Chikmagalur: ಚಿಕ್ಕಮಗಳೂರಿನ ಕುದುರೆಮುಖದ ಈ ಊರಿನ 150 ಜನರಿಗೆ ಒಂದೇ ಟಿವಿ!

Chikmagalur News: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖದ ಗೋಪಾಳ ಕಾಲೋನಿಯಲ್ಲಿ ಊರಿಗೆ ಇರೋದು ಒಂದೇ ಟಿವಿ. ಸುಮಾರು 80-90 ಮನೆಗಳಿರೋ ಈ ಊರಲ್ಲಿ ಮಕ್ಕಳು ಮರಿ ಎಲ್ಲಾ ಸೇರಿ ಅಂದಾಜು 150 ಜನರಿದ್ದಾರೆ.

news18-kannada
Updated:October 25, 2020, 8:18 AM IST
Chikmagalur: ಚಿಕ್ಕಮಗಳೂರಿನ ಕುದುರೆಮುಖದ ಈ ಊರಿನ 150 ಜನರಿಗೆ ಒಂದೇ ಟಿವಿ!
ಕುದುರೆಮುಖದ ಗೋಪಾಳ ಕಾಲೋನಿಯ ಊರಿಗೆಲ್ಲ ಇದೊಂದೇ ಟಿವಿ
  • Share this:
ಚಿಕ್ಕಮಗಳೂರು (ಅ. 25): ಬುಧವಾರ ಮಲೆಯಾಳಿಗಳು, ಗುರುವಾರ ತಮಿಳರು, ಶುಕ್ರವಾರ ಮುಸ್ಲಿಮರು, ಶನಿವಾರ-ಭಾನುವಾರ ಹಿಂದೂಗಳು! ಸೋಮವಾರ ಧಾರಾವಾಹಿ, ಮಂಗಳವಾರ ಸಿನಿಮಾ, ಬುಧವಾರ ಮತ್ತೆ ಧಾರಾವಾಹಿ. ಒಂದುವೇಳೆ ಭಾರತದ ಕ್ರಿಕೆಟ್ ಮ್ಯಾಚ್ ಇದ್ದರೆ ಧಾರಾವಾಹಿ, ಸಿನಿಮಾ ಎಲ್ಲ ಬಂದ್. ಇವರೆಲ್ಲ ಟಿವಿ ನೋಡೋದು ದಿನಕ್ಕೆ ನಾಲ್ಕೈದು ಗಂಟೆಯಷ್ಟೆ. ಸಂಜೆ 6ರಿಂದ ರಾತ್ರಿ  11 ಗಂಟೆವರೆಗೆ ಮಾತ್ರ. ಇದು 80-90 ಮನೆಗಳು, 150 ಜನರಿರೋ ಒಂದು ಗ್ರಾಮದಲ್ಲಿನ ಒಂದೇ ಟಿವಿಯ ಕಥೆ. ಮನೆಗೊಂದು ಟಿವಿ ಇದ್ದರೂ ನನಗೆ ಆ ಚಾನೆಲ್ ಬೇಕು, ಈ ಚಾನೆಲ್ ಹಾಕು ಎಂದೆಲ್ಲ ರಿಮೋಟ್​ಗಾಗಿ ಕಿತ್ತಾಡಿ, ಕೊನೆಗೆ ರೂಮಿಗೊಂದು ಟಿವಿ ತಂದಿಟ್ಟುಕೊಳ್ಳುವವರ ನಡುವೆ ಈ ಊರು ವಿಭಿನ್ನ. ಇಡೀ ಊರಿಗೆ ಒಂದೇ ಟಿವಿಯಿದ್ದರೂ  ಒಂದು ದಿನ ಕೂಡ ಜಗಳವಾಡಿಲ್ಲ, ಮನಸ್ತಾಪ ಹುಟ್ಟಿಲ್ಲ. ಇದು ಕಾಫಿನಾಡಿನ ಕುದುರೆಮುಖದ ಕತ್ತಲ ಕುಗ್ರಾಮದಲ್ಲಿನ ಕಥೆ...

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖದ ಗೋಪಾಳ ಕಾಲೋನಿಯಲ್ಲಿ ಊರಿಗೆ ಇರೋದು ಒಂದೇ ಟಿವಿ. ಸುಮಾರು 80-90 ಮನೆಗಳಿರೋ ಈ ಊರಲ್ಲಿ ಮಕ್ಕಳು ಮರಿ ಎಲ್ಲಾ ಸೇರಿ ಅಂದಾಜು 150 ಜನರಿದ್ದಾರೆ. ಎಲ್ಲರೂ ಇರೋ ಒಂದೇ ಟಿವಿ ನೋಡಬೇಕು. ಇವರೆಲ್ಲ ಕುದುರೆಮುಖ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಕಂಪನಿ ಮುಚ್ಚಿದ ಮೇಲೆ ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.

ಊರಲ್ಲಿ ಕರೆಂಟ್ ಕೂಡ ಇಲ್ಲ. ಬೀದಿ ದೀಪದಿಂದ ಸಮುದಾಯ ಭವನಕ್ಕೆ ಕರೆಂಟ್ ಎಳೆದುಕೊಂಡಿದ್ದಾರೆ. ಎಲ್ಲರೂ ಅಲ್ಲೇ ಮೊಬೈಲ್ ಚಾರ್ಜ್ ಹಾಕಿಕೊಳ್ಳಬೇಕು. ಕರೆಂಟ್ ಬರೋದೇ ಸಂಜೆ 6 ಗಂಟೆಯ ಬಳಿಕ. ಆಗ ಟಿವಿ ನೋಡಬೇಕು. ಇರೋ ಒಂದು ಟಿವಿಯನ್ನ ಎಲ್ಲರೂ ಹಂಚಿಕೊಂಡಿದ್ದಾರೆ. ಆಯಾ ಸಮುದಾಯದವರು ವಾರದ ಒಂದೊಂದು ದಿನ ಅವರಿಗೆ ಬೇಕಾಗಿದ್ದನ್ನು ನೋಡಿಕೊಳ್ಳಬಹುದು. ಇಲ್ಲಿ ಊರಿಗೆ ಒಂದೇ ಟಿವಿ ಅನ್ನೋದು ಮುಖ್ಯವಲ್ಲ. ಇಡೀ ಊರಿಗೆ ಒಂದೇ ಒಂದು ಟಿವಿಯಿದ್ದರೂ ಒಬ್ಬರ ಮಧ್ಯೆ ಕೂಡ ಇಂದಿಗೂ ಜಗಳ ಬಂದಿಲ್ಲ ಅನ್ನೊದೇ ವಿಶೇಷ.

Chikmagalur News: 150 People in Kuduremukha Village of Chikmagalur have One TV to Watch.

ಇದನ್ನೂ ಓದಿ: ಸಿದ್ದರಾಮಯ್ಯಗೆ ಧಮ್ ಇದ್ದರೆ ಚಿದಂಬರಂ ಮುಂದೆ ನಿಂತು ಮಾತಾಡಲಿ; ನಳಿನ್ ಕುಮಾರ್ ಕಟೀಲ್ ಸವಾಲು

ಕುದುರೆಮುಖ ಎಂದರೆ ಕೇಳೋದೇ ಬೇಡ. ಅತಿಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ವರ್ಷದಲ್ಲಿ ಸರಿಸುಮಾರು ಆರೇಳು ತಿಂಗಳು ಕರೆಂಟ್ ಇರುವುದಿಲ್ಲ. ಇದ್ದಾಗ ಸಂಜೆ ಆರರ ಬಳಿಕ ಬರುವ ಕರೆಂಟನ್ನೇ ಇವರು ನೆಚ್ಚಿಕೊಂಡಿದ್ದಾರೆ. ಆಗ ಸಂಜೆ 6ರಿಂದ ರಾತ್ರಿ 11 ಗಂಟೆವರೆಗೆ ಟಿವಿ ನೋಡ್ತಾರೆ. ಬುಧವಾರ ಮಲೆಯಾಳಿಗಳು.ಗುರುವಾರ ತಮಿಳಿಗರು. ಶುಕ್ರವಾರ ಮುಸ್ಲಿಮರು. ಶನಿವಾರ ಮತ್ತು ಭಾನುವಾರ ಹಿಂದುಗಳು. ಸೋಮವಾರ ಸೀರಿಯಲ್, ಮಂಗಳವಾರ ಮೂವಿ, ಇಂಡಿಯಾ ಕ್ರಿಕೆಟ್ ಮ್ಯಾಚ್ ಇದ್ದರೆ ಕ್ರಿಕೆಟ್. ಇವರು ಕಳೆದ ಹಲವು ದಶಕಗಳಿಂದ ಇದೇ ಮಾದರಿಯಲ್ಲಿ ಪ್ರತಿ ದಿನ ಟಿವಿ ನೋಡ್ತಿದ್ದಾರೆ. ಕಂಪನಿ ಇದ್ದಾಗಲೂ ಇವರಿಗೆ ಇದೊಂದೆ ಟಿವಿ ಇದ್ದದ್ದು. ದುರಂತ ಅಂದರೆ ಇದೀಗ ಈ ಟಿವಿ ಕೂಡ ಕೆಟ್ಟೋಗಿದೆ. ಈಗ ಇವರಿಗೆ ಕರೆಂಟ್ ಇದ್ದಾಗ ರಾತ್ರಿ ಚಾರ್ಚ್ ಆದ ಮೊಬೈಲ್ ಬದುಕಾಗಿದೆ. 2021ನೇ ಇಸವಿಯಲ್ಲೂ ಕರೆಂಟ್ ಇಲ್ಲದ ಗ್ರಾಮದ ಅಂದರೆ ಇದೊಂದೆ ಅಂತಾರೆ ವಿನೋಬಾ ನಗರದ ಜನ.
ಒಟ್ಟಾರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಗ್ರಾಮಕ್ಕೆ ಹಾಗೂ 150 ಜನರಿಗೆ ಒಂದೇ ಒಂದು ಟಿವಿ ಇರೋ ಗ್ರಾಮ ಅಂದ್ರೆ ಬಹುಶಃ ಇದೇ ಇರ್ಬೇಕು. ಇಲ್ಲಿನ ಜನ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಊರನ್ನ ಎಂ.ಪಿ. ಅಥವಾ ಎಂ.ಎಲ್.ಎ. ಅಭಿವೃದ್ಧಿ ಮಾಡಬೇಕು. ಇವ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಲ್ಲ. ಆದರೆ, ಶಾಸಕರು ಹಾಗೂ ಸಂಸದರಿಂದ ಆದ ಅಭಿವೃದ್ಧಿ ಶೂನ್ಯ.
Published by: Sushma Chakre
First published: October 25, 2020, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading