Chikmagalur Crime | ಮಗು ಸಾವು, ಡಾಕ್ಟರ್ ಕೊಲೆಗೆ ಸ್ಕೆಚ್; ತರೀಕೆರೆ ವೈದ್ಯನ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

Chikmagalur Crime News | ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ಬಸವೇಶ್ವರ ಖಾಸಗಿ ಆಸ್ಪತ್ರೆಯ ವೈದ್ಯ ದೀಪಕ್ ಮೇಲೆ ಸೋಮವಾರ ಕೊಲೆ ಪ್ರಯತ್ನ ನಡೆದಿತ್ತು. ಆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

ಹಲ್ಲೆಗೊಳಗಾದ ವೈದ್ಯ ದೀಪಕ್

ಹಲ್ಲೆಗೊಳಗಾದ ವೈದ್ಯ ದೀಪಕ್

  • Share this:
ಚಿಕ್ಕಮಗಳೂರು (ಜೂನ್ 2) : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಾಡಹಗಲೇ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ತಮ್ಮ ಮಗು ಸಾವನ್ನಪ್ಪಿದ್ದಕ್ಕೆ ಮನನೊಂದ ಪೋಷಕರು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಸೋಮವಾರ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಬಸವೇಶ್ವರ ಖಾಸಗಿ ಆಸ್ಪತ್ರೆಯ ವೈದ್ಯ ದೀಪಕ್ ಮೇಲೆ ನಾಲ್ವರು ದುಷ್ಕರ್ಮಿಗಳು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಸೋಮವಾರ ನಡೆದ ಘಟನೆ ಎಂತಹ ಗಟ್ಟಿ ಹೃದಯವೂ ಕೂಡ ಒಂದು ಕ್ಷಣ ಅಲುಗಾಡುವಂತೆ ಮಾಡುವಂತಿತ್ತು. ಆ ರೀತಿ ಹಾಡಹಗಲೇ ಮನೆಗೆ ಊಟಕ್ಕೆ ಸೈಕಲ್ ಏರಿ ಹೊರಟಿದ್ದ ಡಾಕ್ಟರ್ ದೀಪಕ್ ಮೇಲೆ ನಾಲ್ವರು ದುಷ್ಟರ್ಮಿಗಳು ಲಾಂಗು ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡ್ತಿರೋದನ್ನು ನೋಡಿ ಸ್ಥಳೀಯರು ಕಿರುಚಿಕೊಂಡಿದ್ದರು. ಹೀಗಾಗಿ, ಹಾಫ್ ಮರ್ಡರ್ ಮಾಡಿ ನಾಲ್ವರು ಬೈಕ್​ನಲ್ಲಿ ಪರಾರಿಯಾಗಿದ್ದರು.

ಕೂಡಲೇ ಡಾಕ್ಟರ್ ದೀಪಕ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸತತ ಎರಡು ಸರ್ಜರಿ ಆದ ಬಳಿಕ ವೈದ್ಯ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇತ್ತ ಆರೋಪಿಗಳ ಹೆಡಮುರಿ ಕಟ್ಟಲು ಎಸ್ಪಿ ಅಕ್ಷಯ್ ನೇತೃತ್ವದಲ್ಲಿ ಫೀಲ್ಡಿಗಿಳಿದ ಖಾಕಿ ಪಡೆ, ಘಟನೆ ನಡೆದು ಕೇವಲ 24 ಗಂಟೆಯೊಳಗೆ ವೇಣು, ವೆಂಕಟೇಶ್, ನಿತಿನ್, ಚಂದ್ರಶೇಖರ್ ಎಂಬುವ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಇಂದು ಗುಡುಗು- ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಲ್ಲಿ ಹೈ ಅಲರ್ಟ್​

ಅಷ್ಟಕ್ಕೂ ಡಾಕ್ಟರ್ ಮೇಲೆ ಅಟ್ಯಾಕ್ ಮಾಡಿದ ಆರೋಪಿಗಳ್ಯಾರು ರೌಡಿಗಳಲ್ಲ, ರೌಡಿಶೀಟರ್​ಗಳೂ ಅಲ್ಲ ಅನ್ನೋದು ಇಲ್ಲಿ ಮಹತ್ವದ ವಿಷಯ. ಆದರೆ, ವೈದ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋದನ್ನ ನೋಡಿದ್ರೆ ತುಂಬಾ ದೊಡ್ಡ ಮಟ್ಟದ ಜಿದ್ದೇ ಇರಬೇಕು ಅನಿಸುತ್ತದೆ. ಅಷ್ಟಕ್ಕೂ ಈ ಜಿದ್ದು ಹುಟ್ಟಿಕೊಂಡಿದ್ದು ಈ ಘಟನೆಯ ನಡೆಯುವ ಕೇವಲ ಮೂರು ದಿನದ ಹಿಂದೆ ಅಂದರೆ ನೀವು ನಂಬಲೇಬೇಕು.

Chikmagalur Crime News | Big Twist to Chikmagalur Tarikere Doctor Murder Attempt here is Shocking News.
ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಲಕ


ಹೌದು, ಹೀಗೆ ವೈದ್ಯನ ಮೇಲೆ ಹಲ್ಲೆ ನಡೆಸಿದ್ದು ಈ ಬಾಲಕನ ವಿಚಾರಕ್ಕೆ ಅನ್ನೋದು ತಿಳಿದುಬಂದಿದೆ. ಅಂದಾಗೆ ಈ ಬಾಲಕನ ಹೆಸರು ಭುವನ್, ಅಜ್ಜಂಪುರ ತಾಲೂಕಿನ ತಡಗ ಗ್ರಾಮದವನು. ಮೇ 24ರಂದು ಜ್ವರ ಅಂತಾ ಬಾಲಕನನ್ನು ತರೀಕೆರೆಯ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆ ಬಾಲಕನಿಗೆ ರಾತ್ರೋರಾತ್ರಿ ವಾಂತಿ-ಬೇಧಿ ಕಾಣಿಸಿಕೊಂಡು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ 9 ವರ್ಷದ ಬಾಲಕ ಭುವನ್ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: Gold Price Today: ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಚಿನ್ನದ ಬೆಲೆ 230 ರೂ. ಹೆಚ್ಚಳ!; ಬೆಳ್ಳಿ ಬೆಲೆಯಲ್ಲಿ 600 ರೂ. ಏರಿಕೆ

ಬಸವೇಶ್ವರ ಆಸ್ಪತ್ರೆಯ ವೈದ್ಯ ದೀಪಕ್, ಓವರ್ ಡೋಸ್ ಇಂಜೆಕ್ಷನ್ ಕೊಟ್ಟಿದ್ದೇ ಬಾಲಕನ ಆರೋಗ್ಯದಲ್ಲಿ ಏರುಪೇರಾಗಲು ಕಾರಣ ಅಂತಾ ಸಂಬಂಧಿಕರು ಆರೋಪಿಸಿದ್ದರು. ಬಾಲಕನ ಸಾವಿನಿಂದ ನೊಂದ ಬಾಲಕನ ಮಾವ 22 ವರ್ಷದ ವೇಣು, ತನ್ನ ಸ್ನೇಹಿತರಾದ ನಿತಿನ್, ವೆಂಕಟೇಶ್, ಚಂದ್ರಶೇಖರ್ ಎಂಬುವವರ ಜೊತೆ ಸೇರಿ ಡಾಕ್ಟರ್ ಹತ್ಯೆಗೆ ಸ್ಕೆಚ್ ಹಾಕಿ ಅಟ್ಯಾಕ್ ಮಾಡಿದ್ದ.

ಪೊಲೀಸರಿಗೆ ವಿಚಾರ ಗೊತ್ತಾದ ಕೂಡಲೇ ಒಂದು ಕ್ಷಣವೂ ತಡಮಾಡದೇ ಆರೋಪಿಗಳ ಬೆನ್ನುಬಿದ್ದಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ನಾಲ್ವರು ಮತಿಗೇಡಿ ಆರೋಪಿಗಳ ಕೈಗೆ ಕೋಳ ತೊಡಿಸುವಲ್ಲಿ ಖಾಕಿ ಯಶಸ್ವಿಯಾಗಿದೆ. ವೈದ್ಯನ ಯಡವಟ್ಟಿನಿಂದಲೇ ತಮ್ಮ ಮಗುವಿನ ಪ್ರಾಣ ಹೋಗಿದೆ ಎಂದು ಹೇಳುತ್ತಿರುವ ಮೃತ ಬಾಲಕನ ಸಂಬಂಧಿಕರು, ಆದರೆ ಡಾಕ್ಟರ್​ನನ್ನು ಕೊಲೆ ಮಾಡಲು ಮುಂದಾಗಿದ್ದು ತಪ್ಪು ಅಂದಿದ್ದಾರೆ.

ಒಟ್ಟಿನಲ್ಲಿ ಬಾಲಕನ ಸಾವಿನ ಸಿಟ್ಟನ್ನು ಡಾಕ್ಟರ್ ಮೇಲೆ ತೀರಿಸಲು ಹೋಗಿ ಇದೀಗ ಮೃತ ಬಾಲಕನ ಮಾವ ಸೇರಿದಂತೆ ನಾಲ್ವರು ಜೈಲು ಪಾಲಾಗಿದ್ದಾರೆ. ಒಂದು ವೇಳೆ ಡಾಕ್ಟರ್ ತಪ್ಪು ಮಾಡಿದ್ದರೆ ಅದನ್ನು ಕಾನೂನು ರೀತಿಯಾಗಿ ಎದುರಿಸಬಹುದಿತ್ತು, ಆದರೆ ಕೊಲೆ ಪ್ರಯತ್ನದಂತಹ ನೀಚ ಕೆಲಸಕ್ಕೆ ಇಳಿದಿದ್ದು ಮಾತ್ರ ನಿಜಕ್ಕೂ ದುರಂತ.

(ವರದಿ: ವೀರೇಶ್ ಹೆಚ್ ಜಿ)
Published by:Sushma Chakre
First published: