HOME » NEWS » State » CHIKMAGALUR AJJAMPURA ANTARAGHATTAMMA JAATRE FESTIVAL DETAILS IS HERE VCTV SCT

ಅಜ್ಜಂಪುರದಲ್ಲಿ ಅದ್ದೂರಿಯ ಅಂತರಘಟ್ಟಮ್ಮ ಜಾತ್ರೆ; ಮಹಾ ರಥೋತ್ಸವ ಕಣ್ತುಂಬಿಕೊಂಡ ಭಕ್ತರು

ಅಂತರಘಟ್ಟೆ ಅಮ್ಮನವರ ಜಾತ್ರೆಗೆ ಅಜ್ಜಂಪುರ, ತರೀಕೆರೆ, ಕಡೂರು ಸೇರಿದಂತೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಸಾವಿರಾರು ಎತ್ತಿನಗಾಡಿಯಲ್ಲೇ ಬಂದು ರಥೋತ್ಸವದಲ್ಲಿ ಭಾಗಿಯಾಗೋದು ಈ ಜಾತ್ರೆಯ ವಿಶೇಷ. 

news18-kannada
Updated:February 21, 2021, 9:10 AM IST
ಅಜ್ಜಂಪುರದಲ್ಲಿ ಅದ್ದೂರಿಯ ಅಂತರಘಟ್ಟಮ್ಮ ಜಾತ್ರೆ; ಮಹಾ ರಥೋತ್ಸವ ಕಣ್ತುಂಬಿಕೊಂಡ ಭಕ್ತರು
ಅಂತರಘಟ್ಟಮ್ಮ ಜಾತ್ರೆ
  • Share this:
ಚಿಕ್ಕಮಗಳೂರು : ಅಲ್ಲಿ ಭಕ್ತರ ಸಾಗರವೇ ದೇವಿಯ ಸ್ಮರಣೆಯಲ್ಲಿ ಮಿಂದೇಳುತ್ತಿತ್ತು.. ಮುಂಜಾನೆ ಸೂರ್ಯ ಉದಯಿಸುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಭಕ್ತಗಣ, ರವಿ ಕಾಣಿಸಿದೊಡನೆ ಉಘೇ ಉಘೇ ಎಂದು ರಥವನ್ನು ಎಳೆದೇ ಬಿಟ್ಟರು. ದೂರದೂರುಗಳಿಂದ ಬಂದಿದ್ದ ಸಾವಿರಾರು ಎತ್ತುಗಳು ದೇವಿ ಸ್ಥಾನದಲ್ಲಿ ಸುತ್ತು ಹಾಕಿ ಭಕ್ತಿಯ ಅಲೆಯಲ್ಲಿ ತಲೆಯಾಡಿಸಿದವು. 4 ಜಿಲ್ಲೆಗಳ ಜನರು ಅಂತರಘಟ್ಟೆ ದುರ್ಗಾಂಬ ಜಾತ್ರೆಯಲ್ಲಿ ಭಾಗಿಯಾಗಿ ಭಕ್ತಿಭಾವ ಪ್ರದರ್ಶಿಸಿದರು.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯ ಅಮ್ಮ ಎಂದೇ ಕರೆಯಿಸಿಕೊಳ್ಳೋ ದುರ್ಗಾಂಬ ದೇವಿಯ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ಕಳೆದ 14ರಿಂದ ಆರಂಭವಾದ ಅಂತರಘಟ್ಟೆ ಶ್ರೀ ದುರ್ಗಾಂಬ ಅಮ್ಮನವರ ಮಹಾ ರಥೋತ್ಸವ ನಿನ್ನೆ ಸಂಪನ್ನಗೊಂಡಿತು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸಾವಿರಾರು ಜನರು ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಮೆರೆದರು. ನಿನ್ನೆ ಮುಂಜಾನೆ 6.45ರ ವೇಳೆಗೆ ರಥೋತ್ಸವ ಅದ್ದೂರಿಯಾಗಿ ದೇವಿಯ ಸನ್ನಿಧಿಯಲ್ಲಿ ಜರುಗಿತು. ಈ ವೇಳೆ ಭಕ್ತರು ಬಾಳೆಹಣ್ಣನ್ನು ತೇರಿನ ಕಳಸಕ್ಕೆ ಎಸೆದು ಹರಕೆ ಪೂರೈಸಿದರು.. ಅಲ್ಲದೆ, ಬೇವಿನ ಸೀರೆ ಹರಕೆ ಸೇರಿದಂತೆ ಅನೇಕ ಹರಕೆಗಳನ್ನ ಭಕ್ತರು ದೇವಿಗೆ ಅರ್ಪಿಸಿ ಧನ್ಯರಾದರು.

Chikmagalur | Chikmagalur Ajjampura Antaraghattamma Jaatre Festival Details is here.
ಅಂತರಘಟ್ಟಮ್ಮ


ಪ್ರತಿವರ್ಷದಂತೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಜಾತ್ರೆಯನ್ನ ತಾಲೂಕು ಆಡಳಿತ ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಅಂತರಘಟ್ಟೆ ಅಮ್ಮನವರ ಜಾತ್ರೆಗೆ ಅಜ್ಜಂಪುರ, ತರೀಕೆರೆ, ಕಡೂರು ಸೇರಿದಂತೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಸಾವಿರಾರು ಎತ್ತಿನಗಾಡಿಯಲ್ಲೇ ಬಂದು ರಥೋತ್ಸವದಲ್ಲಿ ಭಾಗಿಯಾಗೋದು ಈ ಜಾತ್ರೆಯ ವಿಶೇಷ. ಹೀಗೆ ಸಾಲು ಸಾಲು ಎತ್ತಿನಗಾಡಿಯಲ್ಲಿ ಬರುವ ಭಕ್ತರನ್ನ ನೋಡೋದೇ ಒಂದು ರೀತಿ ಕಣ್ಣಿಗೆ ಹಬ್ಬ. ಹೀಗೆ ಜಾತ್ರೆಗೆ ಬರುವ ಎತ್ತಿನಗಾಡಿಗಳಲ್ಲಿ ಕೆಲವರು ಇಂದೇ ಊರಿಗೇ ತೆರಳಿದ್ರೆ, ಉಳಿದವರು ಎರಡು ದಿನ ಬಿಟ್ಟು ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ತಮ್ಮೂರಿನ ಕಡೆ ಹೆಜ್ಜೆ ಹಾಕುತ್ತಾರೆ.

ಇದನ್ನೂ ಓದಿ: ಗದಗದಲ್ಲಿ ಆರಂಭವಾಗಿದೆ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಸ್ಪರ್ಧೆ

ಇಡೀ ವರ್ಷದಲ್ಲಿ ನಡೆಯುವ ದೊಡ್ಡದಾದ ಈ ಜಾತ್ರೆಯಲ್ಲಿ ನೂರಾರು ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗೇ ನಡೆಯುತ್ತೆ.. ಬಾಳೆಹಣ್ಣು ಹರಕೆಯನ್ನ ದೇವಿಗೆ ಇಟ್ಟುಕೊಳ್ಳುವುದರಿಂದ ಈ ಜಾತ್ರೆಯಲ್ಲಿ ಬಾಳೆಹಣ್ಣುಗಳಿಗೂ ಫುಲ್ ಡಿಮ್ಯಾಂಡ್. ಒಟ್ಟು 15 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಚಿಕ್ಕ-ಚಿಕ್ಕ ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಜನರು ದೇವಿಯ ಕೃಪೆಗೆ ಪಾತ್ರರಾದ್ರು. ಒಟ್ಟಿನಲ್ಲಿ ಜಾತ್ರೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಮಿಸ್ ಮಾಡದೇ ಲಕ್ಷಾಂತರ ಭಕ್ತರು ದೇವಿಯನ್ನ ಕಣ್ತುಂಬಿಕೊಳ್ಳೊದಕ್ಕೆ ಸಾಧ್ಯವಾಗಿದಂತೂ ಸತ್ಯ..
ಅಲ್ಲಿ ಭಕ್ತರ ಸಾಗರವೇ ದೇವಿಯ ಸ್ಮರಣೆಯಲ್ಲಿ ಮಿಂದೇಳುತ್ತಿತ್ತು.. ಮುಂಜಾನೆ ಸೂರ್ಯ ಉದಯಿಸುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಭಕ್ತಗಣ, ರವಿ ಕಾಣಿಸಿದೊಡನೆ ಉಘೇ ಉಘೇ ಅಂತಾ ರಥವನ್ನ ಎಳೆದೇ ಬಿಟ್ರು.. ದೂರದೂರುಗಳಿಂದ ಬಂದಿದ್ದ ಸಾವಿರಾರು ಎತ್ತುಗಳು ದೇವಿ ಸ್ಥಾನದಲ್ಲಿ ಸುತ್ತು ಹಾಕಿ ಭಕ್ತಿಯ ಅಲೆಯಲ್ಲಿ ತಲೆಯಾಡಿಸಿದವು..
Published by: Sushma Chakre
First published: February 21, 2021, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories