HOME » NEWS » State » CHIKMAGALUR LOCKDOWN CHIKKAMAGALURU WILL BE LOCKED TILL MAY 4 AS KARNATAKA GOVERNMENT ORDER SCT VCTV

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಚಿಕ್ಕಮಗಳೂರು ಲಾಕ್​ಡೌನ್; 13 ದಿನ ಕಾಫಿನಾಡು ಸ್ತಬ್ಧ

ದಿನೇ-ದಿನೇ ಹೆಚ್ಚುತ್ತಿರೋ ಕೇಸ್‍ಗಳನ್ನ ನಿಯಂತ್ರಿಸಲು ಜಿಲ್ಲಾಡಳಿತ ಲಾಕ್‍ಡೌನ್‍ಗೆ ಮುಂದಾಗಿದ್ದು, ಮೇ 4ರವರೆಗೆ ಚಿಕ್ಕಮಗಳೂರು ಸಂಪೂರ್ಣ ಸ್ತಬ್ಧವಾಗಲಿದೆ.

news18-kannada
Updated:April 23, 2021, 7:38 AM IST
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಚಿಕ್ಕಮಗಳೂರು ಲಾಕ್​ಡೌನ್; 13 ದಿನ ಕಾಫಿನಾಡು ಸ್ತಬ್ಧ
ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್
  • Share this:
ಚಿಕ್ಕಮಗಳೂರು : ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನ ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಲಾಕ್‍ಡೌಣ್ ಮೊರೆ ಹೋಗಿದೆ. ಕೊರೋನಾ ಎರಡನೇ ಅಲೆಯ ಆರಂಭದ ದಿನಗಳಲ್ಲಿ ಪ್ರತಿನಿತ್ಯ 20-30-40 ಬರುತ್ತಿದ್ದ ಕೊರೋನಾ ಕೇಸ್ ಕಳೆದ ಮೂರ್ನಾಲ್ಕು ದಿನದಿಂದ ನೂರರ ಗಡಿ ದಾಟಿದೆ. ನಿನ್ನೆ ಜಿಲ್ಲೆಯಲ್ಲಿ 198 ಪ್ರಕರಣಗಳು ಪತ್ತೆಯಾಗಿವೆ.

ಹೀಗೆ ದಿನೇ-ದಿನೇ ಹೆಚ್ಚುತ್ತಿರೋ ಕೇಸ್‍ಗಳನ್ನ ನಿಯಂತ್ರಿಸಲು ಜಿಲ್ಲಾಡಳಿತ ಲಾಕ್‍ಡೌನ್‍ಗೆ ಮುಂದಾಗಿದ್ದು, ನಿನ್ನೆಯಿಂದ ಮೇ 4ರವರೆಗೆ ಚಿಕ್ಕಮಗಳೂರು ಸಂಪೂರ್ಣ ಸ್ತಬ್ಧವಾಗಲಿದೆ. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಇದನ್ನ ನಿಯಂತ್ರಣ ಮಾಡದಿದ್ದರೆ ಮುಂದೆ ಬಹಳ ಅನಾಹುತವಾಗಲಿದೆ ಎಂದು ಜಿಲ್ಲಾಧಿಕಾರಿ ಲಾಕ್‍ಡೌನ್ ನಿರ್ಧಾರಕ್ಕೆ ಮುಂದಾಗಿದ್ದು, ಸಾರ್ವಜನಿಕರು ಈ ಹೆಮ್ಮಾರಿ ಕೊರೋನಾವನ್ನ ನಿಯಂತ್ರಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅಗತ್ಯ ವಸ್ತುಗಳನ್ನ ಹೊರತುಪಡಿಸಿ ಇಡೀ ಜಿಲ್ಲೆಯನ್ನ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ನಿನ್ನೆಯಿಂದ 13 ದಿನಗಳ ಕಾಲ ಜಿಲ್ಲೆಯಲ್ಲಿ ಸಿನಿಮಾ ಟಾಕೀಸ್, ಮಾಲ್, ದೇವಸ್ಥಾನ, ಚರ್ಚ್, ಮಸೀದಿ, ಶಾಲಾ-ಕಾಲೇಜು ಎಲ್ಲವೂ ಬಂದ್ ಇರಲಿದೆ. ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳನ್ನ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು 13 ದಿನ ಬಂದ್ ಮಾಡುವಂತೆ ಆದೇಶಿಸಿಲಾಗಿದೆ. ಅಗತ್ಯ ವಸ್ತುಗಳ ಮಾರಾಟ ಅಂಗಡಿಯಲ್ಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನನ್ನ ಕಡ್ಡಾಯವಾಗಿ ಕಾಪಾಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಂದ ರಾಜ್ಯಕ್ಕೆ ಹೆಚ್ಚುವರಿ 25,000 ರೆಮ್ಡಿಸಿವಿರ್ ಔಷಧ ಲಭ್ಯ

ಇನ್ನು ನಿನ್ನೆ ಕೂಡ 146 ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಫಿನಾಡಲ್ಲಿ ಪತ್ತೆಯಾಗಿದ್ದು, ದಿನೇ ದಿನೇ ಹೆಚ್ಚುತ್ತಿರೋ ಪ್ರಕರಣಗಳಿಂದ ಚಿಕ್ಕಮಗಳೂರಿನಲ್ಲಿ ಕೊರೊನಾ ಆತಂಕ ಉಂಟಾಗಿದೆ. ಜನರು ಈಗಾಗಲೇ ಭಯದಲ್ಲೇ ಓಡಾಡುತ್ತಿದ್ದು ದಿಢೀರ್ ಲಾಕ್ ಡೌನ್ ಮಾಡಿರೋದ್ರಿಂದ ಗೊಂದಲಕ್ಕೆ ಒಳಗಾಗಿದ್ದಾರೆ.

ಬೆಳಿಗ್ಗೆಯಿಂದ ಮಾಮೂಲಿಯಂತೆ ವ್ಯಾಪಾರ ವಹೀವಾಟಿನಲ್ಲಿ ತೊಡಗಿದ್ದ ಜನರು ಧಿಡೀರ್ ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಮಧ್ಯಾಹ್ನ ರಸ್ತೆಗಿಳಿದ ಪೊಲೀಸರು ಅಂಗಡಿ ಮುಂಗಟ್ಟು ಮುಚ್ಚಿವಂತೆ ವರ್ತಕರಿಗೆ ಮೈಕ್ ನಲ್ಲಿ ಅನೌನ್ಸ್ ಮಾಡಿದ್ರು, ನಂತರ ಅಂಗಡಿಗಳನ್ನ ಪೊಲೀಸರು ಬಂದ್ ಮಾಡಿಸಿದರು.

ಒಟ್ಟಾರೆ, ಧಿಡೀರ್ ಲಾಕ್ ಡೌನ್ ನಿಂದ ವರ್ತಕರು ವಿರೋಧ ವ್ಯಕ್ತಪಡಿಸಿ ಕೊನೆಗೆ ಅಂಗಡಿಗಳನ್ನ ಮುಚ್ಚಿ ಮನೆಗೆ ತೆರೆಳಿದರು. ಸದ್ಯ ಕಾಫಿನಾಡು 13 ದಿನಗಳ ಕಾಲ ಸ್ತಬ್ದವಾಗಲಿದ್ದು ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ತೊಂದರೆ ಇಲ್ಲ ಅಂತ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Youtube Video

ಕೊರೊನಾ ಎರಡನೇ ಆರ್ಭಟದಿಂದ ಕಂಗಲಾಗಿದ್ದ ಜಿಲ್ಲಾಡಳಿತೆ ಕೊನೆಗೆ ಲಾಕ್ ಡೌನ್ ಮೊರೆ ಹೋಗಿದ್ದು, ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ರಮೇಶ್ ಮನವಿ ಮಾಡಿದ್ದಾರೆ.
Published by: Sushma Chakre
First published: April 23, 2021, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories