ಜೀವಂತ ಇದ್ದವರ ಮನೆಗೆ ಹೆಣ ಕಳಿಸಿದ ಆಸ್ಪತ್ರೆ ಸಿಬ್ಬಂದಿ; ಅಂತ್ಯ ಸಂಸ್ಕಾರವಾದ ಬಳಿಕ ಶವ ಮರಳಿಸಿ ಎಂದರು 

ಅಂತ್ಯ ಸಂಸ್ಕಾರವಾದ  ಬಳಿಕ ತಮ್ಮಿಂದ ತಪ್ಪಾಗಿದೆ. ಮೃತದೇಹವನ್ನು ಮರಳಿಸುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ನಡೆದಿದೆ. 

ಘಟನೆ ಚಿತ್ರಣ

ಘಟನೆ ಚಿತ್ರಣ

  • Share this:
ಚಿಕ್ಕೋಡಿ (ಮೇ. 4): ಕೊರೋನಾದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಈ ನಡುವೆ ಆಸ್ಪತ್ರೆಗಳ ಸಿಬ್ಬಂದಿಗಳ ಮಾಡುವ ಎಡವಟ್ಟುಗಳು ಅವರನ್ನು ಇನ್ನಷ್ಟು ಹೈರಾಣು ಮಾಡಿದೆ.  ಜಿಲ್ಲೆಯ ಕಾಗವಾಡದಲ್ಲೂ ಆಸ್ಪತ್ರೆಯ ಸಿಬ್ಬಂದಿಗಳು ಮಾಡಿರುವ ಅಚಾತುರ್ಯದಿಂದ ಕುಟುಂಬವೊಂದು ಆಘಾತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಜೀವಂತವಾಗಿರುವ ಕುಟುಂಬದ ವ್ಯಕ್ತಿಯನ್ನು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ, ಯಾವುದೋ ಮೃತದೇಹವನ್ನು ಕೂಡ ರವಾನಿಸಿದ್ದು, ಅಂತ್ಯ ಸಂಸ್ಕಾರವಾದ  ಬಳಿಕ ತಮ್ಮಿಂದ ತಪ್ಪಾಗಿದೆ. ಮೃತದೇಹವನ್ನು ಮರಳಿಸುವಂತೆ ಒತ್ತಾಯಿಸಿರುವ ಅಮಾನವೀಯ ಘಟನೆ ನಡೆದಿದೆ. 

ತಾಲೂಕಿನ ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ (82)ಎಂಬುವವರು ಮೇ 01 ರಂದು ಬೆಳಗಾವಿಯ ವೆನಸ್ ಖಾಸಗಿ ಆಸ್ಪತ್ರೆಯಲ್ಲಿ ಕೊವೀಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ನಡೆಯುತ್ತಿರುವಾಗಲೇ ಆಸ್ಪತ್ರೆ  ಸಿಬ್ಬಂದಿಗಳು ಪಾಯಪ್ಪ  ಮೇ. 2 ರಂದು ಮುಂಜಾನೆ ಮೃತರಾಗಿದ್ದಾರೆ ಎಂದು  ಅವರ ಮನೆಯವರಿಗೆ ತಿಳಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಸಿಬ್ಬಂದಿಗಳು  ಮೃತ ದೇಹವನ್ನು ಪ್ಯಾಕ್​ ಮಾಡಿ ಅವರ ಮನೆಗೂ ರವಾನಿಸಿದ್ದಾರೆ.

ಪಾಯಪ್ಪ ಅವರು ಸೋಂಕಿಗೆ ತುತ್ತಾಗಿದ್ದ  ಹಿನ್ನಲೆಯಲ್ಲಿ ಮನೆಯವರು ಮೃತನ ಮುಖ ನೋಡದೆ ಪಾಯಪ್ಪ ಅವರ ಜಮೀನಿನಲ್ಲಿ ಅಂತಿಮ ಸಂಸ್ಕಾರವನ್ನ  ಮುಗಿಸಿದ್ದಾರೆ. ಇನ್ನೇನು ಎಲ್ಲವೂ ಮುಗಿತು ಅನ್ನುವಷ್ಟರಲ್ಲಿ ಬೆಳಗಾವಿ ವೆನಿಸ್ ಆಸ್ಪತ್ರೆ ಸಿಬ್ಬಂದಿಗಳು ಮತ್ತೆ ಪಾಯಪ್ಪ ಅವರ ಮನೆಗೆ ಕರೆ ಮಾಡಿ ನಿಮ್ಮ ತಂದೆ ಅವರು ತೀರಿಕೊಂಡಿಲ್ಲ. ಅವರು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ ಎಂದು ಕರೆ ಮಾಡಿದ್ದಾರೆ. ಆದರೆ ಇಷ್ಟರಲ್ಲಿ ಮೃತ ದೇಹದ ಅಂತ್ಯ ಸಂಸ್ಕಾರವು ಮಗಿದು ಹೋಗಿತ್ತು.

ಇನ್ನು ಮೃತನು ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮಾಯಪ್ಪ ಮಾವರಕರ (71) ಮಾಯಪ್ಪ ಅವರ ಮನೆಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆಸ್ಪತ್ರೆಯಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಈ ಅಚಾತುರ್ಯಕ್ಕೆ ಮಾವರಕರ ಮನೆಯವರು ಗಲಾಟೆ ನಡೆಸಿ ನಮ್ಮ ತಂದೆಯ ಮೃತ ದೇಹ ನಮಗೆ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮೃತ ದೇಹಕ್ಕಾ ಒತ್ತಡ ಹೆಚ್ಚುತ್ತಿದ್ದಂತೆ ವೆನಿಸ್ ಆಸ್ಪತ್ರೆ ಸಿಬ್ಬಂದಿಗಳು ಮೇ 02 ರಂದು ಮೋಳೆ ಗ್ರಾಮಕ್ಕೆ ಆಗಮಿಸಿ ನಮಗೆ ಮಾಯಪ್ಪ ಅವರ ಮೃತ ದೇಹ ವಾಪಸ್ ನೀಡಿ ಎಂದು ಕೇಳಿದ್ದಾರೆ. ಆದರೆ, ಸ್ಥಳೀಯರು ನಿರಾಕರಿಸಿದ್ದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದರೆ ನಾವೂ ಮೃತ ದೇಹ ಕೊಡಲು ಸಿದ್ದ ಎಂದು ಹೇಳಿದ್ದಾರೆ.

ಇದನ್ನು ಓದಿ: ಜಿಲ್ಲೆಯ ಜನರ ಸಂಕಷ್ಟಕ್ಕೆ ಮುಂದಾದ ಸುಮಲತಾ; ಸ್ವಂತ ದುಡ್ಡಿನಲ್ಲಿ 2000 ಲೀ ಆಕ್ಸಿಜನ್​ ಖರೀದಿ

ಮೇ.02 ರಂದು ಹೆಣ ಸಿಗದ ಹಿನ್ನಲೆಯಲ್ಲಿ ಇಂದು ಮೇ 03 ರಂದು ಕಾಗವಾಡ ತಾಲೂಕಾಡಳಿತದ ಸಹಾಯದಿಂದ ತಹಶೀಲ್ದಾರಾರದ ಪ್ರಮೀಳಾ ದೇಶಪಾಂಡೆ ಹಾಗೂ ಕಾಗವಾಡ ಪಿಐ ಹಣಮಂತ ಧರ್ಮಟ್ಟಿ ಮತ್ತು ಉಪತಹಶೀಲ್ದಾರ ಅಣ್ಣಪ್ಪ ಕೋರೆ ಅವರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಯಪ್ಪ ಮಾವರಕರ ಅವರ ಅಂತ್ಯಸಂಸ್ಕಾರವಾಗಿದ್ದ ಮೃತ ದೇಹವನ್ನು ಹೊರ ತೆಗೆದು ಮೂಲ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಆಸ್ಪತ್ರೆ ಸಿಬ್ಬಂದಿಯ  ಒಂದು ಸಣ್ಣ ತಪ್ಪಿನಿಂದ ಇಂತಹ ಪ್ರಮಾದ ನಡೆದಿದೆ.  ಸಾಯದೇ ಇರುವವರ ಮನೆಗೆ ಮೃತ ದೇಹ ಕಳಿಸಿದ್ದರಿಂದ ಪಾಯಪ್ಪ ಅವರ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಪಯಪ್ಪಾ ಬದುಕಿದ್ದು ಬೇಗನೆ ಮನಗೆ ಕಳಿಸಿಕೊಡಿ ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.  ಅತ್ತ ಮೃತದೇಹ ರವಾನಿಸದೇ ಆ ಕುಟುಂಬಕ್ಕೂ ತೊಂದರೆಯಾಗುವಂತೆ ವರ್ತಿಸಿದ್ದಾರೆ.  ವೆನಿಸ್ ಆಸ್ಪತ್ರೆಯ ಈ ನಡೆ ವಿರುದ್ದ ಜನ ಆಕ್ರೋಶ ಹೊರ ಹಾಕಿದ್ದಾರೆ..
Published by:Seema R
First published: