HOME » NEWS » State » CHIKMAGALUR DISTRICT COLLECTOR SLAPS REVENUE INSPECTOR VIDEO GOES VIRAL RMD

ಸ್ಥಳೀಯರಿಗೆ ಬಾಕಿ ಮೊತ್ತ ಕೊಡದ ಅಧಿಕಾರಿಗೆ ನಡುರಸ್ತೆಯಲ್ಲೇ ಕೆನ್ನೆಗೆ ಬಾರಿಸಿದ ಚಿಕ್ಕಮಗಳೂರು ಡಿಸಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಿರೇಬೈಲ್​​ನಲ್ಲಿ ಘಟನೆ ನಡೆದಿದೆ. ಡಿಸಿ ಬಗಾದಿ ಗೌತಮ್​ ಕಂದಾಯ ನಿರೀಕ್ಷಕ (ಆರ್​ಐ) ಅಜ್ಜೆಗೌಡರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜಿಲ್ಲಾಧಿಕಾರಿ ಬಗಾದಿ ಗೌತಮ್ ಆಕ್ರೋಶ ನೋಡಿ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

news18-kannada
Updated:January 23, 2020, 9:48 AM IST
ಸ್ಥಳೀಯರಿಗೆ ಬಾಕಿ ಮೊತ್ತ ಕೊಡದ ಅಧಿಕಾರಿಗೆ ನಡುರಸ್ತೆಯಲ್ಲೇ ಕೆನ್ನೆಗೆ ಬಾರಿಸಿದ ಚಿಕ್ಕಮಗಳೂರು ಡಿಸಿ
ವೈರಲ್​ ಆದ ದೃಶ್ಯದ ತುಣುಕು
  • Share this:
ಚಿಕ್ಕಮಗಳೂರು (ಜ.23): ಭಾರೀ ಮಳೆಯಿಂದ ಇಡೀ ರಾಜ್ಯವೇ ತತ್ತರಿಸಿತ್ತು. ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗ ಪ್ರವಾಹಕ್ಕೆ ತತ್ತರಿಸಿತ್ತು. ಇದಕ್ಕೆ ಕಾಫಿನಾಡು ಚಿಕ್ಕಮಗಳೂರು ಕೂಡ ಹೊರತಾಗಿರಲಿಲ್ಲ. ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಅನೇಕ ಮನೆಗಳು ನೆಲಕ್ಕುರುಳಿದ್ದವು. ಈ ವೇಳೆ ಸ್ಥಳಿಯರೇ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದರು. ಇದರ ಬಾಕಿ ಮೊತ್ತ ಕೊಡದ ಅಧಿಕಾರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಡುರಸ್ತೆಯಲ್ಲೇ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹಿರೇಬೈಲ್​​ನಲ್ಲಿ ಘಟನೆ ನಡೆದಿದೆ. ಡಿಸಿ ಬಗಾದಿ ಗೌತಮ್​ ಕಂದಾಯ ನಿರೀಕ್ಷಕ (ಆರ್​ಐ) ಅಜ್ಜೆಗೌಡರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಅಗತ್ಯ ವಸ್ತುಗಳು ತುರ್ತಾಗಿ ಬೇಕಿದ್ದರಿಂದ ಸ್ಥಳೀಯರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದರು.

ಇದರ ಮೊತ್ತವನ್ನು ನಂತರ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ, ಈವರೆಗೂ ಜನರಿಗೆ ಹಣ ಪಾವತಿ ಆಗಿಲ್ಲ. ಈ ಬೆಳವಣಿಗೆಯಿಂದ ಬೇಸರಗೊಂಡು ಡಿಸಿ  ಕಪಾಳಮೋಕ್ಷ ಮಾಡಿದ್ದಾರೆ. ಜಿಲ್ಲಾಧಿಕಾರಿ ಬಗಾದಿ ಗೌತಮ್ ಆಕ್ರೋಶ ನೋಡಿ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಊರು ಬಿಟ್ಟು ಹೋಗುತ್ತಿರುವ ಗ್ರಾಮಸ್ಥರು, ಕೆಸರುಮಯವಾದ ಕೊಡಗು

ಆಗಸ್ಟ್​ ಮಳೆಗೆ ಚಿಕ್ಕಮಗಳೂರಿನಲ್ಲಿ 652 ಮನೆಗಳು ನೆಲ ಕಚ್ಚಿದ್ದವು. ಮಳೆಯ ಅಬ್ಬರಕ್ಕೆ ರಸ್ತೆಗಳು ಹಾನಿಗೊಳಗಾಗಿದ್ದವು. ಇದರಿಂದ ಉಂಟಾದ ಹಾನಿ 84 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 31 ಪಿಡಬ್ಯೂಡಿ ಸೇತುವೆಗಳು, 66 ಆರ್​ಪಿಡಿಆರ್ ಸೇತುವೆ ಹಾನಿಗೊಳಗಾಗಿದ್ದವು. ಇವುಗಳಿಂದ 30 ಕೋಟಿ ರೂ. ನಷ್ಟ ಉಂಟಾಗಿತ್ತು. ಕೆರೆ ಕಟ್ಟೆಗಳು ಕುಸಿದಿದ್ದು, 3 ಕೋಟಿ ರೂ. ನಷ್ಟ ಉಂಟಾಗಿತ್ತು. ಮೆಸ್ಕಾಂಗೆ 1.13 ಕೋಟಿ ರೂ., ಬಿಎಸ್​ಎನ್​ಎಲ್​ಗೆ 39 ಲಕ್ಷ ರೂ. ಹೊರೆಯಾಗಿತ್ತು. 1451 ಹೆಕ್ಟೇರು ಬೆಳೆ ನಾಶ, ತೋಟಗಾರಿಕೆಯ 118 ಎಕರೆ ಪ್ರದೇಶ ಕೊಚ್ಚಿ ಹೋಗಿತ್ತು.
Youtube Video
First published: January 23, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories