HOME » NEWS » State » CHIKKAMAGALURU PEOPLE OF TEN VILLAGES PROTEST AGAINST UNSCIENTIFIC TOLL GATE CONSTRUCTION VCTV LG

Chikmagalur: ಅವೈಜ್ಞಾನಿಕ ಟೋಲ್ ನಿರ್ಮಾಣ ಖಂಡಿಸಿ ಹತ್ತು ಗ್ರಾಮಗಳ ನೂರಾರು ಜನರಿಂದ ಹೋರಾಟ

ಇನ್ನು ನಮ್ಮ ಹೋರಾಟ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಲೆಕೆಡಿಸಿಕೊಂಡಿಲ್ಲ, ಇದು ಅವೈಜ್ಞಾನಿಕ ಟೋಲ್ ನಿರ್ಮಾಣವಾಗಿದೆ, ಇಲ್ಲಿ ಕೆರೆಗಳಿವೆ, ಇಲ್ಲಿ ಟೋಲ್ ನಿರ್ಮಾಣವಾದ್ರೆ  ತೊಂದರೆಯಾಗುತ್ತೆ ಅಂತಿದ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ.

news18-kannada
Updated:March 19, 2021, 11:08 AM IST
Chikmagalur: ಅವೈಜ್ಞಾನಿಕ ಟೋಲ್ ನಿರ್ಮಾಣ ಖಂಡಿಸಿ ಹತ್ತು ಗ್ರಾಮಗಳ ನೂರಾರು ಜನರಿಂದ ಹೋರಾಟ
ಟೋಲ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ
  • Share this:
ಚಿಕ್ಕಮಗಳೂರು(ಮಾ.19):  ಸಿಂಗಲ್ ಹೈವೇನಲ್ಲಿ ಅವೈಜ್ಞಾನಿಕ ಟೋಲ್ ನಿರ್ಮಾಣಕ್ಕೆ ಮುಂದಾದ ಸರ್ಕಾರದ ವಿರುದ್ಧ ಹತ್ತಾರು ಗ್ರಾಮಗಳ ಜನರು ಟೋಲ್ ನಿರ್ಮಾಣ ಮಾಡದಂತೆ ಪ್ರತಿಭಟನೆಗೆ ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಚಿಕ್ಕನವಂಗಲ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಬೀರೂರಿನಿಂದ ದಾವಣಗೆರೆಗೆ ಸಂಪರ್ಕ ಕಲ್ಪಿಸೋ ರಾಜ್ಯ ಹೆದ್ದಾರಿ 76ರ ರಸ್ತೆ ಹಾದು ಹೋಗಿದೆ. ಆದ್ರೆ ತುಂಬಾ ಕಿರಿದಾಗಿರೋ ಚಿಕ್ಕನವಂಗಲ ಗ್ರಾಮದಲ್ಲೇ ಟೋಲ್ ಗೇಟ್ ಮಾಡೋಕೆ ಅಧಿಕಾರಿಗಳು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಚಿಕ್ಕನವಂಗಲ ಜಂಕ್ಷನ್ ಸುತ್ತಮುತ್ತ ಇರೋ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತೆ. ಈ ಜಂಕ್ಷನ್ ನ ಎರಡು ಕಡೆಗಳಲ್ಲಿ ದೊಡ್ಡ ದೊಡ್ಡ ಕೆರೆಗಳಿವೆ. ಹಳ್ಳಿಗಳಿಗೆ ನೀರಿನ ಮೂಲವೇ ಈ ಕೆರೆಗಳು.

ಜನ-ಜಾನುವಾರುಗಳಿಗೆ ನೀರಿನ ಸೆಲೆಯಾಗಿರೋ ಕೆರಗಳನ್ನ ಉಳಿಸಿಕೊಳ್ಳಬೇಕು ಅಂತಾ ಅನ್ನದಾತರು ಪಣ ತೊಟ್ಟಿದ್ದಾರೆ. ಆದ್ರೆ ವಿಪರ್ಯಾಸ ಅಂದ್ರೆ ಇಲ್ಲೇ ಟೋಲ್ ಗೇಟ್ ಮಾಡ್ತೀವಿ ಅಂತಾ ಅಧಿಕಾರಿಗಳು, ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಟೋಲ್ ಗೇಟ್ ಮಾಡಿದ್ರೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಓಡಾಟ ನಡೆಸೋ ಈ ಜಾಗದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ.. ಅಲ್ಲದೇ ಕೆರೆಗಳಿಗೂ ಹಾನಿ ಉಂಟಾಗೋದ್ರಿಂದ ಯಾವ್ದೇ ಕಾರಣಕ್ಕೂ ಇಲ್ಲಿ ಟೋಲ್ ಮಾಡಬಾರದು ಅಂತಾ ರೈತರು ಹೋರಾಟಕ್ಕೆ ಇಳಿದಿದ್ದಾರೆ.

ಗ್ರಾಮ‌ ಪಂಚಾಯತ್ ಚುನಾವಣೆ ಬಹಿಷ್ಕಾರ; ತ್ಯಾಮಗೊಂಡ್ಲು ಜನತೆಯ ಮನವೊಲಿಸುವಲ್ಲಿ ವಿಫಲವಾದ ತಹಶೀಲ್ದಾರ್

ಅಷ್ಟಕ್ಕೂ ಅಧಿಕಾರಿಗಳು ಎಲ್ಲಿ ಟೋಲ್ ಮಾಡಬೇಕು ಅಂತಾ ಸರಿಯಾದ ರೀತಿಯಲ್ಲಿ ಸರ್ವೇ ಕೂಡ ನಡೆಸದೇ ಇರೋದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆಂದ್ರೆ ಟೋಲ್ ಮಾಡೋ ತುರ್ತಲ್ಲಿ ಇರೋ ಗುತ್ತಿಗೆದಾರರು ಎಲ್ಲಿಯಾದ್ರೂ ಒಂದು ಕಡೆ ಟೋಲ್ ಮಾಡಿದ್ರೆ ಸಾಕು ಅನ್ನೋ ಮನೋಭಾವನೆಯಲ್ಲಿ ಇದ್ದಾರೆ ಅನ್ನೋದು ರೈತರ ಮಾಡ್ತಿರೋ ಆರೋಪ. ಸಾಧಕ ಭಾಧಕಗಳ ಬಗ್ಗೆ ಯೋಚಿಸದೇ ಅಧಿಕಾರಿಗಳು ಟೋಲ್ ಕೆಲ್ಸ ಶುರು ಹಚ್ಚಿಕೊಂಡಿದ್ದಾರೆ ಅಂತಾ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಇನ್ನು ನಮ್ಮ ಹೋರಾಟ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಲೆಕೆಡಿಸಿಕೊಂಡಿಲ್ಲ, ಇದು ಅವೈಜ್ಞಾನಿಕ ಟೋಲ್ ನಿರ್ಮಾಣವಾಗಿದೆ, ಇಲ್ಲಿ ಕೆರೆಗಳಿವೆ, ಇಲ್ಲಿ ಟೋಲ್ ನಿರ್ಮಾಣವಾದ್ರೆ  ತೊಂದರೆಯಾಗುತ್ತೆ ಅಂತಿದ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ.

ಟೋಲ್ ಗೇಟ್ ಮಾಡೋಕೆ ನಮ್ಮ ಅಭ್ಯಂತರವಿಲ್ಲ. ಆದ್ರೆ, ಸೂಕ್ತ ಸ್ಥಳ ನೋಡಿ ಮಾಡಿ ಯಾರೂ ವಿರೋಧ ಮಾಡಲ್ಲ ಅಂತಾರೆ ರೈತರು. ಅದ್ರಲ್ಲೂ ಹನಿ ನೀರಿಗೂ ಪರದಾಟ ನಡೆಸೋ ಈ ವೇಳೆಯಲ್ಲಿ ಕೆರೆಗಳನ್ನ ಮುಚ್ಚಿಹಾಕಿ, ಸಾವಿರಾರು ಜನರು ಒಂದೆಡೆ ಸೇರೋ ಜಂಕ್ಷನ್ನಲ್ಲಿ ಗೇಟ್ ಮಾಡಿ ನಿತ್ಯ ಪರದಾಟ ನಡೆಸೋ ಪರಿಸ್ಥಿತಿಯನ್ನ ಸೃಷ್ಟಿಸಬೇಡಿ ಅನ್ನೋದು ರೈತರ ಒಕ್ಕೊರಲ ಮನವಿ.

ಇದನ್ನೆಲ್ಲಾ ನೋಡಿದ್ರೆ ಕನಿಷ್ಠ ರೈತರಿಗೆ ಇರೋ ಸಾಮಾನ್ಯ ಜ್ಞಾನ ನಮ್ಮ ಬುದ್ಧಿವಂತ ಅಧಿಕಾರಿಗಳಿಗೆ ಇಲ್ವಲ್ಲ ಅನ್ನೋ ಜಿಜ್ಞಾಸೆ ಕಾಡಾದೇ ಇರೋದು. ಇದೀಗ ಟೋಲ್ ವಿರುದ್ಧ ಹೋರಾಟಕ್ಕೆ ಇಳಿದಿರೋ ರೈತರು ಕಾಮಗಾರಿ ನಿಲ್ಲಿಸಲು ಆಗ್ರಹಿಸಿದ್ದಾರೆ. ಒಂದು ವೇಳೆ ಟೋಲ್ ಕಾಮಗಾರಿ ಮುಂದುವರಿಸಿದ್ರೆ, ನಾವು ಗಾಂಧಿ ಪೋಟೋದೆದುರು ಉಪವಾಸ ಸತ್ಯಾಗ್ರಹ ಮಾಡ್ತೀವಿ, ಮುಂದಿನ ಅನಾಹುತಕ್ಕೆ ನೀವೇ ಕಾರಣ ಅಂತಾ ಎಚ್ಚರಿಕೆ ನೀಡಿದ್ದಾರೆ.
Published by: Latha CG
First published: March 19, 2021, 11:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories