• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ಮಳೆಗೆ ಮುರಿದು ಬಿದ್ದ ಮನೆ, ಟೆಂಟ್‌ನಲ್ಲೇ ನಿತ್ಯ ವಾಸ! ಇದು ಚಿಕ್ಕಮಗಳೂರಿನ ಬಡ ಕುಟುಂಬದ ವ್ಯಥೆ

Chikkamagaluru: ಮಳೆಗೆ ಮುರಿದು ಬಿದ್ದ ಮನೆ, ಟೆಂಟ್‌ನಲ್ಲೇ ನಿತ್ಯ ವಾಸ! ಇದು ಚಿಕ್ಕಮಗಳೂರಿನ ಬಡ ಕುಟುಂಬದ ವ್ಯಥೆ

ಸಚಿವರಿಂದ ಸಹಾಯ

ಸಚಿವರಿಂದ ಸಹಾಯ

ಮಲೆನಾಡಲ್ಲಿ ಸುರಿಯುತ್ತಿರುವ ಮಹಾಮಳೆ ನೂರಾರು ಜನರನ್ನ ಬೀದಿಗೆ ಬೀಳಿಸುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಬದುಕು ಶೋಚನೀಯವಾಗಿದೆ. ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುತ್ತಿರೋ ಮೂಡಿಗೆರೆಯ ಬಡ ಕುಟುಂಬದ ಕಥೆ ಕಣ್ಣೀರು ತರಿಸುವಂತಿದೆ.

  • Share this:

ಚಿಕ್ಕಮಗಳೂರು: ಮಲೆನಾಡಲ್ಲಿ (Malenadu) ಸುರಿಯುತ್ತಿರುವ ಮಹಾಮಳೆ (Heavy Rain) ನೂರಾರು ಜನರನ್ನ ಬೀದಿಗೆ ಬೀಳಿಸುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಬದುಕು (Life) ಶೋಚನೀಯ ಸ್ಥಿತಿಗೆ ತಂದೊಡ್ಡಿದೆ‌. ಮಳೆಯ ನಡುವೆ ಟಾರ್ಪಲ್ (Tarpaulin) ಕಟ್ಟಿಕೊಂಡು ಬದುಕು ಸಾಗಿಸುತ್ತಿರೋ ಮೂಡಿಗೆರೆಯ (Mudigere) ಬಡ ಕುಟುಂಬದ (Poor Family) ಕಥೆ ಕಣ್ಣೀರು ತರಿಸುವಂತಿದೆ. ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ (Kottigehara) ಸಮೀಪದ ಆಜಾದ್ ರಸ್ತೆಯಲ್ಲಿರುವ ಲೀಲಾ ಎಂಬುವರ ಮನೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಹಾನಿಯಾಗಿದ್ದು, ನೆಲೆಸಲು ನೆರಳಿಲ್ಲದೇ ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂ(Tent) ಟ್ ಕಟ್ಟಿಕೊಂಡು ದಿನ ದೂಡುತ್ತಿದ್ದು, ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.


ಮಳೆಯಿಂದ ಕುಸಿದು ಹೋದ ಮನೆ


ಲೀಲಾ ಅವರಿಗೆ ನಾಲ್ಕು ಜನ ಮಕ್ಕಳಿದ್ದು, ಗಂಡ ಮೃತಪಟ್ಟಿದ್ದಾರೆ. ಇದ್ದ ಮನೆಯೂ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಗೋಡೆ ಗಳು ಮಾತ್ರ ಉಳಿದುಕೊಂಡಿದೆ. ಮನೆ ಕಳೆದುಕೊಂಡು ದಿಕ್ಕು ಕಾಣದ ಅವರು ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂಟ್ ಕಟ್ಟಿಕೊಂಡು ಅಲ್ಲೇ ವಾಸ ಮಾಡುತ್ತಿದ್ದಾರೆ.


ಮುರಿದು ಬಿದ್ದ ಮನೆಯ.ಲ್ಲಿ ಬಡ ಕುಟುಂಬದ ವಾಸ


ನಾಲ್ವರು ಮಕ್ಕಳೊಂದಿಗೆ ಟೆಂಟ್‌ನಲ್ಲಿ ವಾಸ


ಮನೆ ಕಳೆದುಕೊಂಡ ಲೀಲಾ ನಾಲ್ಕು ಜನ ಮಕ್ಕಳೊಂದಿಗೆ ಟಾರ್ಪಲ್‍ನಿಂದ ನಿರ್ಮಿಸಿ ಕೊಂಡಿರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಹೊರಗಡೆ ಭೋರ್ಗರೆಯುವ ಮಳೆ, ಮತ್ತೊಂದು ಕಡೆ ಚಳಿ ಗಾಳಿಯ ನಡುವೆ ಜೀವ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಟಾರ್ಪಲ್‍ನಿಂದ ನಿರ್ಮಿಸಿಕೊಂಡಿರುವ ಗುಡಿಸಲಿನಲ್ಲಿ ಮಳೆ ನೀರು ನುಗ್ಗತ್ತದೆ. ನೆಲವೆಲ್ಲ ತಂಡಿಯಾಗಿದೆ.


ಇದನ್ನೂ ಓದಿ: Uttara Kannada Rain: ಮಳೆಯ ಆರ್ಭಟಕ್ಕೆ ನಲುಗಿದ ಉತ್ತರ ಕನ್ನಡ ಜಿಲ್ಲೆ, ಜೀವನದಿಗಳಲ್ಲಿ ಪ್ರವಾಹ!


 ಓದು ಬಿಟ್ಟು, ದುಡಿಯುತ್ತಿರುವ ಮಗಳು


ಮನೆಯ ಕಷ್ಟವನ್ನು ನೋಡಿ ಓದುತ್ತಿದ್ದ ಓರ್ವ ಮಗಳು ಓದು ನಿಲ್ಲಿಸಿ ದಿನಗೂಲಿಗೆ ಹೋಗಿ ದುಡಿದು ತಂದು ಮನೆ ನಿರ್ವಹಿಸುವ ಸ್ಥಿತಿ ಇದ್ದು ಇಂದೊಂದು ಕರುಣಾ ಜನಕ ಕಥೆಯಾಗಿದೆ. ಲೀಲಾ ಅವರ ಮೂರು ಜನ ಮಕ್ಕಳು ಸದ್ಯ ಓದುತ್ತಿದ್ದಾರೆ. ಅವರು ಈ ಗುಡಿಸನಲ್ಲಿ ಬುಡ್ಡಿಯನ್ನಿಟ್ಟುಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಇಲ್ಲದೇ ಮಕ್ಕಳು ಓದಲು ಹರಸಾಹಸ ಪಡುವಂತಾಗಿದೆ.


ಓದಲು ಕಷ್ಟಪಡುತ್ತಿರುವ ಮಕ್ಕಳು


ಬಡ ಕುಟುಂಬಕ್ಕೆ ಸಹಾಯ ಮಾಡಿದ ಸಚಿವರು


ಮಳೆ ಲೀಲಾ ಅವರ ಬದುಕು ಮೂರಾಬಟ್ಟೆಯಾಗಿ ಸಿದೆ. ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಲೀಲಾ ಅವರ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕಿದೆ. ಇನ್ನು ಲೀಲಾ ಕುಟುಂಬದ ಸ್ಥಿತಿ ಕಂಡು ಸ್ಥಳೀಯೊಬ್ಬರು ಉಸ್ತುವಾರಿ ಸಚಿವರಿಗೆ ಮಾಹಿತಿ ತಿಳಿಸುತ್ತಿದ್ದಂತೆ ಲೀಲಾ ಮನೆಗೆ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಭೇಟಿ, ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಸರ್ಕಾರ ನಿಮ್ಮೊಟ್ಟಿಗೆ ಇದೆ, ಕೂಡಲೇ ಪರಿಹಾರ ಕೊಡತ್ತೇವೆ ಎಂದು ಭರವಸೆ ನೀಡಿದರು.


ಸಚಿವರಿಂದ ಸಹಾಯಹಸ್ತ


50 ಸಾವಿರ ರೂಪಾಯಿ ನೀಡಿದ ಬೈರತಿ ಬಸವರಾಜ್


ಇನ್ನು ಬಡ ಕುಟುಂಬ ಸ್ಥಿತಿ ಕಂಡ ಉಸ್ತುವಾರಿ ಸಚಿವರು ತಕ್ಷಣವೇ ತಮ್ಮ ಜೇಬಿನಲ್ಲಿದ್ದ 50 ಸಾವಿರ ಹಣ ನೀಡಿ ಕುಟುಂಬದ ನೆರವಿಗೆ ನಿಂತರು. 50 ಸಾವಿರ ಹಣ ನೀಡಿ ಇದನ್ನ ಮಕ್ಕಳ ವಿದ್ಯಾಭ್ಯಾಸ ಕ್ಕೆ ಬಳಸಿ ಸರ್ಕಾರದ ಪರಿಹಾರ ದಲ್ಲಿ ಮನೆ ಕಟ್ಟಿಸಿಕೊಳ್ಳಿ ಎಂದರು...
ನ್ಯೂಸ್ 18 ವರದಿ ಬಿತ್ತರಿಸಿದ ಕಲವೇ ಕ್ಷಣಸಲ್ಲಿ ಸ್ಥಳಕ್ಕೆ ಉಸ್ತುವಾರಿ ಸಚಿವರು ಭೇಟಿ ನೀಡಿದ್ದಾರೆ.


ಇದನ್ನೂ ಓದಿ: Chikkamagaluru Rain: ಮಲೆನಾಡಲ್ಲಿ ಮುಂದುವರೆದ ಮಳೆಯ ರೌದ್ರನರ್ತನ, ವರುಣನ ಅಬ್ಬರಕ್ಕೆ ಮನೆ ಕುಸಿತ


ನ್ಯೂಸ್ 18 ವರದಿಗೆ ಸ್ಪಂದಿಸಿದ ಸಚಿವ


ಲೀಲಾ ರವರ ಕರುಣಾಜನಕ ಕಥೆಯನ್ನ ಬಗ್ಗೆ ನ್ಯೂಸ್ 18 ವರದಿ ಮಾಡಿತ್ತು. ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

top videos
    First published: