ಒಂದೇ ದಿನಕ್ಕೆ ಸ್ಥಗಿತಗೊಂಡ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ; ಪೆಟ್ರೋಲ್​ ಬಾಂಬ್​ ನೆವವಾಯ್ತಾ?

ನಿಮ್ಮ ಕಾರ್ಯಕ್ರಮಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಆತಂಕವಿದೆ. ಕಾರ್ಯಕ್ರಮವನ್ನು ನಿಲ್ಲಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂಬ ಉಲ್ಲೇಖ ಕನ್ನಡ ಜಾತ್ರೆಯ ಸಂಘಟಕರನ್ನು ಬೆಚ್ಚಿಬೀಳಿಸಿದ್ದು, ನಿನ್ನೆ ಒಂದೇ ದಿನಕ್ಕೆ ಕನ್ನಡ ಸಮ್ಮೇಳನ ಸ್ಥಗಿತಗೊಳಿಸಿದ್ದಾರೆ.

news18-kannada
Updated:January 11, 2020, 6:07 PM IST
ಒಂದೇ ದಿನಕ್ಕೆ ಸ್ಥಗಿತಗೊಂಡ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ; ಪೆಟ್ರೋಲ್​ ಬಾಂಬ್​ ನೆವವಾಯ್ತಾ?
ಚಿಕ್ಕಮಗಳೂರು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
  • Share this:
ಚಿಕ್ಕಮಗಳೂರು (ಜ.11): ವಿವಾದಗಳ ನಡುವೆಯೇ  ಆರಂಭಗೊಂಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಒಂದೇ ದಿನಕ್ಕೆ ಸ್ಥಗಿತಗೊಂಡಿದ್ದು, ಸಾಹಿತ್ಯ ಪ್ರಿಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ಸರ್ಕಾರದ ಅನುದಾನ ನಿರಾಕರಣೆ ಜೊತೆಗೆ ವಿರೋಧ, ಪ್ರತಿಭಟನೆಗಳ ನಡುವೆ  ನಿನ್ನೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗಿತ್ತು. ಪೊಲೀಸರ ಅನುಮತಿ ಇಲ್ಲದ ಕಾರಣ ಕನ್ನಡ ಹಬ್ಬವನ್ನ ಕನ್ನಡ ಸಾಹಿತ್ಯ ಪರಿಷತ್ ರದ್ದು ಮಾಡಿದೆ.

ಇನ್ನು ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಆಯ್ಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.  ಸಮ್ಮೇಳನ ಆರಂಭವಾದ ನಂತರವೂ ಈ ವಿರೋಧದ ಕೂಗು ಕೇಳಿಬಂದಿತು. ಕನ್ನಡ ಸಾಹಿತ್ಯ ಪರಿಷತ್​​ ಉಳಿಸಿ, ನಕ್ಸಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಸಮ್ಮೇಳನದ ಮುಂಭಾಗ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು. ಪೊಲೀಸರ  ಅನುಮತಿ ಇಲ್ಲದೇ ಆರಂಭಗೊಂಡಿದ್ದ  ಸಮ್ಮೇಳನಕ್ಕೆ ಧ್ವನಿವರ್ಧಕ ಬಳಸಿದಕ್ಕೂ ಕೂಡ ಪೊಲೀಸರು ನೋಟಿಸ್ ನೀಡಿದ್ದರು.

ಪೆಟ್ರೋಲ್​ ಬಾಂಬ್​ ಎಸೆಯಲು ಸಂಚು: 

ವಿರೋಧದ ನಡುವೆಯೂ ಆರಂಭವಾದ ಸಮ್ಮೇಳನವನ್ನು ನಿಲ್ಲಿಸಲು ಕೆಲವರು ಪೆಟ್ರೋಲ್​ ಬಾಂಬ್​ ಹಾಕಲು ಸಂಚು ರೂಪಿಸಿದ್ದರು. ಈ ಕುರಿತು ಪೊಲೀಸರು ಸಮ್ಮೇಳನಾಧ್ಯಕ್ಷರ ಗಮನಕ್ಕೆ ತಂದು ನುಡಿಜಾತ್ರೆಯನ್ನು ನಿಲ್ಲಿಸುವಂತೆ ಇಂದು ತಿಳಿಸಿದರು.

ಸಮ್ಮೇಳನದ ವೇದಿಕೆ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲು ಕೆಲವರು ಸಂಚು ರೂಪಿಸಿದ್ದಾರೆ ಅಂತಾ ಹೇಳಲಾಗುತ್ತಿದ್ದು, ಈ ಬಗ್ಗೆ ಸಮ್ಮೇಳನದ ಆಯೋಜಕರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸ್ ಇಲಾಖೆ ನೀಡಿದ ನೋಟೀಸ್ ನೋಡಿ ಕಾರ್ಯಕ್ರಮ ಸಂಘಟಕರು ಕಕ್ಕಾಬಿಕ್ಕಿಯಾದರು.

ನಿಮ್ಮ ಕಾರ್ಯಕ್ರಮಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಆತಂಕವಿದೆ. ಕಾರ್ಯಕ್ರಮವನ್ನು ನಿಲ್ಲಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂಬ ಉಲ್ಲೇಖ ಕನ್ನಡ ಜಾತ್ರೆಯ ಸಂಘಟಕರನ್ನು ಬೆಚ್ಚಿಬೀಳಿಸಿದ್ದು, ನಿನ್ನೆ ಒಂದೇ ದಿನಕ್ಕೆ ಕನ್ನಡ ಸಮ್ಮೇಳನ ಸ್ಥಗಿತಗೊಳಿಸಿದ್ದಾರೆ.ಇದನ್ನು ಓದಿ: ವಿರೋಧದ ನಡುವೆ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಶೃಂಗೇರಿ ಬಂದ್​ ಕರೆ ನೀಡಿದ ಸಂಘಟನೆಗಳು

ವಿರೋಧ, ವಿವಾದಗಳ ನಡುವೆ ಜನರಿಂದಲೇ ಆರಂಭಗೊಂಡ ನುಡಿಜಾತ್ರೆ ಒಂದೇ ದಿನಕ್ಕೆ ಅಂತ್ಯಗೊಂಡಿದ್ದು, ಸಾಹಿತ್ಯಾಸಕ್ತರಲ್ಲಿ ಬೇಸರದ ಜೊತೆ, ಸರ್ಕಾರ ಹಾಗೂ ಪೊಲೀಸ್​ ವ್ಯವಸ್ಥೆ ಬಗ್ಗೆ ಆಕ್ರೋಶಕ್ಕೆ ಗುರಿಯಾಗಿದೆ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ