Chikmagalur: ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡಿದ್ದ ಚಿಕ್ಕಮಗಳೂರಿನ ವ್ಯಕ್ತಿಗೆ ಬದುಕು ಕಟ್ಟಿಕೊಟ್ಟ ಸಂಚಾರಿ ಸಲೂನ್

Chikkamagaluru Lockdown: ಇಡೀ ದಿನ ಚಿಕ್ಕಮಗಳೂರು ನಗರದಲ್ಲಿ ಈ ಸಂಚಾರಿ ಸಲೂನ್ ಸಂಚರಿಸುತ್ತೆ. ಬೇಕಾದವರಿಗೆ ಮನೆ ಬಾಗಿಲಲ್ಲೇ ಕಟ್ಟಿಂಗ್, ಶೇವಿಂಗ್ ಮಾಡುತ್ತಾರೆ.

ಚಿಕ್ಕಮಗಳೂರಿನಲ್ಲಿ ಸಂಚಾರಿ ಸಲೂನ್

ಚಿಕ್ಕಮಗಳೂರಿನಲ್ಲಿ ಸಂಚಾರಿ ಸಲೂನ್

  • Share this:
ಚಿಕ್ಕಮಗಳೂರು : ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೋರ್ವ ಸಂಚಾರಿ ಸಲೂನ್ ಆರಂಭಿಸಿ ಬದುಕು ಕಟ್ಟಿಕೊಂಡಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ನಿವಾಸಿ ಶಿವಪ್ಪ ಲಾಕ್ ಡೌನ್​ಗೂ ಮುಂಚೆ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್‍ನಿಂದ ಸಲೂನ್‍ಗೆ ಬೀಗ ಬಿದ್ದ ಮೇಲೆ ಬದುಕಿಗಾಗಿ ಏನು ಮಾಡೋದು ಎಂದು ಶಿವಪ್ಪ ಯೋಚಿಸತೊಡಗಿದರು. ಬದುಕಿನ ದಾರಿ ಕಾಣದೇ ಪರಿತಪಿಸುತ್ತಿದ್ದರು. ಈ ವೇಳೆ ಫೇಸ್ಬುಕ್‍ನಲ್ಲಿ ಸ್ನೇಹಿತ ಹೇಳಿದ ಸಲಹೆ ಕೇಳಿ ಖಾಸಗಿ ಫೈನಾನ್ಸ್​ನಲ್ಲಿ 1,50,000 ಲೋನ್ ಮಾಡಿ ಲಗೇಜ್ ಆಟೋ ಖರೀದಿಸಿ ತಂದು ಅದನ್ನ ಸಂಚಾರಿ ಸಲೂನ್ ಆಗಿ ಪರಿವರ್ತಿಸಿದ್ದಾರೆ.

ಇಡೀ ದಿನ ಚಿಕ್ಕಮಗಳೂರು ನಗರದಲ್ಲಿ ಈ ಸಂಚಾರಿ ಸಲೂನ್ ಸಂಚರಿಸುತ್ತೆ. ಕ್ಷೌರಿಕ ಶಿವಪ್ಪ  ಬೇಕಾದವರಿಗೆ ಮನೆ ಬಾಗಿಲಲ್ಲೇ ಕಟ್ಟಿಂಗ್, ಶೇವಿಂಗ್ ಮಾಡುತ್ತಾರೆ. ಮನೆಯಲ್ಲಿ ಯಾರಾದ್ರು ಕೊರೋನಾ ಪಾಸಿಟಿವ್ ಬಂದಿರುವವರು ಇದ್ದಾರಾ ಎಂದು ಮಾಹಿತಿ ಪಡೆದು ಕಟ್ಟಿಗೆ-ಶೇವಿಂಗ್‍ಗೆ ಮುಂದಾಗುತ್ತಿದ್ದಾರೆ. ಕಟ್ಟಿಂಗ್ ಶಾಪ್‍ನಲ್ಲಿ ಕೆಲಸ ಮಾಡುವಾಗ ಪೀಸ್ ವರ್ಕ್ ಮಾಡುತ್ತಿದ್ದರು. ಈಗ ಪ್ರತಿ ದಿನ ಕನಿಷ್ಠ 800, ಗರಿಷ್ಠ 2000 ರೂಪಾಯಿವರೆಗೂ ದುಡಿಯುತ್ತಿದ್ದಾರೆ. ಇನ್ನು ಮುಂದಕ್ಕೆ ಇದೇ ಹೆಬ್ಬುಲಿ ಸಂಚಾರಿ ಸಲೂನ್‍ನಲ್ಲಿ ದುಡಿಮೆ ಮುಂದಾಗುತ್ತೇನೆ ಅಂತಿದ್ದಾರೆ ಸಂಚಾರಿ ಸಲೂನ್ ಶಿವಪ್ಪ.

ಇದನ್ನೂ ಓದಿ: ಸಿಎಂ ಪಿಎ ಎಂದು ಹೇಳಿಕೊಂಡು ಜನರಿಗೆ ಪಂಗನಾಮ; ಹಣ ಕಳೆದುಕೊಂಡವನಿಂದ ಮಂಡ್ಯದ ಎಸ್​ಪಿಗೆ ದೂರು

ಶಿವಪ್ಪನವರ ಈ ಸಂಚಾರಿ ಸಲೂನ್‍ಗೆ ಫೋನ್ ಮಾಡುವವರ ಸಂಖ್ಯೆಗೇನೂ ಕೊರತೆ ಇಲ್ಲ. ಯಾಕೆಂದರೆ, ಶಿವಪ್ಪ ಕಳೆದ ಒಂದು ತಿಂಗಳಿಂದ ಈ ಸಂಚಾರಿ ಸಲೂನ್‍ನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಲಾಕ್‍ಡೌನ್ ವೇಳೆಯಲ್ಲಂತೂ ಇದು ಇವರಿಗೆ ವರವಾಗಿದೆ. ಕಳೆದೊಂದು ವರ್ಷದಿಂದ ಹೀಗೇ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದ ಶಿವಪ್ಪ ಈ ವರ್ಷ ತಮ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹೀಗೆ ಸಂಚಾರಿ ಸಲೂನ್ ಮಾಡುವ ಮುನ್ನ ಹಳ್ಳಿ-ಹಳ್ಳಿಗೆ ಹೋಗಿ ಫೋನ್ ನಂಬರ್ ಕೊಟ್ಟಿದ್ದಾರೆ. ಸ್ನೇಹಿತರಿಗೆಲ್ಲಾ ಹೇಳಿದ್ದಾರೆ. ಈಗ ಬೇಕಾದವರು ಫೋನ್ ಮಾಡಿದರೆ ಮನೆ ಬಳಿಯೇ ಹೋಗಿ ಕಟ್ಟಿಂಗ್, ಶೇವಿಂಗ್ ಮಾಡಿ ಬರುತ್ತಾರೆ. ಹಳ್ಳಿ ಜನ ಫೋನ್ ಮಾಡಿದರೆ ಕನಿಷ್ಠ 8-10 ಜನ ಇರುತ್ತಾರೆ ಅಂದ್ರೆ ಹಳ್ಳಿಗೂ ಹೋಗಿ ಕಟ್ಟಿಂಗ್, ಶೇವಿಂಗ್ ಮಾಡಿ ಬರುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ಸಾವಿರಾರು ರೂಪಾಯಿ ಹಣ ದುಡಿಯುತ್ತಿದ್ದಾರೆ. ಸಲೂನ್ ಬಾಗಿಲು ಹಾಕಿದಾಗಿನಿಂದ ಕಟ್ಟಿಂಗ್ ಮಾಡಿಸದ ಜನ ರಸ್ತೆಯಲ್ಲಿ ಇದನ್ನ ನೋಡಿದ ಕೂಡಲೇ ಬಂದು ಕೂತು ಕಟ್ಟಿಂಗ್ ಮಾಡಿಸಿಕೊಂಡು ಹೋಗುತ್ತಿದ್ದಾರೆ.

Chikkamagaluru Lockdown: Chikmagalur Man Started Mobile Saloon after Losing Job during Covid Pandemic Lockdown.
ಚಿಕ್ಕಮಗಳೂರಿನಲ್ಲಿ ಸಂಚಾರಿ ಸಲೂನ್


ಇದನ್ನೂ ಓದಿ: ಹಾಸನ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಸ್ಥಳದಲ್ಲೇ ಮೂವರು ಸಾವು, ಓರ್ವನ ಸ್ಥಿತಿ ಗಂಭೀರ!

ಒಟ್ಟಾರೆ, ಇವರ ಯೋಚನೆ ಲಾಕ್‍ಡೌನ್ ವೇಳೆಯಲ್ಲಂತೂ ಸಖತ್ತಾಗೇ ವರ್ಕ್ ಔಟ್ ಆಗಿದೆ. ಇದರಿಂದ ಚಿಕ್ಕಮಗಳೂರಿನ ಜನರಿಗೂ ಅನುಕೂಲವಾಗಿದೆ. ಚಿಕ್ಕಮಗಳೂರಿನಲ್ಲಿ ಲಾಕ್‍ಡೌನ್ ಇರುವುದರಿಂದ ಸಲೂನ್ ಓಪನ್ ಮಾಡುವಂತಿಲ್ಲ. ಜನ ಕಟ್ಟಿಂಗ್-ಶೇವಿಂಗ್ ಮಾಡಿಸದೆ ಇರೋಕಾಗ್ತಿಲ್ಲ. ಕೆಲವರು ಅಲ್ಲಿ-ಇಲ್ಲಿ ಕದ್ದುಮುಚ್ಚಿ ಅಂಗಡಿ ಸೇರಿಕೊಳ್ತಿದ್ರು. ಆದರೆ, ಇವರು ರಾಜಾರೋಷವಾಗಿ ಎಲ್ಲೆಂದರಲ್ಲಿ ನಿಂತು ಬೇಕಾದಂತೆ ಕಟ್ಟಿಂಗ್ ಮಾಡ್ತಿದ್ದಾರೆ. ಎಷ್ಟೆ ಜನ ಬಂದ್ರು ಒಳಗೆ ಕೂರೋದಕ್ಕೆ ಆಗೋದು ಕೇವಲ ಒಬ್ಬರಷ್ಟೆ.

ಅದೇನೇ ಇರಲಿ, ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಹೀಗೆ ವಿಭಿನ್ನವಾಗಿ ಯೋಚಿಸಿ ಹೊಸ-ಹೊಸ ಯೋಜನೆಗಳಿಗೆ ಮುಂದಾದರೆ ನಷ್ಟ ಅನ್ನೋ ಮಾತೇ ಬರೋದಿಲ್ಲ ಅನಿಸುತ್ತದೆ.

(ವರದಿ: ವೀರೇಶ್ ಹೆಚ್ ಜಿ)
Published by:Sushma Chakre
First published: