ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಯೋಧನ ಕುಟುಂಬ; ಬೇಕಿದೆ ನೆರವಿನ ಹಸ್ತ

ರಜೆಯಲ್ಲಿದ್ದ ವೇಳೆ ಯೋಧ ಸಾವನ್ನಪ್ಪಿದ ಹಿನ್ನೆಲೆ ಕುಟುಂಬಕ್ಕೆ ಇನ್ನು ಪರಿಹಾರ ಹಣ ಸಿಕ್ಕಿಲ್ಲ. ಅಷ್ಟೇ ಅಲ್ಲದೇ, ಅಷ್ಟು ವರ್ಷ ಸೇನೆಗಾಗಿ ಸೇವೆ ಸಲ್ಲಿಸದ ಎಂಬ ಕೃತಜ್ಞತೆಯನ್ನು ತೋರದೆ ಜಿಲ್ಲೆಯ ನಾಯಕರು, ಅಧಿಕಾರಿಗಳು ಕೂಡ ಅವರಿಗೆ ಗೌರವ ವಂದನೆ ಸಲ್ಲಿಸಲಿಲ್ಲ.

news18-kannada
Updated:February 12, 2020, 6:41 PM IST
ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಯೋಧನ ಕುಟುಂಬ; ಬೇಕಿದೆ ನೆರವಿನ ಹಸ್ತ
ಯೋಧನ ಪೋಷಕರು
  • Share this:
ಚಿಕ್ಕಮಗಳೂರು (ಫೆ.12): ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕನ ಕುಟುಂಬವನ್ನು ಕಾಪಾಡುವುದು ಸರ್ಕಾರದ ಕೆಲಸ. ಆದರೆ, ದೇಶಕ್ಕಾಗಿ ಮಗನನ್ನು ಕೊಡುಗೆಯಾಗಿ ಕೊಟ್ಟ ಈ ಕುಟುಂಬ ಮಾತ್ರ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು, ಜೀವನ ನಿರ್ವಹಣೆಗೆ ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. 

ಆತನ ಹೆಸರು ಚಿದಾನಂದ್​. ಜಿಲ್ಲೆಯ ಬಾಳೇನಹಳ್ಳಿಯಾವರು. ಕಳೆದ 9 ವರ್ಷಗಳಿಂದ ಸಿಆರ್​ಪಿಎಫ್​ ವಿಭಾಗದಲ್ಲಿ  ಸೇವೆ ಸಲ್ಲಿಸುತ್ತಿದ್ದ ಈ ಸೈನಿಕ ಕಳೆದ ಡಿಸೆಂಬರ್​ನಲ್ಲಿ ಊರಿಗೆ ಭೇಟಿ ನೀಡಿದ್ದರು. ಆದರೆ, ದುರದೃಷ್ಟ ಎಂಬಂತೆ ಈ ವೇಳೆ ಬೈಕ್​ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ರಜೆಯಲ್ಲಿದ್ದ ವೇಳೆ ಯೋಧ ಸಾವನ್ನಪ್ಪಿದ ಹಿನ್ನೆಲೆ ಕುಟುಂಬಕ್ಕೆ ಇನ್ನು ಪರಿಹಾರ ಹಣ ಸಿಕ್ಕಿಲ್ಲ. ಅಷ್ಟೇ ಅಲ್ಲದೇ, ಅಷ್ಟು ವರ್ಷ ಸೇನೆಗಾಗಿ ಸೇವೆ ಸಲ್ಲಿಸದ ಎಂಬ ಕೃತಜ್ಞತೆಯನ್ನು ತೋರದೆ, ಜಿಲ್ಲೆಯ ನಾಯಕರು, ಅಧಿಕಾರಿಗಳು ಕೂಡ ಅವರು ಸಾವನ್ನಪ್ಪಿದ ವೇಳೆ ಗೌರವ ವಂದನೆ ಸಲ್ಲಿಸಲಿಲ್ಲ



ಈ ಕುರಿತು ಅಳಲು ತೋಡಿಕೊಂಡಿರುವ ಕುಟುಂಬ, ಸೈನಿಕರು ಕರ್ತವ್ಯ ನಿರ್ವಹಿಸುವಾಗ ಸರ್ಕಾರ ತೋರುವ ಗೌರವವನ್ನು ಆತ ರಜೆಯ ವೇಳೆಯಲ್ಲಿ ಸಾವನ್ನಪ್ಪಿದರೆ ತೋರದೆ ಇರುವುದು ಯಾವ ನ್ಯಾಯ. ಅಷ್ಟೇ ಅಲ್ಲದೇ, ಪರಿಹಾರವನ್ನು ಕೂಡ ಇದುವರೆಗೂ ನೀಡಿಲ್ಲ. ನಮ್ಮ ಮಗ 9 ವರ್ಷಗಳ ಕಾಲ ಸೇನೆಯಲ್ಲಿ ದುಡಿದಿರುವುದನ್ನು ಪರಿಗಣಿಸಿ, ಅಂತ್ಯಸಂಸ್ಕಾರದ ವೇಳೆ ಯಾವುದೇ ಸರ್ಕಾರಿ ಗೌರವನ್ನು ಸಲ್ಲಿಸಿಲ್ಲ ಎಂಬ ನೋವಿದೆ ಎಂದು ಕಂಬನಿ ಮಿಡಿದರು.

ಇದನ್ನು ಓದಿ: ಕಾಫಿನಾಡಿನಲ್ಲಿ ಆತಂಕ ಮೂಡಿಸುತ್ತಿರುವ ಮಂಗನ ಕಾಯಿಲೆ; ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮ

ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದು ಕೊಂಡ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು, ಜೀವನೋಪಾಯಕ್ಕಾಗಿ ಮಾರ್ಗ ಕಾಣದೇ ಹಿರಿ ಜೀವಗಳು ಕೂಲಿ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಕೊಂಡು ಅವರ ಕಷ್ಟಕ್ಕೆ ಸ್ಪಂದಿಸಲಿ ಎಂಬುದು ಗ್ರಾಮದ ಜನರ ಆಶಯವಾಗಿದೆ.
First published:February 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ