ಮೂಡಿಗೆರೆಯ ಯುವಕನಿಗೆ ಪಿಎಸ್​ಐ ಮೂತ್ರ ಕುಡಿಸಿದ ಆರೋಪ; ಪ್ರಕರಣ ತನಿಖೆ ಸಿಐಡಿ ಹೆಗಲಿಗೆ

Chikmagalur : ಪುನೀತ್ ಎಂಬ ದಲಿತ ಯುವಕನನ್ನ ವಿಚಾರಣೆಗೆ ಕರೆತಂದಿದ್ದ ಪಿ.ಎಸ್.ಐ. ಅರ್ಜುನ್, ಜಾತಿ ನಿಂದನೆ ಮಾಡಿ, ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಆತನಿಗೆ ಠಾಣೆಗೆ ಬಂದಿದ್ದ ಮತ್ತೊಬ್ಬ ಆರೋಪಿ ಚೇತನ್ ಎಂಬುವವನ ಮೂತ್ರ ಕುಡಿಸಿದ್ದರು ಎಂದು ಪುನೀತ್ ಆರೋಪಿಸಿದ್ದನು.

ಪಿಎಸ್​ಐ ಮೇಲೆ ಆರೋಪಿಸಿದ ಯುವಕ

ಪಿಎಸ್​ಐ ಮೇಲೆ ಆರೋಪಿಸಿದ ಯುವಕ

  • Share this:
ಚಿಕ್ಕಮಗಳೂರು : ವಿಚಾರಣೆಗೆ ಕರೆತಂದು ಪಿ.ಎಸ್.ಐ. ಮೂತ್ರ ಕುಡಿಸಿದ್ದರು ಎಂದು ಯುವಕನೋರ್ವ ಪಿಎಸ್​ಐ ವಿರುದ್ಧ ಗಂಭೀರ ಆರೋಪ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಭೇಟಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಗೋಣಿಬೀಡು ಠಾಣೆಯ ಪಿಎಸ್​ಐ ಅರ್ಜುನ್‍ ಅವರನ್ನು ಸ್ಥಳ ತೋರಿಸದೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು. ಜೊತೆಗೆ ಪ್ರಕರಣವನ್ನು ತನಿಖೆಗೆ ಸರ್ಕಾರ ಸಿಐಡಿಗೆ ವಹಿಸಿದೆ. ನಿನ್ನೆ ಗೋಣಿಬೀಡು ಠಾಣೆಗೆ ಭೇಟಿ ನೀಡಿದ ಐಜಿಪಿ ದೇವ್ ಜ್ಯೋತಿ ರೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿ, ಪಿಎಸ್‍ಐ ವಿರುದ್ಧ ಆರೋಪ ಮಾಡಿರುವ ಪುನೀತ್ ಎಂಬ ಯುವಕನ ಸ್ವಗ್ರಾಮ ಕಿರಗುಂದ ಗ್ರಾಮಕ್ಕೂ ಭೇಟಿ ನೀಡಿದ್ದರು.

ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದನು. ಆ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು, ಇದು ತುಂಬಾ ಗಂಭೀರವಾದ ಪ್ರಕರಣ. ಈ ಜಿಲ್ಲೆಯಲ್ಲಿ ಇಂತಹ ಪ್ರಕರಣ ಇದೇ ಮೊದಲು. ಈ ದೂರನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಇದನ್ನೂ ಓದಿ: Ramesh Jarkiholi: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮಹತ್ವದ ತಿರುವು; ಸೆಕ್ಸ್​ ವಿಡಿಯೋದಲ್ಲಿರುವುದು ನಾನೇ ಎಂದ ಸಾಹುಕಾರ್!

ಜಿಲ್ಲಾ ಪೊಲೀಸ್ ಮೇಲೆಯೇ ಕಂಪ್ಲೇಂಟ್ ಇರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರೇ ವಿಚಾರಣೆ ನಡೆಸೋದು ಬೇಡ ಎಂದು ಸಿಐಡಿಗೆ ಹಸ್ತಾಂತರ ಮಾಡಿದ್ದೇವೆ ಎಂದರು. ಮೇ 23ರ ಭಾನುವಾರ ಪಿಎಸೈ ಅರ್ಜುನ್ ಮಹಿಳೆ ಜೊತೆ ಮಾತನಾಡುತ್ತಿದ್ದಾನೆಂದು ಠಾಣೆಗೆ ಕರೆತಂದಿದ್ದ ಪುನೀತ್ ಎಂಬ ಯುವಕನ ವಿರುದ್ಧ ಅದೇ ಮಹಿಳೆ ಕೂಡ ದೂರು ನೀಡಿದ್ದು, ಪುನೀತ್ ಮೇಲೆ ಆ ಕೇಸ್ ದಾಖಲಾಗಿದೆ ಎಂದರು. ಪ್ರಕರಣ ಸಂಬಂಧ ಗೋಣಿಬೀಡು ಠಾಣೆಯ ಪಿ.ಎಸ್.ಐ. ಅರ್ಜುನ್‍ರನ್ನ ಅಮಾನುತ ಮಾಡಿ ಸ್ಥಳ ತೋರಿಸದೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ಪ್ರಕರಣದ ತನಿಖೆಯನ್ನ ಸರ್ಕಾರ ಸಿಐಡಿಗೆ ವಹಿಸಿದೆ.

ನಿನ್ನೆ ಗೋಣಿಬೀಡು ಠಾಣೆಗೆ ಭೇಟಿ ನೀಡಿದ ಐಜಿಪಿ ದೇವ್ ಜ್ಯೋತಿ ರೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದರು. ಪಿಎಸ್‍ಐ ವಿರುದ್ಧ ಆರೋಪ ಮಾಡಿರೋ ಪುನೀತ್ ಎಂಬ ಯುವಕನ ಸ್ವಗ್ರಾಮ ಕಿರಗುಂದ ಗ್ರಾಮಕ್ಕೂ ಭೇಟಿ ನೀಡಿದ್ದರು. ಆರೋಪಿತ ಪುನೀತ್, ವಿವಾಹಿತ ಮಹಿಳೆ ಜೊತೆ ಫೋನ್‍ನಲ್ಲಿ ಸಂಭಾಷಣೆ ನಡೆಸುತ್ತಿದ್ದಾನೆ. ಇದರಿಂದ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಮಹಿಳೆ ಪತಿ ದೂರು ನೀಡಿದ್ದನು.

ಇದನ್ನೂ ಓದಿ: Lunar Eclipse 2021: ನಾಳೆ ಗೋಚರಿಸಲಿದೆ ಈ ವರ್ಷದ ಮೊದಲ ಚಂದ್ರಗ್ರಹಣ; ಸಮಯ, ಸ್ಥಳಗಳ ಮಾಹಿತಿ ಇಲ್ಲಿದೆ

ಈ ಕೇಸ್ ಸಂಬಂಧ ಪುನೀತ್ ಎಂಬ ದಲಿತ ಯುವಕನನ್ನ ವಿಚಾರಣೆಗೆ ಕರೆತಂದಿದ್ದ ಪಿ.ಎಸ್.ಐ. ಅರ್ಜುನ್, ಜಾತಿ ನಿಂದನೆ ಮಾಡಿ, ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಆತನಿಗೆ ಠಾಣೆಗೆ ಬಂದಿದ್ದ ಮತ್ತೊಬ್ಬ ಆರೋಪಿ ಚೇತನ್ ಎಂಬುವವನ ಮೂತ್ರ ಕುಡಿಸಿದ್ದರು ಎಂದು ಪುನೀತ್ ಆರೋಪಿಸಿದ್ದನು. ಈ ಹಿನ್ನೆಲೆ ಪಿಎಸೈ ಅರ್ಜುರನ್‍ ಅವರನ್ನು ಅಮಾನುತುಗೊಳಿಸಿ ವರ್ಗಾವಣೆ ಮಾಡಿ ಆದೇಶಿಸಿರೋ ಸರ್ಕಾರ, ಪ್ರಕರಣವನ್ನ ಸಿಐಡಿಗೆ ವಹಿಸಿದೆ.

ಈ ಹಿನ್ನೆಲೆ ಪಶ್ಚಿಮ ವಲಯ ಐಜಿಪಿ ಗೋಣಿಬೀಡಿಗೆ ಭೇಟಿ ನೀಡಿದ್ದರು. ಪ್ರಕರಣದ ತನಿಖೆಯನ್ನ ದೇವ್ ಜ್ಯೋತಿ ರೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಡಿ.ವೈ.ಎಸ್ಪಿಗೆ ಇಲಾಖಾವಾರು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

(ವರದಿ: ವೀರೇಶ್ ಹೆಚ್ ಜಿ)
Published by:Sushma Chakre
First published: