HOME » NEWS » State » CHIKMAGALUR MENTAL DISORDER MAN WAITING FOR FINANCIAL HELP AS HIS YOUNGER BROTHER TAKING CARE OF HIM VCTV SCT

Chikmagalur: ಕಲ್ಲು ಹೃದಯಲ್ಲೂ ಕಣ್ಣೀರು ತರಿಸುವ ಚಿಕ್ಕಮಗಳೂರಿನ ಸಹೋದರರ ಕಥೆ

ಕಳೆದ ಮೂರು ದಶಕಗಳಿಂದ ಚಿಕ್ಕಮಗಳೂರಿನ ತರೀಕೆರೆಯ ಮಾನಸಿಕ ಅಸ್ವಸ್ಥ ಸುಹೇಬ್​ನ ಕಾಲಿಗೆ ಕಟ್ಟಿರೋ ಚೈನ್ ಬಿಚ್ಚುವಂತಿಲ್ಲ.

news18-kannada
Updated:January 16, 2021, 8:15 AM IST
Chikmagalur: ಕಲ್ಲು ಹೃದಯಲ್ಲೂ ಕಣ್ಣೀರು ತರಿಸುವ ಚಿಕ್ಕಮಗಳೂರಿನ ಸಹೋದರರ ಕಥೆ
ಕಾಲಿಗೆ ಚೈನ್ ಕಟ್ಟಿರುವ ಸುಹೇಬ್
  • Share this:
ಚಿಕ್ಕಮಗಳೂರು (ಜ. 16): ಮೂರು ದಶಕಗಳಿಂದ ಕಾಲಿನ ಚೈನ್ ಇರುವಷ್ಟು ಉದ್ದದ ಜಾಗದಲ್ಲೇ ಯುವಕನೊಬ್ಬ ಬದುಕು ಸಾಗಿಸುತ್ತಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದಲ್ಲಿ ನಡೆದಿದೆ.  ಈ ಯುವಕನ ಹೆಸರು ಸುಹೇಬ್. ಮಾನಸಿಕ ಅಸ್ವಸ್ಥ. ಊಟ-ತಿಂಡಿ ಎಲ್ಲಾ ಕೂತಲ್ಲೇ, ಸುಹೇಬ್ ಗೆ ಅಪ್ಪ-ಅಮ್ಮ ಯಾರೂ ಇಲ್ಲ. ಇರೋ ತಮ್ಮನೇ ಇವನಿಗೆ ಅಪ್ಪ ಅಮ್ಮ. ಅವನು ಅಂಗಡಿಯಲ್ಲಿ ಕವರ್ ಕಟ್ಟಬೇಕು. ಅಣ್ಣನನ್ನ ಸಾಕಬೇಕು. ಇದು ಕಲ್ಲು ಹೃದಯಲ್ಲೂ ಕಣ್ಣೀರು ತರಿಸೋ ಕಾಫಿನಾಡ ಸಹೋದರರ ಕಥೆ.

ಕಳೆದ ಮೂರು ದಶಕಗಳಿಂದ ಈತನ ಬದುಕು ಹೀಗೆ. ಕಾಲಿಗೆ ಕಟ್ಟಿರೋ ಚೈನ್ ಬಿಚ್ಚುವಂತಿಲ್ಲ. ಬಿಚ್ಚಿದರೆ ಅವನ ಹಿಂದೆಯೇ ಓಡಬೇಕು. ಎಷ್ಟು ದೂರ ಎಂದು ಹೋದವರಿಗಷ್ಟೆ ಗೊತ್ತಾಗುವಷ್ಟು ದೂರ. ಚಿಕ್ಕಂದಿನಲ್ಲಾದರೂ ಕಣ್ಣು ಕಾಣುತ್ತಿತ್ತು. ಈಗೀಗ ಕಣ್ಣೂ ಅಷ್ಟಾಗಿ ಕಾಣುವುದಿಲ್ಲ. ಓಡಿ ಓಡಿ ಎಲ್ಲೆಂದರಲ್ಲಿ ಬೀಳುತ್ತಾನೆ. ಬೈಕ್-ಕಾರುಗಳಿಗೆ ಅಡ್ಡ ಸಿಗುತ್ತಾನೆ.  ಹಾಗಾಗಿ, ಯಾವಾಗಲೂ ಕಾಲಿಗೆ ಚೈನ್‍ನಲ್ಲಿ ಕಟ್ಟಿ ಹಾಕಬೇಕು. ಹಿಂದೊಮ್ಮೆ ಚೈನ್ ಬಿಚ್ಚಿದ್ದಾಗ ಓಡಿ ಹೋಗಿ ಕೆರೆಗೆ ಬಿದ್ದಿದ್ದ. ಬಟ್ಟೆ ತೊಳೆಯುತ್ತಿದ್ದ ಅಜ್ಜಿಯಿಂದ ಪ್ರಾಣ ಉಳಿದಿತ್ತು.

ಈತನಿಗೆ ಅಪ್ಪ-ಅಮ್ಮ ಯಾರೂ ಇಲ್ಲ. ಇದ್ದ ಮಾನಸಿಕ ಅಸ್ವಸ್ಥ ಅಣ್ಣನೂ ತೀರಿಕೊಂಡಿದ್ದಾನೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ರು. ವೈದ್ಯರು ಅಬ್ಸರ್ವೇಶನ್‍ನಲ್ಲಿ ಇರಲಿ ಎಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ಜನರನ್ನ ಕಂಡು ಕೂಗಾಡೋ ರಭಸಕ್ಕೆ ವಾಪಾಸ್ ಕರೆತಂದು ಮತ್ತೆ ಕಟ್ಟಿ ಹಾಕಿದ್ದರು. ಈಗ 18 ವರ್ಷದ ತಮ್ಮನೇ ಈತನಿಗೆ ಅಮ್ಮ. ಅವನಿಗೆ ಊಟ-ತಿಂಡಿ ಮಾಡಿಸೋದು. ಬಟ್ಟೆ ತೊಳೆಯೋದು ಪ್ರತಿಯೊಂದನ್ನೂ ತಾಯಿಯಂತೆ ಮಾಡ್ತಿದ್ದಾನೆ.

ಇದನ್ನೂ ಓದಿ: Covid-19 Vaccine: ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ; ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ

ಗ್ರಾಮದ ಟ್ಯಾಂಕ್ ಮುಂದೆ ಬಟ್ಟೆ ತೊಳೆಯುವ ಸುಹೇಬ್​ನ ತಮ್ಮನ ಹೆಸರು ಅಬ್ದುಲ್ ರೆಹಮಾನ್. ಈ 18 ವರ್ಷದ ಯುವಕನೇ 10 ವರ್ಷಗಳಿಂದ ಸುಹೇಬ್​ನಿಗೆ ಅಮ್ಮನಾಗಿದ್ದಾನೆ. ಈತ ಕೂಡ ಅದೇ ಗ್ರಾಮದ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳಿಗೆ ಮೂರು ಸಾವಿರ ಕೊಡ್ತಾರೆ. ಅದೇ ಹಣದಲ್ಲಿ ಅಣ್ಣನನ್ನ ಸಾಕಿಕೊಂಡು, ತಾನೂ ಬದುಕುತ್ತಿದ್ದಾನೆ. ಬೆಳಗ್ಗೆ ಎದ್ದು ಅಡುಗೆ ಮಾಡಿ ಅಣ್ಣನಿಗೆ ತಿನ್ನಿಸಿ ಬಳಿಕ ತಾನೂ ತಿಂದು ಕೆಲಸಕ್ಕೆ ಹೋಗ್ತಾನೆ. ಮಧ್ಯಾಹ್ನ ಬಂದು ಅಣ್ಣನಿಗೆ ಊಟ ಮಾಡಿಸಿ ತಾನೂ ಮಾಡಿ ಮತ್ತೆ ಕೆಲಸಕ್ಕೆ ಹೋಗಬೇಕು. ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಬಟ್ಟೆ ತೊಳೆದು ಹೋಗುತ್ತಾನೆ.

Chikmagalur Mental Disorder Man waiting for Financial Help as his Younger Brother Taking Care of Him.
ಸುಹೇಬ್​ನ ತಮ್ಮ ರೆಹಮಾನ್


ಇದು ಒಂದೆರಡು ದಿನದ ಬದುಕಲ್ಲ. ಬರೋಬ್ಬರಿ 10 ವರ್ಷಕ್ಕಿಂತ ಹೆಚ್ಚಿನದ್ದು. 18 ವರ್ಷಗಳಿಂದ ಅಣ್ಣನಿಗೆ ಅಮ್ಮನಾಗಿರೋ ರೆಹಮಾನ್‍ಗೂ ಈಗೀಗ ಆರೋಗ್ಯ ಹದಗೆಟ್ಟಿದೆ. ಆತ ಕೂಡ ಪ್ರತಿನಿತ್ಯ ಮಾತ್ರೆ ನುಂಗಬೇಕು. ಸ್ಥಳಿಯರು ಕೂಡ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಅತ್ತ ಹೆತ್ತವರಿಲ್ಲ. ಇತ್ತ ಸಹೋದರರೂ ಇಲ್ಲ. ಆರ್ಥಿಕವಾಗಿ ಬಲವೂ ಇಲ್ಲದ ಈ ಯುವಕ ದಾನಿಗಳ ನೆರವನ್ನ ಬಯಸುತ್ತಿದ್ದಾನೆ.ಒಟ್ಟಾರೆ, ನಿಜಕ್ಕೂ ಈ ಸ್ಟೋರಿ ನೋಡಿದ್ರೆ ನಮ್ಮ ಶತ್ರುಗಳಿಗೆ ಈ ಬದುಕು ಬೇಡ ಅನಿಸುತ್ತದೆ. ಆತ ಮಾನಸಿಕ ಅಸ್ವಸ್ಥನೇ ಇರಬಹುದು. ಚಿಕ್ಕಂದಿನಲ್ಲಿ ಚೆನ್ನಾಗಿದ್ದ ಈತ ಕ್ರಮೇಣ ಹೀಗಾಗಿದ್ದಾನೆ.  ಆದರೆ, 30 ವರ್ಷಗಳಿಂದ ಹೀಗೆ ಒಂದೇ ಜಾಗದಲ್ಲಿ ಕಾಲಿಗೆ ಚೈನ್ ಕಟ್ಟಿಕೊಂಡು ಪ್ರಾಣಿಗಳಿಂತೆ ಬದುಕೋದು ನಿಜಕ್ಕೂ ಅಸಾಧ್ಯ. ಅದಕ್ಕಿಂತ ಮಿಗಿಲಾಗಿ ಅಂಗಡಿಯಲ್ಲಿ ಕವರ್ ಕಟ್ಟಿಕೊಂಡು ಈ ಮಾನಸಿಕ ಅಸ್ವಸ್ಥ ಅಣ್ಣನಿಗೆ ಬೆನ್ನೆಲುಬಾಗಿ ನಿಂತಿರೋ ಸಹೋದರ ರೆಹಮಾನ್ ಬದುಕು ಒಂದು ತಪ್ಪಸ್ಸೇ ಸರಿ.

ಅದೇನೇ ಇರಲಿ, ಹಿಂದು-ಮುಂದಿಲ್ಲದ ಈ ಯುವಕರು ದಾನಿಗಳ ದಾರಿ ಕಾಯುತ್ತಿರುವುದಂತೂ ಸತ್ಯ. ಸಹೃದಯಿಗಳು ಇವರ ನೆರವಿಗೆ ನಿಂತರೆ ಆ ಯುವಕರ ಬದುಕು ತಕ್ಕಮಟ್ಟಿಗೆ ಹಸನಾಗಬಹುದು!
Published by: Sushma Chakre
First published: January 16, 2021, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories