ಅರಣ್ಯ ಇಲಾಖೆ ಮಾತು ನಂಬಿ ಮನೆ ಮಠ ಬಿಟ್ಟ ಚಿಕ್ಕಮಗಳೂರಿನ ಈ ಗ್ರಾಮಗಳ ಜನರು ಈಗ ಅತಂತ್ರ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿದ್ದ ಈ ಗ್ರಾಮಸ್ಥರನ್ನು ಊರು ಬಿಟ್ಟು ಹೋಗುವಂತೆ ಅರಣ್ಯ ಇಲಾಖೆ ಸೂಚನೆ ನೀಡಿತು. ಪರಿಹಾರ ನೀಡುವ ಭರವಸೆ ನೀಡಿದ್ದ ಇಲಾಖೆ ಇದುವರೆಗೂ ಅವರಿಗೆ ಒಂದು ಬಿಡಿಗಾಸು ನೀಡಿಲ್ಲ

news18-kannada
Updated:February 28, 2020, 2:53 PM IST
ಅರಣ್ಯ ಇಲಾಖೆ ಮಾತು ನಂಬಿ ಮನೆ ಮಠ ಬಿಟ್ಟ ಚಿಕ್ಕಮಗಳೂರಿನ ಈ ಗ್ರಾಮಗಳ ಜನರು ಈಗ ಅತಂತ್ರ
ಪರಿಹಾರದ ನಿರೀಕ್ಷೆಯಲ್ಲಿ ಗ್ರಾಮಸ್ಥರು
  • Share this:
ಚಿಕ್ಕಮಗಳೂರು(ಫೆ. 28): ದಶಕಗಳಿಂದ ಕಾಡಿನ ನಂಟಿನೊಂದಿಗೆ ಜೀವನ ಕಳೆಯುತ್ತಿದ್ದ ಆ ಕುಗ್ರಾಮಸ್ಥರನ್ನು ಒಕ್ಕಲೆಬ್ಬಿಸಿ ಮೂರು ವರ್ಷಗಳಾಗಿವೆ. ನಿಮ್ಮ ಮನೆ, ಮಠ ಆಸ್ತಿ ಬಿಟ್ಟು ಹೋಗಿ. ಇದಕ್ಕೆ ಪರ್ಯಾಯವಾಗಿ ನಾವು ಸೂರು ಕಲ್ಪಿಸುತ್ತೇವೆ ಎಂಬ ಅರಣ್ಯ ಇಲಾಖೆಯ ಭರವಸೆ ನಂಬಿ ಕಾಡು ಬಿಟ್ಟು ಹೋಗಿದ್ದ ಮುಗ್ದ ಜನರು ಈಗ ಅತಂತ್ರರಾಗಿದ್ದಾರೆ. ಇತ್ತ ಮನೆಯೂ ಇಲ್ಲ, ಪರಿಹಾರವೂ ಇಲ್ಲದಂತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. 

ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ, ನೆಮ್ಮಾರ್, ಹೆಮ್ಮಿಗೆ, ಭಲೇಕಡಿ, ದೇವಂಟಿಗ ಸೇರಿ ಹತ್ತು ಹಲವು ಕುಗ್ರಾಮಗಳ ಜನರ ಸ್ಥಿತಿ ಇದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿದ್ದ ಈ ಗ್ರಾಮಸ್ಥರನ್ನು ಊರು ಬಿಟ್ಟು ಹೋಗುವಂತೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಇದಕ್ಕೆ ಬದಲಾಗಿ ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರ ನೀಡುವ ಕುರಿತು ಮುಚ್ಚಳಿಕೆಯನ್ನು ಅರಣ್ಯ ಇಲಾಖೆ ಬರೆದುಕೊಟ್ಟಿತ್ತು.

ಆದರೆ, ಈಗ ಇವರ ಸ್ಥಿತಿ ಇತ್ತ ಸೂರು ಇಲ್ಲ ಪರಿಹಾರವೂ ಇಲ್ಲ ಎನ್ನುವಂತೆ ಆಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆರ್ಥಿಕ ಸಂಕಷ್ಟದ ನೆಪ ಹೇಳಿ ರೈತರಿಗೆ ನೀಡಬೇಕಾದ ಹಣ ನೀಡದೇ ಸತಾಯಿಸುತ್ತಿದ್ದಾರೆ.



ಪರಿಹಾರ ನೀಡದ ಹಿನ್ನೆಲೆ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾದ ಕಾರಣ ರೈತರು, ತಮ್ಮ ಜಮೀನಿನಲ್ಲಿ ಉಳಿಮೆ ಮಾಡಲಾದರೂ ಬಿಡಿ. ಹೊಲ, ತೋಟ, ಗದ್ದೆ ನೋಡಿಕೊಂಡು ಜೀವನಕ್ಕೆ ಮಾರ್ಗ ಮಾಡಿಕೊಳ್ಳುತ್ತೇವೆ ಎಂದರೆ ಇದಕ್ಕೂ ಅರಣ್ಯ ಇಲಾಖೆ ಬಿಡುತ್ತಿಲ್ಲ.

ಈಗಾಗಲೇ ರೈತರಿಂದ ವಶಪಡಿಸಿಕೊಂಡ  ಗದ್ದೆ-ತೋಟಗಳಲ್ಲಿ ಅರಣ್ಯ ಇಲಾಖೆಯ ಬೋರ್ಡನ್ನ ಹಾಕಿ ಷರಾ ಎಳೆದಿರುವುದು  ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗೀ ತೋಟ-ಗದ್ದೆಯಲ್ಲಿ ಕೆಲಸ ಮಾಡಲಾಗದೇ, ಆದಾಯವೂ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ.  ಇದರಿಂದ ನೊಂದ ನೂರಾರು ರೈತರು ಅರಣ್ಯ ಇಲಾಖೆಯ ವಿರುದ್ಧ  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಲಾಡು ಮಾರಾಟದಿಂದಲೇ ಕೋಟಿ ರೂ. ಆದಾಯಗಳಿಸಿದ ಮಲೆ ಮಹದೇಶ್ವರ ದೇಗುಲಕೇವಲ ಪರಿಹಾರವನ್ನ ಉಳಿಸಿಕೊಂಡಿರುವುದು ಮಾತ್ರವಲ್ಲ, ಈಗಾಗಲೇ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿಸಲು ಪಟ್ಟಿ ಮಾಡಿಕೊಂಡಿರುವ ಕುಗ್ರಾಮಗಳಲ್ಲಿ ಯಾವುದೇ ಮೂಲಸೌಲಭ್ಯ ಒದಗಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ರಸ್ತೆ, ಸೇತುವೆ ನಿರ್ಮಾಣಕ್ಕೆ ಮುಂದಾದರೂ ಈಗಾಗಲೇ ಆ ಕೆಲಸಗಳಿಗೆ ತಡೆಯೊಡ್ಡಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ಸಿ.ಟಿ.ರವಿ, ಈ ಬಗ್ಗೆ ಜನಸಂಪರ್ಕ ಸಭೆಯಲ್ಲಿ ನನಗೆ ದೂರು ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಚಿವರೊಂದಿಗೆ ವಿಧಾನಸಭೆಯಲ್ಲಿ ಮಾತಾನಾಡುತ್ತೇನೆ ಎಂದು ನೊಂದರಿಗೆ ಭರವಸೆ ನೀಡಿದ್ದೇನೆ ಎನ್ನುತ್ತಿದ್ದಾರೆ.
First published:February 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading