• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚಿಕ್ಕಮಗಳೂರು: ಈಜಲು ಹೋದ ಯುವಕ ನೀರು ಪಾಲು; ಸಾವಿನ ಹಿಂದಿದೆ ಗೆಳೆಯರ ಕೈವಾಡ?

ಚಿಕ್ಕಮಗಳೂರು: ಈಜಲು ಹೋದ ಯುವಕ ನೀರು ಪಾಲು; ಸಾವಿನ ಹಿಂದಿದೆ ಗೆಳೆಯರ ಕೈವಾಡ?

ಮೃತ ಯುವಕ

ಮೃತ ಯುವಕ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಘಟನೆ ನಡೆದಿದೆ. ಆಲ್ದೂರಿನ ಯುವಕ ಅನ್ವಿತ್ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಕೊರೋನಾ ಲಾಕ್ಡೌನ್ನಿಂದ ಊರಿಗೆ ಬಂದವನು ಊರಿನಲ್ಲೇ ನೀರಿನ ಕ್ಯಾನ್ ಬ್ಯುಸಿನೆಸ್ ಹಾಗೂ ಓಮ್ನಿ ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಸೆಪ್ಟೆಂಬರ್ 2): ಬೆಂಗಳೂರಿನಿಂದ ಬಂದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ. ಯುವಕ ನೀರು ಪಾಲಾಗುತ್ತಿದ್ದಂತೆ ಈತನ ಸ್ನೇಹಿತರು ಮೃತ ಯುವಕನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ ಭಾರೀ ಆತಂಕ ಸೃಷ್ಟಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಘಟನೆ ನಡೆದಿದೆ. ಆಲ್ದೂರಿನ ಯುವಕ ಅನ್ವಿತ್ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಕೊರೋನಾ ಲಾಕ್ಡೌನ್ನಿಂದ ಊರಿಗೆ ಬಂದವನು ಊರಿನಲ್ಲೇ ನೀರಿನ ಕ್ಯಾನ್ ಬ್ಯುಸಿನೆಸ್ ಹಾಗೂ ಓಮ್ನಿ ಇಟ್ಟುಕೊಂಡು ಬಾಡಿಗೆ ಹೊಡೆಯುತ್ತಿದ್ದ. ನಾಲ್ಕು ದಿನದ ಹಿಂದೆ ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ನಾಲ್ವರು ಸ್ನೇಹಿತರು ಬಂದಿದ್ದರು. ಅವರ ಜೊತೆ ಆಲ್ದೂರು ಸಮೀಪದ ಹಳ್ಳದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ.


ಮೃತ ಅನ್ವಿತ್​ಗೆ ಈಜು ಬರುತ್ತಿರಲಿಲ್ಲ. ಆತ ನೀರಿಗೆ ಇಳಿದಿಲ್ಲ ಬೆಂಗಳೂರಿನಿಂದ ಬಂದವರು ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ, ಬೆಂಗಳೂರು ಸ್ನೇಹಿತರು ಅನ್ವಿತ್ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನ ಮೊಬೈಲ್ ತೆಗೆದುಕೊಂದು ಹೋಗಿದ್ದಾರೆ. ಮೊಬೈಲ್ ಇಂದಿಗೂ ಆನ್ ಆಗಿದ್ದು, ಫೋನ್ ಮಾಡಿದರೆ ರಿಸೀವ್ ಮಾಡುತ್ತಾರೆ. ಮಾತನಾಡುವುದಿಲ್ಲ. ಆತನ ಬೆಲ್ಟ್ ಓಪನ್ ಆಗಿದೆ ಅಷ್ಟೆ. ಪ್ಯಾಂಟ್ ಬಟನ್ ಹಾಗೂ ಜೀಪ್ ಕೂಡ ಓಪನ್ ಆಗಿಲ್ಲ. ಕುತ್ತಿಗೆ ಹಾಗೂ ಸೊಂಟದ ಬಳಿ ಮಾರ್ಕ್ ಇದೆ. ಬಾಯಲ್ಲಿ ನೊರೆ ಬಂದಿದೆ. ಆತ ನೀರು ಕುಡಿದಿರಲಿಲ್ಲ. ಇದು ಕೊಲೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.


ಅವರು ಬಂದು ಹೋಗಿರೋ ಎಲ್ಲಾ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಲ್ಲಾ ಪೊಲೀಸರಿಗೆ ನೀಡಿದ್ದೇವೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಮೃತನ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಸಾಲದಕ್ಕೆ ಅಂದು ಈಜಲು ಆಲ್ದೂರಿನಿ ಇಬ್ಬರು ಯುವಕರು ಅನ್ವಿತ್ ಹಾಗೂ ಬೆಂಗಳೂರಿನವರ ಜೊತೆ ಹೋಗಿದ್ದರು. ಈಗ ಇಬ್ಬರು ಹುಡುಗರು ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆಂದು ನೊಂದ ಕುಟುಂಬ ಹೇಳುತ್ತಿದೆ. ಪೊಲೀಸರಿಗೆ ಎಲ್ಲಾ ದಾಖಲೆ ಕೊಟ್ಟ ಮೇಲೆ ಬೆಂಗಳೂರು ತುಂಬಾ ದೊಡ್ಡ ಊರು ಹೇಗೆ ಹುಡುಕೋದು. ಸ್ವಲ್ಪ ಸಮಯ ಬೇಕಾಗುತ್ತೆ. ಅವರು ಸಿಕ್ಕ ಮೇಲೆ ಹೇಳ್ತೀವಿ ಬನ್ನಿ ಎಂದು ಹೇಳಿದ್ದಾರಂತೆ. ತಾಯಿ ಹಾಗೂ ಅಕ್ಕ ಬದುಕಿಗೆ ಆಧಾರಸ್ತಂಭವಾಗಿದ್ದ ಹುಡುಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.


ಸದ್ಯ ಈ ವಿಚಾರ ಎಸ್ಪಿ ಗಮನಕ್ಕೆ ಬಂದಿದ್ದು, ಸೂಕ್ತ ತನಿಖೆ ನಡೆಸುವಂತೆ ಆಲ್ದೂರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡಿದ್ದ ಈ ತಾಯಿ ಮಗನ ಬಗ್ಗೆ ಇನ್ನಿಲ್ಲದ ಕನಸು ಕಂಡಿದ್ದರು. ಆದರೆ, ಕನಸೆಲ್ಲವೂ ನುಚ್ಚು ನೂರಾಗಿದೆ.

Published by:Rajesh Duggumane
First published: