HOME » NEWS » State » CHIKMAGALUR BOMB THREAT SUSPICIOUS SUITCASE FOUND IN CHIKKAMAGALURU SCT

ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ; ಸ್ಥಳಕ್ಕೆ ಆಗಮಿಸಿದ ಬಾಂಬ್​ ನಿಷ್ಕ್ರಿಯ ದಳ

ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ಸಂಜೆ ಅಪರಿಚಿತ ಮಹಿಳೆಯಬ್ಬಳು ಸೂಟ್​ಕೇಸ್​ ತಂದಿಟ್ಟು ಹೋದ ಘಟನೆ ನಡೆದಿದೆ.

news18-kannada
Updated:May 13, 2020, 8:00 PM IST
ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ; ಸ್ಥಳಕ್ಕೆ ಆಗಮಿಸಿದ ಬಾಂಬ್​ ನಿಷ್ಕ್ರಿಯ ದಳ
ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಅನುಮಾನಾಸ್ಪದ ಸೂಟ್​ಕೇಸ್
  • Share this:
ಚಿಕ್ಕಮಗಳೂರು (ಮೇ 13): ಲಾಕ್​ಡೌನ್​ನಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಇದರ ನಡುವೆ ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದ ಸೂಟ್​ಕೇಸ್ ಪತ್ತೆಯಾಗಿದ್ದು, ಕಾಫಿನಾಡಿನ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಈಗಾಗಲೇ ಪೊಲೀಸರು ದೌಡಾಯಿಸಿದ್ದು, ಬಾಂಬ್​ ನಿಷ್ಕ್ರಿಯ ದಳದವರು ಸೂಟ್​ಕೇಸ್​ ವಿಲೇವಾರಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ಸಂಜೆ ಅಪರಿಚಿತ ಮಹಿಳೆಯಬ್ಬಳು ಸೂಟ್​ಕೇಸ್​ ತಂದಿಟ್ಟು ಹೋದ ಘಟನೆ ನಡೆದಿದೆ. ಇದರಿಂದಾಗಿ ಚಿಕ್ಕಮಗಳೂರು ನಗರದಲ್ಲಿ ಆತಂಕ ಹೆಚ್ಚಾಗಿದೆ. ಮಹಿಳೆಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅನುಮಾನ ಬರುವ ರೀತಿಯಲ್ಲಿ ಆ ಮಹಿಳೆ ಮರದ ಪಕ್ಕದಲ್ಲಿ ಸೂಟ್​ಕೇಸ್​ ಬಿಟ್ಟುಹೋಗಿದ್ದಾಳೆ. ನೋಡನೋಡುತ್ತಲೇ ಸೂಟ್​ಕೇಸ್ ಬಿಟ್ಟು ಹೋದ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಇನ್ನು 3 ತಿಂಗಳು ಸರ್ಕಾರವೇ ಭರಿಸಲಿದೆ ಪಿಎಫ್ ಮೊತ್ತ; ದೇಶದ ಉದ್ಯಮಕ್ಕೆ 2,500 ಕೋಟಿ ರೂ. ಪಿಎಫ್ ಹೊರೆ ಇಳಿಕೆ

ಘಟನೆ ನಡೆದ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಪೊಲೀಸರು, ಶ್ವಾನದಳ ದೌಡಾಯಿಸಿದೆ. ಅಪರಿಚಿತ ಮಹಿಳೆ ಇಟ್ಟುಹೋದ ಸೂಟ್​ಕೇಸ್​ ತೆರೆಯಲು ಬಾಂಬ್ ಸ್ಕ್ವಾಡ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆ ಸೂಟ್​ಕೇಸನ್ನು ಮಹಾತ್ಮ ಗಾಂಧಿ ಪಾರ್ಕ್ ಬಳಿ ಇರುವ ಡಿ.ಆರ್. ಮೈದಾನಕ್ಕೆ ರವಾನೆ ಮಾಡಲಾಗಿದ್ದು, ಜೆಸಿಬಿ ಮೂಲಕ ಗುಂಡಿ ತೆಗೆದು ಸೂಟ್​ಕೇಸ್​ ಅನ್ನು ಅದರಲ್ಲಿ ಇರಿಸಲಾಗಿದೆ.

ಇಂದು ರಾತ್ರಿ ಮಂಗಳೂರಿನಿಂದ‌ ಪರಿಣಿತರ ತಂಡ ಚಿಕ್ಕಮಗಳೂರಿಗೆ ಆಗಮಿಸಲಿದ್ದು, ತಂಡ ಬಂದ ನಂತರವೇ ಸೂಟ್​ಕೇಸ್ ಪರಿಶೀಲನೆ ಮಾಡಲಾಗುತ್ತದೆ. ಈಗಾಗಲೇ ಸೂಟ್​ಕೇಸ್ ಅನ್ನು ಗುಂಡಿಯಲ್ಲಿ ಇರಿಸಲಾಗಿದೆ. ಸ್ಥಳದಲ್ಲಿ ಚಿಕ್ಕಮಗಳೂರು ಎಸ್​ಪಿ ಹರೀಶ್ ಪಾಂಡೆ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಿ, ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೊರೋನಾಗೆ ಮತ್ತೊಂದು ಬಲಿ; ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ
Youtube Video
First published: May 13, 2020, 7:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories