರುಚಿಕಂಡ ಮೊಸಳೆಗಳು ನದಿ ಪಕ್ಕ ಓಡಾಡುವ ಜನರ ಮೇಲೆ ಕೂಡ ಯಾವುದೇ ಸಂದರ್ಭದಲ್ಲಿ ದಾಳಿ ಮಾಡಬಹುದು. ಇಲ್ಲ ಇದೇ ರುಚಿ ಅರಸಿ ಊರಿಗೆ ಕಾಲಿಟ್ಟರೆ ಗತಿ ಏನು ಎಂಬ ಆಂತಕ ಇಲ್ಲಿನ ಜನರಲ್ಲಿ ಮೂಡಿದೆ.

ಇದನ್ನು ಓದಿ: ಕೆರೆಗೆ ಜೀವ ತುಂಬಲು ಕೇವಲ 30 ದಿನದಲ್ಲಿ 9 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಪುಟಾಣಿ ಮಕ್ಕಳ ಸಾಹಸಗಾಥೆ

ಈಗ ಇಲ್ಲಿನ ಮೊಸಳೆಗಳ ಸಂಖ್ಯೆ ಕೂಡ ಹೆಚ್ಚಿದ್ದು, ಒಟ್ಟಿಗೆ ಅನೇಕ ಮೊಸಳೆಗಳು ಕಾದು ಕುಳಿತಿರುತ್ತವೆ. ಈ ಹಿನ್ನೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗುವುದರ ಜೊತೆ ಅರಣ್ಯ ಇಲಾಖೆ ಈ ಮೊಸಳೆಗಳನ್ನು ಬೇರೇಡೆ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
First published: