• Home
  • »
  • News
  • »
  • state
  • »
  • ಊರಿಗೆ ಊರು ನಾಗದೋಷಕ್ಕೆ ತುತ್ತು; ಪರಿಹಾರಕ್ಕಾಗಿ ಹೋಮ ಹವನದ ಮೊರೆ ಹೋದ ಗ್ರಾಮಸ್ಥರು

ಊರಿಗೆ ಊರು ನಾಗದೋಷಕ್ಕೆ ತುತ್ತು; ಪರಿಹಾರಕ್ಕಾಗಿ ಹೋಮ ಹವನದ ಮೊರೆ ಹೋದ ಗ್ರಾಮಸ್ಥರು

ಪೂಜೆಯ ಚಿತ್ರ

ಪೂಜೆಯ ಚಿತ್ರ

ಊರಿಗೆ ಊರೇ ಈ ನಾಗದೋಷದ ಸಮಸ್ಯೆಯಿಂದ ಬಳಲುತ್ತಿದೆಯಂತೆ. ಇದೇ ಕಾರಣಕ್ಕೆ ಊರ ಮಂದಿ ಒಟ್ಟುಗೂಡಿ ಈ ದೋಷ ಪರಿಹಾರಕ್ಕೆ ಮುಂದಾಗಿರುವ ಘಟನೆ ಕಾಫಿನಾಡಲ್ಲಿ ನಡೆದಿದೆ. 

  • Share this:

ಚಿಕ್ಕಮಗಳೂರು (ಸೆ. 7): ನಾಗ ದೋಷದ (naga dosha) ಬಗ್ಗೆ ಹಲವರಲ್ಲಿ ಅನೇಕ ನಂಬಿಕೆ ಇದೆ. ಈ ದೋಷದಿಂದ ಅನೇಕ ಕೇಡು ಉಂಟಾಗಲಿದೆ ಎಂಬ ನಂಬಿಕೆ ಅನೇಕರಲ್ಲಿದೆ. ಇದಕ್ಕಾಗಿ ಈ ದೋಷ ನಿವಾರಣೆಗೆ ಮೊದಲು ಮುಂದಾಗುತ್ತಾರೆ. ಸಾಮಾನ್ಯವಾಗಿ ಈ ನಾಗ ದೋಷಗಳು ವ್ಯಕ್ತಿ, ಅಥವಾ ದಂಪತಿ ಅಥವಾ ಕುಟುಂಬಕ್ಕೆ ಉಂಟಾಗುವುದನ್ನು ಕೇಳಿದ್ದೇವೆ. ಆದರೆ,  ಈಗ ಇಡೀ ಗ್ರಾಮವೊಂದು ಈ ನಾಗ ದೋಷದಿಂದ ಸಮಸ್ಯೆಯಿಂದ ಬಳಲುತ್ತಿದೆ ಎಂಬ ಮಾಹಿತಿ ಇಲ್ಲಿನ ಮುಖ್ಯಸ್ಥರೇ ನೀಡಿದ್ದಾರೆ ಊರಿಗೆ ಊರೇ ಈ ನಾಗದೋಷದ ಸಮಸ್ಯೆಯಿಂದ ಬಳಲುತ್ತಿದೆಯಂತೆ. ಇದೇ ಕಾರಣಕ್ಕೆ ಊರ ಮಂದಿ ಒಟ್ಟುಗೂಡಿ ಈ ದೋಷ ಪರಿಹಾರಕ್ಕೆ ಮುಂದಾಗಿರುವ ಘಟನೆ ಕಾಫಿನಾಡಲ್ಲಿ  ನಡೆದಿದೆ. 


ಈ ಊರಲ್ಲಿ ಯುವಕರು ಇದ್ದಕ್ಕಿದ್ದಂತೆ ಸಾಯ್ತಾರೆ. ಯಾರಿಗೂ ಹುಷಾರಿರಲ್ಲ. ಹಳ್ಳೀಲಿ ಒಬ್ಬರ ಕಂಡರೂ ಒಬ್ಬರಿಗೆ ಆಗಲ್ಲ. ಯಾವುದೇ ಕಾರ್ಯಕ್ರಮಗಳು ನಡೆದರೂ ಬರೀ ಗಲಾಟೆ-ಗಲಾಟೆ. ಗ್ರಾಮದಲ್ಲಿ ಇಂತವರ ಕಣ್ಣಿಗೆ ಸರ್ಪ ಬಿದ್ದಿಲ್ಲ ಅಂತಿಲ್ಲ. ಮನೆ ಮುಂದೆಯೇ ಬಂದು ಮಲುಗುತ್ತಾರೆ. ಗ್ರಾಮದಲ್ಲಿ ಏಳಿಗೆ ಇಲ್ಲ. ಒಂದಲ್ಲ ಒಂದು ಸಮಸ್ಯೆ ಕಾಡುತ್ತಾನೆ. ಇದಕ್ಕೆ ಕಾರಣ ನಾಗ ದೋಷವಂತೆ. ಇಡೀ ಗ್ರಾಮದ ಎಲ್ಲಾ ಮನೆಯ ಮಂದಿ ಕೂಡ ಈ ನಾಗ ದೋಷಕ್ಕೆ ತುತ್ತಾಗಿದ್ದಾರೆ. ಇದೇ ಕಾರಣದಿಂದ ಈಗ  ಇಡೀ ಗ್ರಾಮವೇ ಒಂದೆಡೆ ಸೇರಿ ನಾಗ ದೋಷ ಪರಿಹಾರಕ್ಕಾಗಿ ಮುಂದಾಗಿದೆ.  ಮೂರು ದಿನ ಹೋಮ-ಹವನ ನಡೆಸಿದೆ.  ಚಿಕ್ಕಮಗಳೂರು ತಾಲೂಕಿನ ಸಗಣಿಪುರ ಗ್ರಾಮ ಈ ರೀತಿ ದೋಷಕ್ಕೆ ತುತ್ತಾಗಿರುವ ಹಳ್ಳಿ.


ಸಗಣಿಪುರ ಗ್ರಾಮದಲ್ಲಿ ದಶಕಗಳಿಂದ ಒಂದಲ್ಲ ಒಂದು ಸಮಸ್ಯೆ ಜನರನ್ನ ಕಾಡುತ್ತಾನೆ ಇತ್ತು. ಗ್ರಾಮದ ಸಮಸ್ಯೆಗೆ ಕಾರಣ ಹುಡುಕ ಹೊರಟವರು ಗ್ರಾಮದೇವತೆ ತೋಪಿನಮ್ಮ ಹಾಗೂ ಅಂತರಘಟ್ಟಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಂದಾದ್ರು. ಅಲ್ಲಿ ತೋಪಿನಮ್ಮನ ಮೂರ್ತಿ ಹೇಗಿರುತ್ತದೆ ಅನ್ನೋದೆ ಗೊತ್ತಿರಲಿಲ್ಲ. ಜ್ಯೋತಿಷಿಗಳ ಮೊರೆ ಹೋದಾಗ ಸಿಕ್ಕಿದ್ದು ಅಷ್ಟ ಮಂಗಳ ಪ್ರಶ್ನೆಯಿಂದ ಉತ್ತರ ಸಿಗುತ್ತೆ ಎನ್ನುವುದ. ಕೂಡಲೇ  ಗ್ರಾಮಸ್ಥರು ಉಡುಪಿಯ ಕಾಪುವಿಗೆ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳಿದರು. ಅಲ್ಲಿ ನಾಗದೇವತೆ ಹತ್ಯೆಯಿಂದ ಗ್ರಾಮದಲ್ಲಿ ದೋಷ ಇದೆ ಎಂದಾಗ ಇಡೀ ಗ್ರಾಮ ಭವಿಷ್ಯದ ಒಳಿತಿಗಾಗಿ ಒಂದೆಡೆ ಸೇರಿ ಮೂರು ದಿನ ಐದು ಹೋಮ ನಡೆಸಿ ಭಗವಂತ ಮನ್ನಿಸಪ್ಪಾ ಎಂದು ಬೇಡಿಕೊಂಡಿದ್ದಾರೆ.


ಇದನ್ನು ಓದಿ: 'ಶೇರ್​ ಷಾ' ನಟಿ ಕಿಯಾರ ಅಡ್ವಾಣಿ ತದ್ರೂಪಿ ಪತ್ತೆ; ಅಭಿಮಾನಿಗಳಲ್ಲಿ ಅಚ್ಚರಿ


ಇನ್ನೂ ಅಷ್ಟಮಂಗಳದಲ್ಲಿ ಸಿಕ್ಕ ಉತ್ತರದಂತೆ ಮೂರು ದಿನ ಇಡೀ ಗ್ರಾಮಸ್ಥರು ವಿಶೇಷ ಹೋಮ-ಹವನ ನಡೆಸಿದ್ರು. ಚಂಡಿಕಾಯಾಗ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ,  ಸೇರಿದಂತೆ ಮೂರು ದಿನದಲ್ಲಿ ಐದು ಹೋಮ ನಡೆಸಿದರು. ನೂರಾರು ವರ್ಷಗಳ ಹಿಂದೆ ನಡೆಯುತ್ತಿದ್ದ ಧಾರ್ಮಿಕ ವಿಧಿ-ವಿಧಾನಗಳು ನಿಂತಿದ್ವು. ಗ್ರಾಮಕ್ಕೆ ನಾಗದೋಷವೂ ಕಾಡುತ್ತಿತ್ತು. ಹಾಗಾಗಿ, ಜನ ಮತ್ತೆ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಆಚರಣೆಯನ್ನ ಮುಂದುವರೆಸಲು ಚಿಂತಿಸಿದ್ದಾರೆ. ಗ್ರಾಮದಲ್ಲಿ ಆರ್ಥಿಕ ಸಂಕಷ್ಟ. ಒಂದಲ್ಲ ಒಂದು ಸಮಸ್ಯೆ. ಮಳೆ-ಬೆಳೆ ಅಭಾವ ಜನರನ್ನ ಕಾಡುತ್ತಿದ್ದು. ಇಂದಿನ ಪೂಜೆಯಿಂದ ಹಳ್ಳಿಗರಲ್ಲಿ ಹೊಸ ಆಶಾಭಾವನೆ ಮೂಡಿದೆ.


ಒಟ್ಟಾರೆ, ಶತಮಾನಗಳ ಸಮಸ್ಯೆಯಿಂದ ಪಾರಾಗಲು ಸಗಣಿಪುರ ಗ್ರಾಮ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಕಷ್ಟ-ನೋವು-ಸಂಕಟದಲ್ಲೇ ಬದುಕುತ್ತಿದ್ದ ಹಳ್ಳಿಗರ ಮೊಗದಲ್ಲಿಂದು ಹೊಸ ಬದುಕಿನ ಮನ್ವಂತರದ ಆಸೆ ಚಿಗುರೊಡೆದಿತ್ತು. 6 ತಿಂಗಳಲ್ಲಿ ತೋಪಿನಮ್ಮ, ಅಂತರಗಟ್ಟಮ್ಮನ ದೇಗುಲ ನಿರ್ಮಿಸಿ ಗ್ರಾಮದಲ್ಲಿ ಇತಿಹಾಸದ ಗತವೈಭವವನ್ನ ಮರುಕಳಿಸಲು ಗ್ರಾಮಸ್ಥರು ಪಣತೊಟ್ಟಿದ್ದಾರೆ.

Published by:Seema R
First published: