HOME » NEWS » State » CHIKKODI GAJENDRA BUFFALO PRICE IS 61 LAKHS LCTC SESR

ಈ ಗಜೇಂದ್ರನ ಬೆಲೆ ಬರೋಬ್ಬರಿ 61 ಲಕ್ಷ ರೂಪಾಯಿ; ಇದು ಸಾಮಾನ್ಯ ಕೋಣವಲ್ಲ

ಅತ್ಯಂತ ಗಾಂಭೀರ್ಯದ ನಡೆ. ಪೊಗರುದಸ್ತು ಮೈಕಟ್ಟು ಹೊಂದುವ ಮೂಲಕ ಗಜೇಂದ್ರ ಎಲ್ಲರ ಆಕರ್ಷಣೆಯಾಗಿದ್ದಾನೆ.  ಮಂಗಸೂಳಿ ಗ್ರಾಮದ ವಿಲಾಸ್ ನಾಯಕ್ ಎಂಬುವವರು ಬೆಳೆಸಿರುವ ಈ ಕೋಣ ಮುರಾ ತಳಿಯದು

news18-kannada
Updated:February 26, 2021, 4:37 PM IST
ಈ ಗಜೇಂದ್ರನ ಬೆಲೆ ಬರೋಬ್ಬರಿ 61 ಲಕ್ಷ ರೂಪಾಯಿ; ಇದು ಸಾಮಾನ್ಯ ಕೋಣವಲ್ಲ
ಗಜೇಂದ್ರ ಕೋಣ
  • Share this:
ಚಿಕ್ಕೋಡಿ (ಫೆ. 26): ಕೋಣಗಳು ಎಂದರೆ ಸಾವಿರಾರು ರೂಪಾಯಿಗೆ ಬರುತ್ತವೆ ಎಂಬ ಕಲ್ಪನೆ ಬಹುತೇಕರಲ್ಲಿದೆ. ಕೆಲವೊಂದು ಕೋಣಗಳು ಲಕ್ಷದ ಬೇಡಿಕೆ ಹೊಂದಿರಬಹುದು. ಆದರೆ, ಈ ಕೋಣ ಬರೊಬ್ಬರಿ ಅರ್ಥಕೋಟಿಗೂ ಹೆಚ್ಚು ಬೆಲೆಯನ್ನು ಹೊಂದುವ ಮೂಲಕ ಹೆಸರು ಮಾಡಿದೆ. ಅಷ್ಟಕ್ಕೂ ಅಷ್ಟೋಂದು ಬೆಲೆ ಬಾಳುವ ಈ ಕೋಣದ ವಿಶೇಷ ಏನು ಎಂಬುದಕ್ಕ ಇಲ್ಲಿದೆ ಕಾರಣ. ಜಿಲ್ಲೆಯ ಕಾಗವಾಡ ತಾಲೂಕಿಮ ಮಂಗಸುಳಿ ಗ್ರಾಮದಲ್ಲಿ ಈ ಕೋಣದ ಹೆಸರು ಗಜೇಂದ್ರ ಎಂದು. ಇದರ ಬೆಲೆ 61 ಲಕ್ಷ.  ಅತ್ಯಂತ ಗಾಂಭೀರ್ಯದ ನಡೆ. ಪೊಗರುದಸ್ತು ಮೈಕಟ್ಟು ಹೊಂದುವ ಮೂಲಕ ಗಜೇಂದ್ರ ಎಲ್ಲರ ಆಕರ್ಷಣೆಯಾಗಿದ್ದಾನೆ.  ಮಂಗಸೂಳಿ ಗ್ರಾಮದ ವಿಲಾಸ್ ನಾಯಕ್ ಎಂಬುವವರು ಬೆಳೆಸಿರುವ ಈ ಕೋಣ ಮುರಾ ತಳಿಯದು. ದಿನವೊಂದಕ್ಕೆ ಈತನಿಗೆ ಬರೊಬ್ಬರಿ 15 ಲೀಟರ್ ಹಾಲು ಹಾಗೂ 5 ಕೆಜಿ ಪಶು ಆಹಾರ, ಕಬ್ಬು ಮೇವು ಹಾಕಿ ಕಳೆದ ಮೂರು ವರ್ಷಗಳಿಂದ ವಿಲಾಸ್  ಪ್ರೀತಿಯಿಂದ ಬೆಳೆಸಿದ್ದಾರೆ‌‌.‌

ಇತ್ತಿಚಿಗೆ ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ್ ನಲ್ಲಿ ನಡೆದ ಪಶು ಪ್ರದರ್ಶನದಲ್ಲಿ ಈ ಗಜೇಂದ್ರನನ್ನ ಬರೋಬ್ಬರಿ 61 ಲಕ್ಷ ರೂಪಾಯಿಗೆ ಬೇಡಿದ್ದರೂ ಸಹ ಮಾಲೀಕ ವಿಲಾಸ ಮಾರಟ ಮಾಡಿಲ್ಲ. ಅದಕ್ಕೆ ಕಾರಣ ವಿಲಾಸ ಕುಟುಂಬಕ್ಕೆ ಕೋಣದ ಮೇಲೆ ಇರುವ ಪ್ರೀತಿ. ವಿಲಾಸ ಅವರು ಈ ಕೋಣವನ್ನ ತಮ್ಮ ಕುಟುಂಬದ ಒಬ್ಬ ಗಂಡು ಸದಸ್ಯನಂತೆ ಬೆಳೆಸಿ ಸಾಕಿದ್ದಾರೆ. ಇನ್ನು ಇದಕ್ಕೆ ಎಷ್ಟೆ ಖರ್ಚಾದರು ಪರವಾಗಿಲ್ಲ. ಮಾರಾಟ ಮಾತ್ರ ಮಾಡಲ್ಲ  ಇನ್ನು ಕಟು ಮಸ್ತಾಗಿ ಬೆಳೆಸುತ್ತೇನೆ ಎನ್ನುತ್ತಾರೆ ವಿಲಾಸ್​.

ಗಜೇಂದ್ರ ಕೋಣ


ವಿಲಾಸ್​ ಮೇವು ಮಾರಿಕೊಂಡು ಬರೋಬ್ಬರಿ  50 ಕ್ಕೂ ಹೆಚ್ಚು ಎಮ್ಮೆಗಳನ್ನ ಸಾಕಿದ್ದಾರೆ.  ಈ ಗಜೇಂದ್ರನ ತಾಯಿ ಎಮ್ಮೆಯನ್ನ ಕಳೆದ ನಾಲ್ಕು ವರ್ಷದ ಹಿಂದೆ ವಿಲಾಸ್​  1 ಲಕ್ಷ  40 ಸಾವಿರ ಕೊಟ್ಟು ತಂದಿದ್ದರಂತೆ.  ಅದು ಜನ್ಮ ನೀಡಿದ ಮರಿಯೇ ಸದ್ಯ ಹೀಗೆ ದೈತ್ಯವಾಗಿ ಬೆಳೆದಿರುವ ಈ ಗಜೇಂದ್ರ. ಇಷ್ಟು ತೂಕ ಇಷ್ಟು ಆಕರ್ಷಣಿಯವಾಗಿ ಗಜೇಂದ್ರ ಬೆಳೆಯುತ್ತಾನೆ ಎಂದು ಸ್ವತಹ ವಿಲಾಸ ಅವರೇ ಭಾವಿಸಿರಲಿಲ್ಲವಂತೆ.

ಇದನ್ನು ಓದಿ: ಮಗನ ಭವಿಷ್ಯಕ್ಕಾಗಿ ಸಾಲ ಮಾಡಿ ಕಾರು ಕೊಡಿಸಿದ ಕೂಲಿಕಾರ ಕುಟುಂಬದ ಬಿಪಿಎಲ್​ ಕಾರ್ಡ್​ ರದ್ದು

ಬೇರೆ ಕೋಣಗಳಂತೆ ಇದನ್ನು ಸಹ ಸಾಕಿದ್ದಾರಂತೆ ಆದರೆ, 6 ತಿಂಗಳಗಳ ಬಳಿಕ ಇದರ ಬೆಳವಣಿಗೆ ಕಂಡ ವಿಲಾಸ ಕುಟುಂಬ ಹೆಚ್ಚಿನ ಆಸಕ್ತಿ ತೋರಿ ಹಾಲು ಹಿಂಡಿ ಹಾಕಿ ಪ್ರೀತಿಯಿಂದ ಬೆಳೆಸಿದ ಪರಿಣಾಮ ಸದ್ಯ ಗಜೇಂದ್ರ ಬರೋಬ್ಬರಿ ಒಂದೂವರೆ ಟನ್ ತೂಗುವಷ್ಟು ಭಾರವಾಗಿದ್ದಾನೆ.

ಒಟ್ಟಿನಲ್ಲಿ ಈಗಿನ ಕಾಲದಲ್ಲಿ ಪೆಟ್ ಡಾಗ್ ಗಳ ಹೆಸರಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುವ ಜನರಿಂಗಿಂತ ವಿಲಾಸ ಅಭಿರುಚಿ ಮತ್ತು ಗಜೇಂದ್ರನನ್ನು ಸಾಕಿರುವ ರೀತಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಫಿದಾ ಆಗಿದ್ದಾರೆ. ನಿತ್ಯ ನೂರಾರು ಮಂದಿ ಬಂದು ಗಜೇಂದ್ರನ ನೋಡಿಕೊಂಡು ಹೋಗುತ್ತಿದ್ದಾರೆ.‌ ಇನ್ನು ಮಹಾರಾಷ್ಟ್ರ ಗಡಿ ಹಳ್ಳಿಗಳಲ್ಲಿ ಗಜೇಂದ್ರ ನ ಹವಾ ಜಾಸ್ತಿ ಇದ್ದು ನಿತ್ಯವು ಮಹಾರಾಷ್ಟ್ರದಿಂದ ಹತ್ತಕ್ಕೂ ಹೆಚ್ಚು ಜನರ ಬಂದು ನೋಡಿ ಹೋಗುತ್ತಾರೆ.
Published by: Seema R
First published: February 26, 2021, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories