ಚಿಕ್ಕಮಗಳೂರು (ಮಾ. 12): ಮೂರು ದಿನಗಳ ಹಿಂದೆ ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಫಸಲು ನೀಡುತ್ತಿದ್ದ ನೂರಾರು ಅಡಿಕೆ ಮತ್ತು ತೆಂಗಿನ ಮರಗಳನ್ನು ಕಡಿದು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಕೂಡ ಅದೇ ರೀತಿಯ ಘಟನೆ ನಡೆದಿದ್ದು, ಬರೋಬ್ಬರಿ 4 ಎಕರೆ ಜಾಗದಲ್ಲಿ ಹೂ ಬಿಟ್ಟ ಕಾಫಿ ಗಿಡಗಳನ್ನು ಅರಣ್ಯಾಧಿಕಾರಿಗಳು ಕಡಿದು ಉರುಳಿಸಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಜಾಗದ ಒತ್ತುವರಿ ಆರೋಪದಲ್ಲಿ ಇಲ್ಲಿನ 4 ಎಕರೆ ಜಮೀನಿನಲ್ಲಿ ಹೂ ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಅರಣ್ಯ ಅಧಿಕಾರಿಗಳು ಕಡಿಸಿದ್ದಾರೆ. ಅರಣ್ಯಾಧಿಕಾರಿಗಳ ದಿಢೀರ್ ನಿರ್ಧಾರಕ್ಕೆ ತೋಟದ ಮಾಲೀಕ ಕಂಗಾಲಾಗಿದ್ದಾರೆ.
ಇದನ್ನೂ ಓದಿ: IT Raids in Shivamogga: ಶಿವಮೊಗ್ಗದ ಚಿರಾಗ್ ಇರಿಗೇಷನ್ ಅಂಗಡಿ ಮೇಲೆ ಐಟಿ ದಾಳಿ
ಕೊಪ್ಪ ತಾಲೂಕಿನ ದೇವಗೋಡು ಗ್ರಾಮದ ದಿನೇಶ್ ಹೆಬ್ಬಾರ್ ಎಂಬುವರಿಗೆ ಸೇರಿದ ಕಾಫಿತೋಟ ಸರ್ವೆ ನಂ. 78ರಲ್ಲಿದೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪದಲ್ಲಿ 4 ಎಕರೆ ಜಾಗದಲ್ಲಿ ಹೂ ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಕಡಿಯಲಾಗಿದೆ. ಕಾಯಿ ಬಿಡಲು ಸಿದ್ಧವಾಗಿದ್ದ ಗಿಡಗಳನ್ನು ಕಡಿದಿರುವುದಕ್ಕೆ ತೋಟದ ಮಾಲೀಕ ದಿನೇಶ್ ಹೆಬ್ಬಾರ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಅಡಿಕೆ, ತೆಂಗಿನ ಮರಗಳ ಮಾರಣಹೋಮ; ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ಎತ್ತಂಗಡಿ
ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಫಸಲು ಕೊಡುತ್ತಿದ್ದ
ನೂರಾರು ಅಡಿಗೆ ಮರಗಳು ಹಾಗೂ 50ಕ್ಕೂ ಹೆಚ್ಚು ತೆಂಗಿನ ಮರಗಳನ್ನು 3 ದಿನಗಳ ಹಿಂದೆ ಕಡಿದು ಹಾಕಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅಮ್ಮನಘಟ್ಟ ವೃತ್ತದ ಗ್ರಾಮಲೆಕ್ಕಿಗ ಮುರಳಿ ಅವರನ್ನು ಅಮಾನತು ಮಾಡಿದ್ದರು. ಹಾಗೇ, ತಹಶೀಲ್ದಾರ್ ಮಮತಾ ಅವರನ್ನು ಕೂಡ ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಕೊಯಮತ್ತೂರಿನಲ್ಲಿ ತೀರ್ಥಹಳ್ಳಿ ಮೂಲದ ನಕ್ಸಲ್ ಶೋಭಾ ಬಂಧನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ