• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ತರೀಕೆರೆಯಲ್ಲಿ ಸೆಲ್ಫೀ ಸ್ಪಾಟ್​​ಗಳಾಗಿ ಬದಲಾದ ಪಬ್ಲಿಕ್ ಟಾಯ್ಲೆಟ್​​ಗಳು...!

Chikkamagaluru: ತರೀಕೆರೆಯಲ್ಲಿ ಸೆಲ್ಫೀ ಸ್ಪಾಟ್​​ಗಳಾಗಿ ಬದಲಾದ ಪಬ್ಲಿಕ್ ಟಾಯ್ಲೆಟ್​​ಗಳು...!

ಸಾರ್ವಜನಿಕ ಶೌಚಾಲಯಗಳು

ಸಾರ್ವಜನಿಕ ಶೌಚಾಲಯಗಳು

ಕಳೆದೊಂದು ವರ್ಷದ ಹಿಂದೆ ತರೀಕೆರೆ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಬಂದ ಮಹಾಂತೇಶ್, ತರೀಕೆರೆ ಪಟ್ಟಣವನ್ನ ಸುಂದರ ಪಟ್ಟಣ ಮಾಡಬೇಕು ಎನ್ನುವ ಕನಸು ಕಂಡು ನಗರದ ರೂಪವನ್ನೇ ಬದಲಿಸಿದ್ದಾರೆ. ಇವರ ಧನಾತ್ಮಕ ಚಿಂತನೆಗೆ ಬೆಂಬಲ ನೀಡಿದ್ದು ಪುರಸಭೆ ಇಂಜಿನಿಯರ್, ಪೌರಕಾರ್ಮಿಕರು.

  • Share this:

ಚಿಕ್ಕಮಗಳೂರು(ಮಾ.08): ಸಾರ್ವಜನಿಕ ಶೌಚಾಲಯಗಳೆಂದರೆ ಯಾವಾಗಲೂ ಗಲೀಜಿನಿಂದ ಕೂಡಿರುತ್ತೆ ಎಂದು ಮೂಗು ಮುರಿಯುವವರೇ ಹೆಚ್ಚು. ಆದ್ರೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಶೌಚಾಲಯಗಳು ಮಾತ್ರ ಇದಕ್ಕೆ ತದ್ವಿರುದ್ಧ. ಯಾಕೆಂದರೆ, ತರೀಕೆರೆ ಪಟ್ಟಣದ ಈ ಶೌಚಾಲಯಗಳಿಗೀಗ ಹೊಸ ರೂಪ ಬಂದಿದೆ. ಒಂದಕ್ಕಿಂತ ಒಂದು ಟಾಯ್ಲೆಟ್‍ಗಳು ಬ್ಯೂಟಿಫುಲ್ ಅಂಡ್ ಕಲರ್​ಫುಲ್​ ಆಗಿವೆ. ಬಣ್ಣ-ಬಣ್ಣದ ಚಿತ್ತಾರದಿಂದ ಕಂಗೊಳಿಸುತ್ತಿದೆ. ಸಾಮಾನ್ಯವಾಗಿ, ​ ಟಾಯ್ಲೆಟ್‍ಗಳಂದ್ರೆ ಜನ ಬೆಚ್ಚಿ ಬೀಳ್ತಾರೆ. ಅದರಲ್ಲೂ ಪಬ್ಲಿಕ್ ಟಾಯ್ಲೆಟ್ ಅಂದ್ರೆ ತಲೆ ತಿರುಗಿ ಬೀಳುವಂತಾಡ್ತಾರೆ. ಆದ್ರೆ, ಇಲ್ಲಿರುವ ಟಾಯ್ಲೆಟ್‍ಗಳನ್ನ ನೋಡಿದ್ರೆ ಗಾಬರಿಯಾಗೋದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಸ್ವಚ್ಚತೆ ಕಾಪಾಡಲಾಗಿದೆ. ಸ್ವಚ್ಛತೆ ಮಾತ್ರವಲ್ಲ. ಟಾಯ್ಲೆಟ್‍ಗಳ ಗೋಡೆ ಮೇಲೆ ಅಂದ-ಚೆಂದದ ಕಲಾಕೃತಿಗಳು ಮೂಡಿವೆ.


ಪಟ್ಟಣದಲ್ಲಿರೋ ಒಟ್ಟು 11 ಸಾರ್ವಜನಿಕ ಶೌಚಾಯಲಯಗಳಿಗೂ ಹೊಸ ರೂಪ ಕೊಟ್ಟಿರೋದು ತರೀಕೆರೆ ಹೆಮ್ಮೆ. ಈ ಟಾಯ್ಲೆಟ್‍ಗಳನ್ನ ಯಾರೇ ಉಪಯೋಗಿಸಿದರೂ ಒಂದಿಷ್ಟು ಬೇಸರಗೊಳ್ಳದೆ ಖುಷಿಯಿಂದ ಹೊರಬರ್ತಾರೆ. ನಗರದ ಜನ ನಮ್ಮೂರ ಶೌಚಾಲಯಗಳು ದೇವಾಲಯದಂತೆ ಬದಲಾಗಿದೆ ಅಂತ ಸಂತಸಗೊಂಡಿದ್ದಾರೆ. ಅಷ್ಟಕ್ಕೂ ತರೀಕೆರೆ ಪಟ್ಟಣದ ಟಾಯ್ಲೆಟ್‍ಗಳು ಆರಂಭದಲ್ಲಿ ಎಲ್ಲಾ ಶೌಚಾಲಯಗಳಂತೇ ಇದ್ದವು. ಜನ ಈ ಟಾಯ್ಲೆಟ್‍ಗಳನ್ನ ಬಳಸುವಾಗ ಮೂಗು ಮುಚ್ಚಿಕೊಂಡೇ ಹೋಗಿ ಬರ್ತಿದ್ರು.


Andhra Pradesh: ಅಪರೂಪದ ಘಟನೆ: ಕೃಷ್ಣಾ ಜಿಲ್ಲೆಯಲ್ಲಿ ಮೂರು ಕಾಲಿನ ಹೆಣ್ಣು ಮಗು ಜನನ...!


ಆದ್ರೆ, ಕಳೆದೊಂದು ವರ್ಷದ ಹಿಂದೆ ತರೀಕೆರೆ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಬಂದ ಮಹಾಂತೇಶ್, ತರೀಕೆರೆ ಪಟ್ಟಣವನ್ನ ಸುಂದರ ಪಟ್ಟಣ ಮಾಡಬೇಕು ಎನ್ನುವ ಕನಸು ಕಂಡು ನಗರದ ರೂಪವನ್ನೇ ಬದಲಿಸಿದ್ದಾರೆ. ಇವರ ಧನಾತ್ಮಕ ಚಿಂತನೆಗೆ ಬೆಂಬಲ ನೀಡಿದ್ದು ಪುರಸಭೆ ಇಂಜಿನಿಯರ್, ಪೌರಕಾರ್ಮಿಕರು. ಎಲ್ಲರ ಒಗ್ಗಟ್ಟಿನಿಂದ ಇಂದು ಪಬ್ಲಿಕ್ ಟಾಯ್ಲೆಟ್‍ಗಳು ಸ್ವಚ್ಚ ಹಾಗೂ ಸುಂದರವಾಗಿವೆ. ಜನರಿಗೆ  ಶೌಚಾಲಯಗಳ ಮೇಲಿದ್ದ ಕೀಳಿರಿಮೆ ಹೋಗಬೇಕೆಂದು ಶೌಚಾಲಯದಗಳ ಗೋಡೆಗಳ ಮೇಲೆ ಸುಂದರ ಕಲಾಕೃತಿಗಳನ್ನ ಬಿಡಿಸಲಾಗಿದೆ. ವಿಭಿನ್ನ ರೀತಿಯ ಗೋಡೆಬರಹಗಳಿಂದ ಕಂಗೊಳಿಸುತ್ತಿರೋ ಪಬ್ಲಿಕ್ ಟಾಯ್ಲೆಟ್‍ಗಳ ಗೋಡೆಗಳ ಬಳಿ ಜನ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗೋದು ಇಲ್ಲಿ ಸಾಮಾನ್ಯವಾಗಿದೆ.


ಒಟ್ಟಾರೆ, ಎಲ್ಲರ ಶ್ರಮದ ಫಲ ಕೇಂದ್ರ ಸರ್ಕಾರ ತರೀಕೆರೆ ಪುರಸಭೆಗೆ ರಾಜ್ಯದಲ್ಲೇ ಸ್ವಚ್ಛ ಪುರಸಭೆ ಅಂತಾ ಒಡಿಎಫ್ ಪ್ಲಸ್ ಸರ್ಟಿಫಿಕೇಟ್ ನೀಡಿ ಗೌರವಿಸಿದೆ. ಹಗಲಿರುಳೆನ್ನದೆ ಪೌರಕಾರ್ಮಿಕರು ಪಟ್ಟಣವನ್ನ ಸ್ವಚ್ಛವಾಗಿಡಲು ದುಡಿಯುತ್ತಿರೋದು ನಗರದ ಸ್ವಚ್ಛತೆಗೆ ಮತ್ತೊಂದು ಕಾರಣ. ಪ್ರಧಾನಿಯವರ ಸ್ವಚ್ಚ ಭಾರತದ ಕನಸನ್ನ ನನಸು ಮಾಡಲು ಇಲ್ಲಿನ ಅಧಿಕಾರಿ ವರ್ಗದ ಜೊತೆ ಪೌರಕಾರ್ಮಿಕರು ಟೊಂಕಕಟ್ಟಿ ನಿಂತಿರೋದು ಶ್ಲಾಘನೀಯ. ಅದೇನೆ ಇರ್ಲಿ, ಪಬ್ಲಿಕ್ ಟಾಯ್ಲೆಟ್ ಅಂದ್ರೆ ಜನ ಮೂಗು ಮುರಿಯೋ ಕಾಲದಲ್ಲಿ ತರೀಕೆರೆಯ ಶೌಚಾಲಯಗಳು ಮಾತ್ರ ಆ ಸಾಲಿಗೆ ಸೇರದೆ ರಾಜ್ಯಕ್ಕೆ ಮಾದರಿಯಾಗಿವೆ.

Published by:Latha CG
First published: