ಚಿಕ್ಕಮಗಳೂರು: ಕರೆದರೂ ಎದ್ದಿಲ್ಲವೆಂದು ಕುಡಿದೇಟಿನಲ್ಲಿ ತಂದೆಯನ್ನೇ ಕೊಂದ ಮಗ

ಕಿರಿಯ ಮಗ ಮಂಜುನಾಥ್​ಗೆ ಮದುವೆಯಾಗಿಲ್ಲ. ಬಾಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಹುಷಾರಿಲ್ಲ. ಹಾಸಿಗೆ ಹಿಡಿದಿದ್ದಾರೆ. ಹಾಗಾಗಿ, ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು.

ಕೊಲೆ ಮಾಡಿದ ವ್ಯಕ್ತಿ

ಕೊಲೆ ಮಾಡಿದ ವ್ಯಕ್ತಿ

  • Share this:
ಚಿಕ್ಕಮಗಳೂರು: ಅನೇಕರು ತಂದೆಯನ್ನು ದೇವರಂತೆ ಕಾಣುತ್ತಾರೆ. ಅದಕ್ಕಾಗಿಯೇ ಎಲ್ಲಾದರೂ ದೂರದ ಪ್ರಯಾಣ ಮಾಡುವುದಕ್ಕೂ ಮೊದಲು ಕಾಲಿಗೆ ನಮಸ್ಕರಿಸಿ ತಂದೆಯ ಆಶೀರ್ವಾದ ಪಡೆಯುತ್ತಾರೆ. ಆದರೆ, ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆ ಮಾಡಿ ಬಿಟ್ಟರೆ? ಹೀಗೊಂದು ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ತಂದೆ ಒಲೆ ಪಕ್ಕ ಮಲಗಿದ್ದ. ಮಗ ಕರೆದರೂ ಆತನಿಗೆ ಎಚ್ಚರವಾಗಲಿಲ್ಲ. ಈ ವೇಳೆ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನಿಗೆ ಹೊಡೆದು ಆತನನ್ನು ಕೊಂದಿದ್ದಾನೆ.  

ಮೃತ ದುರ್ದೈವಿಯನ್ನ 63 ವರ್ಷದ ಬಾಸಯ್ಯ ಎಂದು ಗುರುತಿಸಲಾಗಿದೆ. 33 ವರ್ಷದ ಮಂಜುನಾಥ್ ಅಪ್ಪನನ್ನೇ ಕೊಲೆಗೈದ ಪುತ್ರ. ಮೃತ ಬಾಸಯ್ಯನಿಗೆ ಇಬ್ಬರು ಪುತ್ರ. ಹಿರಿಯ ಮಗ ಮದುವೆಯಾಗಿ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್​ಗೆ ಮದುವೆಯಾಗಿಲ್ಲ. ಬಾಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಹುಷಾರಿಲ್ಲ. ಹಾಸಿಗೆ ಹಿಡಿದಿದ್ದಾರೆ. ಹಾಗಾಗಿ, ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು.

ನಿನ್ನೆ ಸಂಜೆ ಇಬ್ಬರು ಕೂಲಿ ಮುಗಿಸಿಕೊಂಡು ಬಂದಿದ್ದರು. ಅಪ್ಪ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದ. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಬೇಕು ಎದ್ದೇಳು ಎಂದು ಹೇಳಿದ್ದಾನೆ. ಆದ್ರೆ, ಅಪ್ಪ ಎದ್ದಿಲ್ಲ. ಕೂಡಲೇ ಎಣ್ಣೆ ಏಟಲ್ಲಿ ಟೈಟಾಗಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅಪ್ಪ ಎದ್ದಿದ್ದ. ಆದರೆ, ಏನೂ ಆಗಿರಲಿಲ್ಲ ಚೆನ್ನಾಗಿದ್ದರು. ಬಳಿಕ ಮಗನೇ ಅಡುಗೆ ಮಾಡಿ ಅಪ್ಪನಿಗೆ ಊಟ ಹಾಕಿ ಮಲಗಿಸಿದ್ದಾನೆ. ಆದರೆ, ಬೆಳಗ್ಗೆ ಏಳು ಗಂಟೆಗೆ ಎದ್ದು ನೋಡಿದಾಗ ಅಪ್ಪನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದರು. ಬಳಿಕ ಮಗನೇ ಊರಿನಲ್ಲಿ ರಾತ್ರಿ ಹೀಗಿಗಾಯ್ತು ಎಂದು ಹೇಳಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮಂಜುನಾಥ್ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:Rajesh Duggumane
First published: