HOME » NEWS » State » CHIKMAGALUR CRIME CHIKKAMAGALURU POLICE ARRESTED 4 ACCUSED IN FILMY STYLE ROBBERY CASE SCT VCTV

Chikmagalur Crime: ಚಿಕ್ಕಮಗಳೂರಿನಲ್ಲಿ ನಡೆದ ಸಿನಿಮೀಯ ದರೋಡೆ ಕೇಸ್​ಗೆ ಹೊಸ ಟ್ವಿಸ್ಟ್; ಮತ್ತೆ 4 ಜನರ ಬಂಧನ

Crime News: ಫೆಬ್ರವರಿ 27ರಂದು ಚಿಕ್ಕಮಗಳೂರಿನ ಕಲ್ಯಾಣನಗರದ ಚಂದ್ರೇಗೌಡ ಎಂಬುವವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆ ಸಿನಿಮೀಯ ದರೋಡೆ ಕೇಸ್​ನಲ್ಲಿ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

news18
Updated:March 10, 2021, 8:17 AM IST
Chikmagalur Crime: ಚಿಕ್ಕಮಗಳೂರಿನಲ್ಲಿ ನಡೆದ ಸಿನಿಮೀಯ ದರೋಡೆ ಕೇಸ್​ಗೆ ಹೊಸ ಟ್ವಿಸ್ಟ್; ಮತ್ತೆ 4 ಜನರ ಬಂಧನ
ಚಿಕ್ಕಮಗಳೂರು ದರೋಡೆಯ ಆರೋಪಿ
  • News18
  • Last Updated: March 10, 2021, 8:17 AM IST
  • Share this:
ಚಿಕ್ಕಮಗಳೂರು (ಮಾ. 10): ಕಾಫಿನಾಡಿನಲ್ಲಿ ನಡೆದ ದರೋಡೆಗೆ ಸ್ಕೆಚ್ ಹಾಕಿದ್ದು ಇಬ್ಬರು ಮಾತ್ರವಲ್ಲ, ಬರೋಬ್ಬರಿ 6 ಮಂದಿ. ಅಂದೇ ಇಬ್ಬರು ಲಾಕ್ ಆಗಿದ್ದರೆ, ಉಳಿದ ನಾಲ್ವರು ಇದೀಗ ಕಾಫಿನಾಡಿನ ಪೊಲೀಸರು ಬಲೆಗೆ ಬಿದ್ದಿದ್ದಾರೆ. 

ಫೆಬ್ರವರಿ 27ರಂದು ಚಿಕ್ಕಮಗಳೂರಿನ ಎಐಟಿ ಸರ್ಕಲ್ ಬಳಿಯ ಕಲ್ಯಾಣನಗರದ ಚಂದ್ರೇಗೌಡ ಎಂಬುವವರ ಮನೆಯಲ್ಲಿ ನಡೆದ ದರೋಡೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ದರೋಡೆ ಈ ಪರಿ ಸುದ್ದಿಯಾಗಲು ಕಾರಣ, ದರೋಡೆ ಮಾಡಿ ಬೈಕ್​ನಲ್ಲಿ ಎಸ್ಕೇಪ್ ಆಗುವಾಗ ಇಬ್ಬರು ದರೋಡೆಕೋರರನ್ನು ಫೈರ್ ಎಂಜಿನ್ ಅಡ್ಡಗಟ್ಟಿದ್ದು, ತಪ್ಪಿಸಿಕೊಂಡು ಹೋಗುವಾಗ ಜನರು ಆ ಕಳ್ಳರಿಗೆ ಕಲ್ಲೇಟು ಕೊಟ್ಟಿದ್ದರು. ಇದನ್ನೆಲ್ಲ ಮಹಿಳೆಯೊಬ್ಬರು ಮಾಡಿದ ವಿಡಿಯೋದಲ್ಲಿ ಸೆರೆಯಾಗಿದ್ದು, ಕಾಫಿನಾಡಿನಲ್ಲಿ ನಡೆದ ಈ ಸಿನಿಮೀಯ ಶೈಲಿಯ ದರೋಡೆ ಪ್ರಕರಣದಲ್ಲಿ ಇಬ್ಬರು ದರೋಡೆಕೋರರು ಕೆಲವೇ ಕೆಲವು ನಿಮಿಷಗಳಲ್ಲಿ ಸಿಕ್ಕಿ ಬೀಳೋ ಮೂಲಕ ಸುಖಾಂತ್ಯ ಕಂಡಿತು.

ಚಂದ್ರೇಗೌಡರ ಪತ್ನಿ ಸರೋಜಮ್ಮ ಎಂಬುವರನ್ನ ಮನೆಯಲ್ಲಿ ಕಟ್ಟಿ ಹಾಕಿ ಚಿನ್ನಾಭರಣ, ನಗದನ್ನ ದೋಚಿ ಎಸ್ಕೇಪ್ ಆಗೋಕೆ ಸಚಿನ್, ಮೋಹನ್ ರೆಡಿಯಾಗಿದ್ದರು. ಈ ವೇಳೆಯಲ್ಲಿ ಅಗ್ನಿ ಶಾಮಕದಳದ ಬಸ್ ಚಾಲಕ ಧರ್ಮೇಂದ್ರಪ್ಪ, ಬೈಕ್ ಅಡ್ಡಗಟ್ಟಿ ಡಿಕ್ಕಿ ಹೊಡೆಸಿ ದರೋಡೆಕೋರರ ಪ್ಲಾನ್ ತಲೆ ಕೆಳಗಾಗುವಂತೆ ಮಾಡಿದ್ದರು. ಆ ವೇಳೆಯಲ್ಲಿ ಜನರಿಂದ ತಪ್ಪಿಸಿಕೊಂಡು ಹೋಗುವಾಗ ಸಚಿನ್, ಮೋಹನ್ ರನ್ನ ಪೊಲೀಸರು ಚೇಸ್ ಮಾಡಿ ಲಾಕ್ ಮಾಡಿದ್ದರು. ಆಗ ಇವರಿಬ್ಬರೇ ಈ ದರೋಡೆಯ ಸೂತ್ರಧಾರರು ಎಂದು ಬಹುತೇಕರು ಭಾವಿಸಿದ್ದರು. ಆದರೆ, ಸಿನಿಮೀಯ ದರೋಡೆಗೆ ಬ್ಯಾಕ್ ಗ್ರೌಂಡಲ್ಲಿ ಶ್ರಮಿಸಿದ ಸಂದೀಪ್, ಲೋಹಿತ್, ವರ್ನಲ್, ಗೌತಮ್ ಎಂಬ ನಾಲ್ವರು ಕಿರಾತಕರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಇದನ್ನೂ ಓದಿ: ಸ್ವಿಜರ್ಲೆಂಡ್​ನಲ್ಲಿ ಬುರ್ಖಾ ನಿಷೇಧ; ಈ ದೇಶಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಖ ಮುಚ್ಚಿಕೊಳ್ಳುವುದು ಅಪರಾಧ!

ಅಷ್ಟಕ್ಕೂ ಈ ಸಂದೀಪ್, ಚಂದ್ರೇಗೌಡರ ಸ್ವಂತ ತಂಗಿಯ ಮಗ. ಈತನೇ ಈ ಸಿನಿಮೀಯ ಸ್ಟೈಲ್​ನ ದರೋಡೆಯ ಸೂತ್ರಧಾರ. ದರೋಡೆಗೂ ಕೆಲ ದಿನಗಳ ಹಿಂದೆ 2 ಗುಂಟೆ ಜಮೀನನ್ನು ಚಂದ್ರೇಗೌಡರು ಮಾರಾಟ ಮಾಡಿದ್ದರು. ಹೀಗೆ ಮಾರಾಟವಾಗಿದ್ದ ಜಮೀನಿನ 35 ಲಕ್ಷ ಹಣವನ್ನ ಇದೇ ಸಂದೀಪ್, ಚಂದ್ರೇಗೌಡರ ಜೊತೆ ಹೋಗಿ ತೆಗೆದುಕೊಂಡು ಬಂದಿದ್ದ. ಈ ಹಣ ತನ್ನ ಮಾವ ಚಂದ್ರೇಗೌಡರ ಮನೆಯಲ್ಲಿ ಇರೋದನ್ನ ನೋಡಿದ ಸಂದೀಪ್, ದರೋಡೆ ಮಾಡಲು ಪ್ಲಾನ್ ಮಾಡಿ ಟೀಂ ಒಂದನ್ನ ರೆಡಿ ಮಾಡಿಕೊಂಡ. ಇದೇ ಟೀಮಿನ ಸದಸ್ಯರೇ ಮೋಹನ್, ಸಂದೀಪ್, ಲೋಹಿತ್, ವರ್ನಲ್, ಗೌತಮ್.

ಯಾವ ರೀತಿ ದರೋಡೆ ಮಾಡಬೇಕು ಅನ್ನೋದನ್ನ ಎಲ್ಲರೂ ಕುಳಿತು ಸ್ಕೆಚ್ ಹಾಕಿದ್ದರು. ಯೂಟ್ಯೂಬ್​ನಲ್ಲಿ ದರೋಡೆಯ ವಿಡಿಯೋ ನೋಡಿದ್ದರು.  ಅದಕ್ಕಾಗಿ ಜಾಕೆಟ್, ಹೆಲ್ಮೆಟ್, ಶೂಸ್, ಖರೀದಿ ಮಾಡಿಕೊಂಡರು. ಸ್ಪಾಟ್​ಗೆ ಹೋಗುವಾಗ ಮೊಬೈಲ್ ಬಳಸಬಾರದು ಅನ್ನೋದನ್ನ ಗಮನದಲ್ಲಿಟ್ಟುಕೊಂಡಿದ್ದರು. ನಂಬರ್ ಪ್ಲೇಟ್ ಇಲ್ಲದ ಬೈಕನ್ನು ರೆಡಿ ಮಾಡಿಕೊಂಡು ದರೋಡೆಗೆ ಇಳಿದಿದ್ದರು. ಸದ್ಯ ಆರು ಜನ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬೈಕ್​ನಿಂದ ಸ್ವಲ್ಪ ದೂರ ಬಂದ ಬಳಿಕ, ಆ ಬೈಕ್ ಅಲ್ಲೇ ಬಿಟ್ಟು ಎಲ್ಲರೂ ಸೇರಿ ಒಟ್ಟಿಗೆ ಎಸ್ಕೇಪ್ ಆಗೋಕೆ ಕಾರೊಂದು ಕೂಡ ಈ ಇಬ್ಬರಿಗೆ ಕಾಯ್ತಾ ಇತ್ತು. ಕೊನೆ ಘಳಿಗೆಯ ತನಕ ಎಲ್ಲಾ ಅಂದರೆ ಎಲ್ಲವೂ ಸರಿಯಾಗಿಯೇ ಎಕ್ಸಿಕ್ಯೂಟ್ ಆಗಿತ್ತು. ಆದರೆ ಅದೇ ದಾರಿಯಲ್ಲಿ ಬಂದ ಅಗ್ನಿಶಾಮಕದಳ ಬಸ್ ಚಾಲಕ ಧರ್ಮೇಂದ್ರಪ್ಪ ಇವರ ಎಲ್ಲಾ ಪ್ಲಾನ್ ಅನ್ನ ನುಚ್ಚುನೂರು ಮಾಡಿಬಿಟ್ಟರು. ಸದ್ಯ ಈ ನಾಲ್ವರು ಕೂಡ ಅಂದರ್ ಆಗೋದ್ರೊಂದಿಗೆ ಈ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆಯ ಹಿಂದೆ ಒಂದು ಕ್ರಿಮಿನಲ್​ಗಳ ತಂಡವೇ ಮಾಸ್ಟರ್ ಪ್ಲಾನ್ ಮಾಡಿತ್ತು ಅನ್ನೋದು ರಿವೀಲ್ ಆದಂತೆ ಆಗಿದೆ.
Published by: Sushma Chakre
First published: March 10, 2021, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories