ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಯ ಮೇಲೆ ಕೊರೋನಾ ಕರಿನೆರಳು; ಸರಳ ರಥೋತ್ಸವ ಮಾಡಲು ನಿರ್ಧಾರ

ಪ್ರತಿ ಬಾರಿಯ ವಿಶಾಳಿ ಜಾತ್ರೆ ಯಡೂರು ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಇಲ್ಲಿನ ರಥೋತ್ಸವ  ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರೆವೇರುತ್ತಿತ್ತು. ಆದರೆ ಈ ಬಾರಿ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವ  ಸಲುವಾಗಿ ಕೇವಲ ದೇವರ ದರ್ಶನ, ಅನ್ನ ದಾಸೋಹ, ಲಿಂಗದೀಕ್ಷೆ ಮಾತ್ರ ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಮಾಡಲಾಗುತ್ತಿದೆ ಎಂದಿದ್ದಾರೆ‌.

ಶ್ರೀಶೈಲ ಜಗದ್ಗುರುಗಳು ಮತ್ತು ಯಡೂರು ಶ್ರೀ ಕಾಡಸಿದ್ದೇಶ್ವರ ಮಠ

ಶ್ರೀಶೈಲ ಜಗದ್ಗುರುಗಳು ಮತ್ತು ಯಡೂರು ಶ್ರೀ ಕಾಡಸಿದ್ದೇಶ್ವರ ಮಠ

  • Share this:
ಚಿಕ್ಕೋಡಿ(ಫೆ.09): ಆ ಊರ ಜಾತ್ರೆ ಅಂದ್ರೆ ಸಾಕು ಮೂರು ರಾಜ್ಯದ ಜನ ಸೇರಿ ಭಕ್ತಿ ಭಾವ ಮೆರೆದು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದರು.‌ ಆದರೆ ಈ ಬಾರಿ ಕೊರೋನಾ ಮಹಾಮಾರಿಯ ಕರಿ ನೆರಳ ಛಾಯೆ ಆ ವಿಜೃಂಭಣೆಯ ಜಾತ್ರೆಯ ಮೇಲೆ ಬಿದ್ದಿದೆ. ಅಷ್ಟಕ್ಕೂ ಲಕ್ಷಾಂತರ ಜನ ಸೇರುವುದಕ್ಕೆ ಕಡಿವಾಣ ಹಾಕಿರುವ ಶ್ರೀಶೈಲ ಜಗದ್ಗುರುಗಳು ಸರಳ ರಥೋತ್ಸವ ಮಾಡಲು  ಮುಂದಾಗಿದ್ದಾರೆ.

ಜಗತ್ತಿಗೆ ಬಿಟ್ಟು ಬಿಡದಂತೆ ಕಾಡಿದ ಕೊರೋನಾ ಕರಿನರೆಳು ಇನ್ನೂ ದೂರವಾಗಿಲ್ಲ. ಹೀಗಾಗಿ ಸಾಂಪ್ರದಾಯಿಕವಾಗಿ ಇತಿಹಾಸ ಸಾರುವ ಭಕ್ತಿ ಪರಾಕಾಷ್ಠೆ ಮೆರೆಯುವ ಅತ್ಯಂತ ದೊಡ್ಡ ಜಾತ್ರೆಗಳು ಸಮಾರಂಭಗಳಿಗೆ ಅಡ್ಡಿಯಾಗಿದೆ.‌ ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಶ್ರೀ ಕಾಡಸಿದ್ದೇಶ್ವರ ಮಠದ ವೀರಭದ್ರದೇವರ ವಿಶಾಳಿ ಜಾತ್ರೆಯ ಮೇಲೂ ಸಹ ಕರೋನ ಕರಿ ನೆರಳು ಬಿದ್ದಿದೆ. 1008 ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಶಿಷ್ಠಾಚಾರದ ಹಾಗೂ ಪಾರಂಪರಿಕ ಆಚರಣೆಗಳನ್ನು ಮಾತ್ರ ಮಾಡಲಿದ್ದೇವೆ ಎಂದು ಮಾಧ್ಯಮಗಳ ಮೂಲ ಭಕ್ತರಿಗೆ  ತಿಳಿಸಿದ್ದಾರೆ.

ಎರಡನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ; ವ್ಯಾಕ್ಸಿನ್​ ಹಾಕಿಸಿಕೊಂಡ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಹೌದು, ಪ್ರತಿ ಬಾರಿಯ ವಿಶಾಳಿ ಜಾತ್ರೆ ಯಡೂರು ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಇಲ್ಲಿನ ರಥೋತ್ಸವ  ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರೆವೇರುತ್ತಿತ್ತು. ಆದರೆ ಈ ಬಾರಿ ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವ  ಸಲುವಾಗಿ ಕೇವಲ ದೇವರ ದರ್ಶನ, ಅನ್ನ ದಾಸೋಹ, ಲಿಂಗದೀಕ್ಷೆ ಮಾತ್ರ ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಮಾಡಲಾಗುತ್ತಿದೆ ಎಂದಿದ್ದಾರೆ‌.

ಇನ್ನು ಕಳೆದ ಹಲವು ವರ್ಷಗಳಿಂದಲೂ ಯಡೂರು ಜಾತ್ರೆಯಲ್ಲಿ ಗೋವಾ, ಮಹಾರಾಷ್ಟ್ರ ಕರ್ನಾಟಕದಿಂದ ಲಕ್ಷಾಂತರ ಜನ ಭಾಗವಹಿಸುತ್ತಿದ್ದರು, ಆದ್ರೆ ಈ ವರ್ಷ ಅವರಿಗೆ ಅನುಮತಿ ನೀಡಿಲ್ಲ.

ಒಟ್ಟಿನಲ್ಲಿ ಪ್ರತಿಬಾರಿಯ ಅದ್ದೂರಿತನ ಯಡೂರು ಗ್ರಾಮದ ವಿಶಾಲಿ ಜಾತ್ರೆಯಲ್ಲಿ ಈ ಬಾರಿ  ಇರದಿದ್ದರೂ ಸಹ, ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಆಚರಣೆಗಳನ್ನ ಮಾತ್ರ ನಡೆಸಲಾಗುತ್ತಿದೆ. ಹೀಗಾಗಿ ಭಕ್ತರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಸ್ಯಾನಿಟೈಸ್ ಬಳಸೋದು ಮರೆಯಬಾರದು ಎನ್ನುವುದು ಶ್ರೀಮಠದ ಕೋರಿಕೆ.
Published by:Latha CG
First published: