Chikkamagaluru: ಪ್ರತಿದಿನ ಹಳ್ಳ ದಾಟಿಯೇ ಬದುಕು ಸಾಗಿಸುತ್ತಿರುವ ಜನರು; ಮಳೆ ಕಡಿಮೆಯಾದರೂ ಕಣತಿ ಸಮೀಪದ ಐದಳ್ಳಿ ಜನರಿಗೆ ಸಿಕ್ಕಿಲ್ಲ ಮುಕ್ತಿ

ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿ ಮರದ ಟೊಂಗೆಗಳನ್ನ ಹಿಡಿದು ಬದುಕಿರೋದು ಉಂಟು.

ಹಳ್ಳ ದಾಟುತ್ತಿರುವ ಮಕ್ಕಳು

ಹಳ್ಳ ದಾಟುತ್ತಿರುವ ಮಕ್ಕಳು

  • Share this:
ಚಿಕ್ಕಮಗಳೂರು(ಮಾ.05): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಮಕ್ಕಳು ಶಾಲೆಗೆ ಹೋಗೋಕ್ಕಾಗ್ಲಿ, ಜನ ಕೆಲಸಕ್ಕೆ ಹೋಗೋಕ್ಕಾಗ್ಲಿ ಎಲ್ಲದಕ್ಕೂ  ಆನೆ ಬಿದ್ದ ಹಳ್ಳವನ್ನೇ ದಾಟಿ ಹೋಗಬೇಕು, ಮಳೆಗಾಲದಲ್ಲಂತು ಇವರ ಪರಿಸ್ಥಿತಿ ಹೇಳತೀರದು, ಏಳೆಂಟು ದಶಕಗಳಿಂದ ಇವ್ರು ಒಂದೇ ಒಂದು ಸೇತುವೆಗಾಗಿ ಜನನಾಯಕರು ಹಾಗೂ ಅಧಿಕಾರಿಗಳಿಗೆ ಬೇಡದ ರೀತಿ, ಮಾಡದ ಮನವಿ ಇಲ್ಲ, ಆದ್ರು ಯಾವೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೆಲೆಕೆಡಿಸಿಕೊಂಡಿಲ್ಲ, ಸರ್ಕಾರಕ್ಕೆ ಇಡೀಶಾಪ ಹಾಕ್ತಾ  ಇಲ್ಲಿನ ಜನರು ಬದುಕು ಸಾಗಿಸುತ್ತಿದ್ದಾರೆ.

ಇಂತಹಾ ದುರ್ಗಮ ಸ್ಥಿತಿಯಲ್ಲಿ ಏಳೆಂಟು ದಶಕಗಳಿಂದ ಬದುಕ್ತಿರೋ ಇವ್ರ ಬದುಕು ನಿಜಕ್ಕೂ ಯಶೋಗಾಥೆ. ಮೂಡಿಗೆರೆಯಲ್ಲಿ ವಾರ್ಷಿಕ ದಾಖಲೆ ಮಳೆ ಸುರಿಯುತ್ತೆ. ಮಳೆಗಾಲದಲ್ಲಂತು ಇವ್ರ ಸ್ಥಿತಿ ಕೇಳೋದೇ ಬೇಡ. ಮಳೆಗಾಲದಲ್ಲಿ ಮಕ್ಕಳು ತಿಂಗಳಗಟ್ಟಲೇ ಶಾಲೆಗೋಗದಂತಹಾ ಸ್ಥಿತಿ ಇಲ್ಲಿ ಇನ್ನೂ ಜೀವಂತ.

ಐದಳ್ಳಿ ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೆ ಸಂಪರ್ಕವಿದೆ. ಐದಳ್ಳಿ ಗ್ರಾಮದ ಸುಮಾರು 30-35 ಮನೆಗಳಿಗೆ ಕಣತಿ ಕೇವಲ ಅರ್ಧ-ಮುಕ್ಕಾಲು ಕಿ.ಮೀ. ಆಗುತ್ತೆ. ಆದ್ರೆ, ಐದಳ್ಳಿ ಜನ ಕಣತಿಗೆ ಬರಬೇಕಂದ್ರೆ ಐದಾರು ಕಿ.ಮೀ. ಸುತ್ತಿ ಬರಬೇಕು. ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದ್ರೆ ಅರ್ಧ ಕಿ.ಮೀನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಏಳು ದಶಕಗಳಿಂದ ಇವ್ರಿಗೆ ಸೇತುವೆ ನಿರ್ಮಿಸಿಕೊಡಲು ಅಧಿಕಾರಿಗಳು-ರಾಜಕಾರಣಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದಾರೆ.

Tsunami - ನ್ಯೂಜಿಲೆಂಡ್ ಬಳಿ ಮೂರು ಬಾರಿ ಪ್ರಬಲ ಭೂಕಂಪ; ಕಡಲತೀರಕ್ಕೆ ಅಪ್ಪಳಿಸಿದ ಸುನಾಮಿ

ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿ ಮರದ ಟೊಂಗೆಗಳನ್ನ ಹಿಡಿದು ಬದುಕಿರೋದು ಉಂಟು. ಈ ಗ್ರಾಮದಿಂದ ನಾಲ್ಕೈದು ಕಿ.ಮೀ. ಸುತ್ತಿಕೊಂಡು ಬರೋ ಮಾರ್ಗದಲ್ಲೂ ತೋಟದ ಮಾಲೀಕರು ಬೇಲಿ ಹಾಕುತ್ತಾರೆಂಬ ಆರೋಪವೂ ಇದೆ. ಆದ್ರೆ, ಸರ್ಕಾರ ಮಾತ್ರ ಏಳು ದಶಕಗಳಿಂದ ಈ ಬಡಜನರಿಗೆ ಒಂದು ಸೇತುವೆ ನಿರ್ಮಿಸಿ ಕೊಡದಿರೋದು ಮಾತ್ರ ದುರಂತ.

ಒಟ್ಟಾರೆ, ಗಾಂಧಿ ಕೊಡ್ಸಿದ್ ಸ್ವಾತಂತ್ರ್ಯ ಯಾರಿಗೆ, ಎಲ್ಲಿ, ಯಾವಾಗ್ ಸಿಕ್ತೋ ಗೊತ್ತಿಲ್ಲ. ಈ ಬಡಜನರಿಗಂತೂ ಸಿಕ್ಕಿಲ್ಲ. ಕೇಳೋಕ್ ಹೋದ್ರೆ ಕೊಡೋರು ಇಲ್ಲ. ಕೊಡ್ಸೋರೂ ಇಲ್ಲ. ಆ ಜಾಗದಲ್ಲಿ ಇವ್ರ ಜೀವನವನ್ನ ಪದಗಳಲ್ಲಿ ವರ್ಣಿಸೋಕು ಆಗೋಲ್ಲ. ಇವ್ರಿಗೆ ಬೇಡೋದು, ಮನವಿ ಮಾಡೋದು ಬಿಟ್ರೆ ಬೇರೇನೂ ಗೊತ್ತೂ ಇಲ್ಲ. ಇನ್ನಾದ್ರು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರ ಇತ್ತ ಗಮನ ಹರಿಸಿ ಈ ಬಡಜನರಿಗೆ ಒಂದು ಸಣ್ಣ ಸೇತುವೆ ನಿರ್ಮಿಸಿಕೊಟ್ಟರೇ ಈ ಜನ ಮನೆಯಲ್ಲಿ ಅವ್ರ ಫೋಟೋ ಇಟ್ಕೊಂಡು ಪೂಜೆ ಮಾಡ್ತಾರೆ.
Published by:Latha CG
First published: