ಕೆರೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರು; 28 ವರ್ಷ ಕಳೆದರೂ ಇನ್ನೂ ಸಿಕ್ಕಿಲ್ಲ ಪರಿಹಾರ

ಇದುವರೆಗೂ ಜಮೀನು ರೈತರ ಹೆಸರಿನಲ್ಲೆ ಉಳಿದುಕೊಂಡಿದೆ.  ಸರ್ಕಾರ ತನ್ನ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಆದ್ರೆ ಪ್ರತಿ ವರ್ಷವೂ ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತಲೇ ಇದೆ.

ಕೆರೆ

ಕೆರೆ

  • Share this:
ಚಿಕ್ಕೋಡಿ(ಅ.31): ಅವರು ಬಡ ರೈತರು, ತಮ್ಮ ಊರಿಗೆ ಒಂದು ಕೆರೆ ಬೇಕು ಎಂದು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ಕೆರೆಯನ್ನು ನಿರ್ಮಾಣ ಮಾಡಿತ್ತು. ಕೆರೆ ನಿರ್ಮಾಣ ಮಾಡುವಾಗ ಸ್ಥಳೀಯರ ಜಮೀನು ಖರೀದಿ ಮಾಡಿ ಪರಿಹಾರ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಈಗ ಕೆರೆಯೇನೋ ನಿರ್ಮಾಣ ಆಗಿದೆ. ಆದರೆ ಕೆರೆ ನಿರ್ಮಾಣಕ್ಕೆ ತಮ್ಮ ಜಮೀನು ಕೊಟ್ಟಿದ್ದ ರೈತರಿಗೆ ಪರಹಾರ ಮಾತ್ರ ಕೊಟ್ಟಿಲ್ಲ. ಈಗ ಆ ಕೆರೆಗೆ ಜಮೀನು ನೀಡಿದ ರೈತರು ಕಳೆದ 27 ವರ್ಷಗಳಿಂದಲೂ ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಹೌದು, ಇಂತಹ ಪರಿಸ್ಥಿತಿ ಇರೋದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ. ಮಜಲಟ್ಟಿ ಗ್ರಾಮ ತೀರ ಬರಡು ಪ್ರದೇಶ ಹೊಂದಿರುವ ಗ್ರಾಮ. ಕೃಷ್ಣಾ ನದಿ ಪ್ರವಾಹ ಬಂದ್ರು ಇಲ್ಲಿನ ಜನ ಮಾತ್ರ ಕುಡಿಯುವ ನೀರಿಗಾಗಿ ಪರಿತಪ್ಪಿಸಬೇಕು. ಅಂತಹ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಈಗಲು ಬೇಸಿಗೆ ಬಂದ್ರೆ ಸಾಕು ಜನ ಬಿಂದಿಗೆಗಳನ್ನ ಹಿಡಿದೆ ಹತ್ತಾರು ಕಿಲೋ ಮೀಟರ್​​​ವರೆಗೂ ಕುಡಿಯುವ ನೀರಿಗಾಗಿ ಇಲ್ಲಿನ ಜನ ಸುತ್ತಾಡುತ್ತಾರೆ‌.

ಇಂತಹ ಪರಿಸ್ಥಿತಿ ಕಂಡ ಜನ ತಮ್ಮೂರಿಗೆ ಒಂದು ಕೆರೆ ನಿರ್ಮಾಣ ಮಾಡಿ ಕೊಡುವಂತೆ ಸರ್ಕಾರಕ್ಕೆ ಕಳೆದ 27 ವರ್ಷಗಳ ಹಿಂದೆ ಮನವಿ ಸಲ್ಲಿಸಿದ್ದರು.  ಅದಕ್ಕೆ ಸಮ್ಮತಿ ಸೂಚಿಸಿದ್ದ ಸರ್ಕಾರ ಅಂದು ಸ್ಥಳೀಯರಿಂದ ಒಳ್ಳೆಯ ಫಲವತ್ತಾದ 26 ಎಕರೆ ಜಮೀನನ್ನು ವಶ ಪಡಿಸಿಕೊಂಡು ಗ್ರಾಮಕ್ಕೆ ಒಂದು ಕೆರೆಯನ್ನ ನಿರ್ಮಾಣ ಮಾಡಿತ್ತು. ಸದ್ಯ ಆ ಕೆರೆ ನೀರಿನಿಂದ ತುಂಬಿ ತುಳುಕುತ್ತಿದೆ. ಆದ್ರೆ ಜನರಿಗೆ ಪರಿಹಾರ ಮಾತ್ರ ದೊರಕಿಲ್ಲ.

ಕೊರೋನಾ ರೋಗಿಗಳಿಗೆ ಬೆಡ್ ಕೊಡದ 7 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್​ ನೋಟಿಸ್​ ನೀಡಿದ ಬಿಬಿಎಂಪಿ

ಇನ್ನು ರೈತರಿಂದ ಜಮೀನು ಪಡೆಯುವಾಗ ಅಂದಿನ ಅಧಿಕಾರಿಗಳು ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡುತ್ತೇವೆ ಅಥವಾ ಜಮೀನು ಬದಲಾಗಿ ಬೇರೆ ಸರ್ಕಾರಿ ಜಮೀನು ನೀಡುವ ಭರವಸೆ ಕೊಟ್ಟು ಕೆರೆ ನಿರ್ಮಾಣ ಮಾಡಿದ್ರು. ಆದ್ರೆ ಆ ಭರವಸೆ ಮಾತ್ರ ಇವತ್ತಿಗೂ ಭರವಸೆ ಆಗಿಯೆ ಉಳಿದಿದೆ. 27 ವರ್ಷ ಕಳೆದರೂ ಕೆರೆ ನಿರ್ಮಾಣಕ್ಕೆ ಜಮೀನು ಕೊಟ್ಟಿದ್ದ 20ಕ್ಕೂ ಹೆಚ್ಚು ಕುಟುಂಬಗಳು ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ‌.

ಇದುವರೆಗೂ ಜಮೀನು ರೈತರ ಹೆಸರಿನಲ್ಲೆ ಉಳಿದುಕೊಂಡಿದೆ.  ಸರ್ಕಾರ ತನ್ನ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಂಡಿಲ್ಲ. ಆದ್ರೆ ಪ್ರತಿ ವರ್ಷವೂ ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತಲೇ ಇದೆ. ಅಲ್ಲದೆ ಕೃಷ್ಣಾ ನದಿಯ ಮೂಲಕ ನದಿಗೆ ಪೈಪ್​​​ಲೈನ್ ತಂದು ಪ್ರತಿ ವರ್ಷವೂ ಕರೆ ತುಂಬಿಸುತ್ತಲೇ ಬಂದಿದೆ. ಸರ್ಕಾರಕ್ಕೆ ಎರಡು ಬಾರಿ ಕೆರೆ ಜಮೀನು ವಶಪಡಿಸಿಕೊಂಡಿರುವ ಬಗ್ಗೆ ಪತ್ರ ಬರೆದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಅಂತಾರೆ ಭೂಮಿ ಕಳೆದುಕೊಂಡ ರೈತರು.

ಒಟ್ಟಿನಲ್ಲಿ ಸರ್ಕಾರ ಕೆರೆ ತುಂಬಿಸಿ ಗ್ರಾಮಸ್ಥರ ಸಮಸ್ಯೆಯನ್ನೇನೋ ದೂರ ಮಾಡಿ ಕೈ ತೊಳೆದುಕೊಳ್ಳುತ್ತಿದೆ. ಆದರೆ ಕೆರೆಗೆ ಜಮೀನು ಕೊಟ್ಟ ರೈತರ ಬಗ್ಗೆ ಮಾತ್ರ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ನ್ಯಾಯ ದೊರಕಿಸಿ ಕೊಡಬೇಕಾಗಿದೆ.
Published by:Latha CG
First published: