HOME » NEWS » State » CHIKMAGALUR JDS LEADER YSV DATTA ANGRY ON POLITICAL SYSTEM AFTER HATHRAS GANG RAPE SCT

ರಾಮ, ಅಯೋಧ್ಯೆ, ಹಿಂದುತ್ವ ಎಂದರೆ ರಾಜಕಾರಣಿಗಳು ನೆಟ್ಟಗಾಗ್ತಾರೆ; ವೈಎಸ್​ವಿ ದತ್ತ ಬೇಸರ

ರಾಮ, ಅಯೋಧ್ಯೆ, ಹಿಂದುತ್ವ ಅಂದರೆ ಪ್ರಪಂಚ ನೆಟ್ಟಗಾಗುತ್ತೆ ಎಂದು ಯುವಕರಲ್ಲಿ ತಪ್ಪುಕಲ್ಪನೆ ಇದೆ. ಆದರೆ, ಪ್ರಪಂಚ ನೆಟ್ಟಗಾಗುತ್ತೋ ಇಲ್ಲವೋ ಗೊತ್ತಿಲ್ಲ. ರಾಜಕಾರಣಿಗಳು ಈ ಬಗ್ಗೆ ಮಾತನಾಡಿದರೆ ಸಾಕು ನೆಟ್ಟಗಾಗ್ತಾರೆ ಎಂದು ಜೆಡಿಎಸ್​ ನಾಯಕ ವೈಎಸ್​ವಿ ದತ್ತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:October 3, 2020, 8:27 AM IST
ರಾಮ, ಅಯೋಧ್ಯೆ, ಹಿಂದುತ್ವ ಎಂದರೆ ರಾಜಕಾರಣಿಗಳು ನೆಟ್ಟಗಾಗ್ತಾರೆ; ವೈಎಸ್​ವಿ ದತ್ತ ಬೇಸರ
ಚಿಕ್ಕಮಗಳೂರಿನಲ್ಲಿ ದಲಿತರ ಮನೆಯಲ್ಲಿ ಮಾಜಿ ಶಾಸಕ ವೈಎಸ್​ವಿ ದತ್ತ
  • Share this:
ಚಿಕ್ಕಮಗಳೂರು (ಅ. 3): ರಾಮ, ಅಯೋಧ್ಯೆ, ಹಿಂದುತ್ವ ಎಂದರೆ ಪ್ರಪಂಚ ನೆಟ್ಟಗೆ ಆಗುತ್ತದೆ ಎಂದು ನಮ್ಮ ಯುವ ಸಮೂಹ ಅಂದುಕೊಂಡಿದೆ. ಆದರೆ, ಪ್ರಪಂಚ ನೆಟ್ಟಗೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ನಮ್ಮ ರಾಜಕಾರಣಿಗಳು ಮಾತ್ರ ನೆಟ್ಟಗಾಗ್ತಾರೆ. ಇಂತಹ ಭಿನ್ನಾಭಿಪ್ರಾಯಗಳಿಂದಾಗಿ ನಾವು ನಮ್ಮ ಅಕ್ಕ-ತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆತಂಕ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನದ ಬಳಿಕ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ನಮ್ಮದು ರಾಮರಾಜ್ಯ ಅಂತಾರೆ, ಮರ್ಯಾದೆ ಪುರುಷೋತ್ತಮ ರಾಮ ಅಂತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿದ್ದಕ್ಕೆ ಸಂಭ್ರಮಿಸುತ್ತಾರೆ. ರಾಮ ದೇವಾಲಯ ಬಿಡುಗಡೆಯಾಗಿದ್ದಕ್ಕೆ ಸಿಹಿ ಹಂಚುತ್ತಾರೆ. ಆದರೆ, ಓರ್ವ ದಲಿತ ಹೆಣ್ಣು ಮಗಳನ್ನು ರಾತ್ರಿ ಅತ್ಯಾಚಾರ ಮಾಡಿ, ಅವಳನ್ನು ಕೊಂದು ಶಿಕ್ಷೆಯನ್ನು ತಪ್ಪಿಸುವುದಕ್ಕೆ ರಾತ್ರೋರಾತ್ರಿ ಗುಟ್ಟಾಗಿ ಕುಟುಂಬಕ್ಕೂ ಹೇಳದೆ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ವೈಎಸ್​ವಿ ದತ್ತ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: Bangalore News: ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ. ದಂಡ!

ಇಂತಹ ಹೀನಕೃತ್ಯಕ್ಕೆ ಸರ್ಕಾರವೇ ಬೆಂಬಲವಾಗಿ ನಿಲ್ಲುತ್ತದೆ ಎಂದರೆ ಇಂತಹ ಸರ್ಕಾರವನ್ನು ಮನುಷ್ಯ ಸರ್ಕಾರ ಎನ್ನಬೇಕೋ ಅಥವಾ ಮೃಗೀಯ ಸರ್ಕಾರ ಎನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ವೈಎಸ್​ವಿ ದತ್ತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Youtube Video

ಇದಕ್ಕೆ ನನ್ನ ವಿಪರೀತವಾದ ವಿರೋಧವಿದೆ. ನಾವು ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ. ರಾಮ, ಅಯೋಧ್ಯೆ, ಹಿಂದುತ್ವ ಅಂದರೆ ಪ್ರಪಂಚ ನೆಟ್ಟಗಾಗುತ್ತೆ ಎಂದು ಯುವಕರಲ್ಲಿ ತಪ್ಪುಕಲ್ಪನೆ ಇದೆ. ಆದರೆ, ಪ್ರಪಂಚ ನೆಟ್ಟಗಾಗುತ್ತೋ ಇಲ್ಲವೋ ಗೊತ್ತಿಲ್ಲ. ರಾಜಕಾರಣಿಗಳು ಈ ಬಗ್ಗೆ ಮಾತನಾಡಿದರೆ ಸಾಕು ನೆಟ್ಟಗಾಗ್ತಾರೆ. ಹಾಗಾಗಿ, ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ ಎಂದಿದ್ದಾರೆ.
Published by: Sushma Chakre
First published: October 3, 2020, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories