ತ್ಯಾಜ ವಿಲೇವಾರಿ ಘಟಕದಲ್ಲಿ ಕೋಟಿ ಕೋಟಿ ರೂ ಅವ್ಯವಹಾರ; ಅಧಿಕಾರಿಗಳ ಪಾಲಿನ ಕಬ್ಬಿನ ಜಲ್ಲೆಯಾದ ಚಿಕ್ಕಮಗಳೂರು ಡಂಪಿಂಗ್​ ಯಾರ್ಡ್

​ ಅಚ್ಚರಿಯಾದರೂ ಹೌದು. ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲಿನ ಅಧಿಕಾರಿಗಳಿಗೆ ಸಿಹಿ ನೀಡುವ ಕಬ್ಬಿನ ಜಲ್ಲೆಯಾಗಿದೆ. ಇದಕ್ಕಾಗಿ ಈ ಯಾರ್ಡ್​ಗೆ ಕೋಟಿ, ಕೋಟಿ ಹಣ ವ್ಯಯಮಾಡಲಾಗುತ್ತಿದೆ.  

news18-kannada
Updated:January 14, 2020, 3:34 PM IST
ತ್ಯಾಜ ವಿಲೇವಾರಿ ಘಟಕದಲ್ಲಿ ಕೋಟಿ ಕೋಟಿ ರೂ ಅವ್ಯವಹಾರ; ಅಧಿಕಾರಿಗಳ ಪಾಲಿನ ಕಬ್ಬಿನ ಜಲ್ಲೆಯಾದ ಚಿಕ್ಕಮಗಳೂರು ಡಂಪಿಂಗ್​ ಯಾರ್ಡ್
ಡಂಪಿಂಗ್​ ಯಾರ್ಡ್​
  • Share this:
ಚಿಕ್ಕಮಗಳೂರು (ಜ.14): ನಗರದಲ್ಲಿ ಕುಡಿಯುವ ನೀರಿಲ್ಲ, ರಸ್ತೆ ಸರಿಯಿಲ್ಲ ಎಂದರೆ ತಲೆ ಕೆಡಿಸಿಕೊಳ್ಳದ  ನಗರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕ ಸರಿಯಿಲ್ಲ ಎಂದರೇ ಸಾಕು ಎಲ್ಲರೂ ಹಾಜರಾಗುತ್ತಾರೆ. ಇದಕ್ಕೆ ಕಾರಣ, ಡಂಪಿಂಗ್​ ಯಾರ್ಡ್​ಗಳು ಚಿನ್ನದ ಮೊಟ್ಟೆಇಡುವ ಕೋಳಿಯಾಗಿರುವುದು.

​ ಅಚ್ಚರಿಯಾದರೂ ಹೌದು. ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಗಳು ಇಲ್ಲಿನ ಅಧಿಕಾರಿಗಳಿಗೆ ಸಿಹಿ ನೀಡುವ ಕಬ್ಬಿನ ಜಲ್ಲೆಯಾಗಿದೆ. ಇದಕ್ಕಾಗಿ ಈ ಯಾರ್ಡ್​ಗೆ ಕೋಟಿ, ಕೋಟಿ ಹಣ ವ್ಯಯಮಾಡಲಾಗುತ್ತಿದೆ.

ಅದೇ ಕಾಪೌಂಡ್​, ಅದೇ ಮಿಷಿನ್​ಗೆ ಲಕ್ಷ ಲಕ್ಷ ಹಣ ವ್ಯಯವಾಗಿರುವದರ ಬಗ್ಗೆ ಮಾಜಿ ಸದಸ್ಯರಲ್ಲಿ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಆರ್​ಟಿಐನಲ್ಲಿ ಮಾಹಿತಿ ಕೋರಿದ್ದಾರೆ. ಈ ಮಾಹಿತಿ ತಿಳಿದಾಗಲೇ ನೋಡಿ ತಿಳಿದಿದ್ದು, ಅಸಲಿ ಸತ್ಯ. ತ್ಯಾಜ್ಯ ವಿಲೇವಾರಿ ಘಟಕಗಳು ಕಸ ನಿರ್ವಹಣೆಗೆ ಮಾತ್ರವಲ್ಲದೇ ಅಧಿಕಾರಿಗಳ ಖರ್ಚಿನ ನಿರ್ವಹಣೆ ಮಾರ್ಗ ಕೂಡ ಆಗಿದೆ.2007ರಿಂದಲೂ ನಗರಸಭೆ ಅಧಿಕಾರಿಗಳು ಇಲ್ಲಿನ ಇಂದಾವರ ಗ್ರಾಮದಲ್ಲಿ ಕಸ ಸುರಿಯಲು ಆರಂಭಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆದರೂ ಕೂಡ ನಗರಸಭೆ ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳದೇ ಇಲ್ಲಿಯೇ ಕಸ ಸುರಿಯುತ್ತಾ, ಕೋಟಿ ಕೋಟಿ ಹಣ ಬಾಚುತ್ತಿದ್ದಾರೆ.

ಅಷ್ಟಕ್ಕೂ ವಿಲೇವಾರಿ ಘಟಕದಲ್ಲಿರುವುದು ಕೇವಲ ಎರಡೇ ಶೆಡ್, ಒಂದೇ ಕಾಪೌಂಡ್. ಬಿಟ್ರೆ ಬೇರೇನೂ ಇಲ್ಲ. ಆದರೆ, ಹಣ ಬಿಡುಗಡೆ ಮಾಡಿ ಅಧಿಕಾರಿಗಳು ಹಾಗೂ ನಗರಸಭೆ ಆಡಳಿತ ಮಾಡಿದ 10 ಕೋಟಿಗೂ ಖರ್ಚು ಮಾಡಿರುವುದಾಗಿ ದಾಖಲು ನೀಡುತ್ತಾರೆ.

ಇದನ್ನು ಓದಿ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಶಂಕರ ಫಾಲ್ಸ್ಒಟ್ಟಿನಲ್ಲಿ ಕಸ ನಿರ್ವಹಣೆ ಘಟಕದ ಹೆಸರಿನಲ್ಲಿ ಅಧಿಕಾರಿಗಳು ಮಾತ್ರ ದುಡ್ಡಿನ ರಸ ಕಂಡು ಕೊಂಡು ಅದನ್ನು ಹೀರುತ್ತಿರುವುದು ಸುಳ್ಳಲ್ಲ.
First published: January 14, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading