ಚಿಕ್ಕಮಗಳೂರಿನಲ್ಲಿ ಫೆ. 28ರಿಂದ 3 ದಿನ ಕಾಲ ಜಿಲ್ಲಾ ಉತ್ಸವ; ಅಣಿಗೊಂಡಿವೆ ಜಲಕ್ರೀಡೆ, ಸಾಹಸ ಕ್ರೀಡೆಗಳು

ಫೆ.28, 29 ಹಾಗೂ ಮಾರ್ಚ್​ 1ರಂದು ಜಿಲ್ಲಾ ಉತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿದೆ. ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಹಬ್ಬದ ಕಳೆ ಮೂಡಿದೆ. 

news18-kannada
Updated:February 26, 2020, 5:26 PM IST
ಚಿಕ್ಕಮಗಳೂರಿನಲ್ಲಿ ಫೆ. 28ರಿಂದ 3 ದಿನ ಕಾಲ ಜಿಲ್ಲಾ ಉತ್ಸವ; ಅಣಿಗೊಂಡಿವೆ ಜಲಕ್ರೀಡೆ, ಸಾಹಸ ಕ್ರೀಡೆಗಳು
ಸಾಹಸ ಕ್ರೀಡೆ ಉದ್ಘಾಟಿಸಿದ ಸಚಿವ ಸಿಟಿ ರವಿ
  • Share this:
ಚಿಕ್ಕಮಗಳೂರು (ಫೆ.26): ಬೇಸಿಗೆ ಆರಂಭದ ಮೋಜಿನ ಜೊತೆ ಜಿಲ್ಲೆಯಲ್ಲಿ ಉತ್ಸವದ ಸಂಭ್ರಮ ಕಳೆಕಟ್ಟಿದೆ. 21 ವರ್ಷಗಳ ಬಳಿಕ ಜಿಲ್ಲಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಸಾಹಸಿ ಜಲಕ್ರೀಡೆಗಳು ನಡೆಯುತ್ತಿದ್ದು,  ಕಾಫಿನಾಡಿನ ಜನರು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ, ಫೆ. 28, 29 ಹಾಗೂ ಮಾರ್ಚ್​ 1ರಂದು ಜಿಲ್ಲಾ ಉತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿದೆ. ಹಲವು ವರ್ಷಗಳ ಬಳಿಕ ನಡೆಯುತ್ತಿರುವ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೇ ಹಬ್ಬದ ಕಳೆ ಮೂಡಿದೆ.ಉತ್ಸವಕ್ಕೆ ಮುನ್ನ ಜನರನ್ನು ಇನ್ನಷ್ಟು ಖುಷಿ ಪಡಿಸಿ, ಮೋಜು ಮಸ್ತಿಯಲ್ಲಿ ಸಮಯ ಕಳೆಯುವಂತೆ ಮಾಡಲು ಅನೇಕ ಸಾಹಸ ಕ್ರೀಡೆಗಳನ್ನು ನಡೆಸಲಾಗಿದೆ.  ನಗರದ ನಲ್ಲೂರು ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ನಡೀತಿದ್ದು, ಸಾಹಸಪ್ರಿಯರು ಇಲ್ಲೂ ಕೂಡ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸ್ಟ್ರೀಟ್ ಬೋಟಿಂಗ್, ಬನಾನಾ ಬೋಟ್ ರೈಡ್, ಸ್ಕೈಯಿಂಗ್​, ವಾಟರ್ ಜಾಬ್ರಿಂಗ್ ಸೇರಿದಂತೆ ಅನೇಕ ಜಲಕ್ರೀಡೆಗಳನ್ನು ಆಯೋಜಿಸಲಾಗಿದೆ.ಇತ್ತ ಜಲಸಾಹಸ ಕ್ರೀಡೆ ಜೊತೆ ಕುಸ್ತಿ ಅಖಾಡ ಕೂಡ ಸಿದ್ದವಾಗುತ್ತಿದ್ದು, ಜಟ್ಟಿಗಳು ಹಾಕುತ್ತಿರುವ ಪಟ್ಟು ನೋಡುಗರ ಬೆವರಿಳಿಸಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಕೂಡ ಎಲ್ಲಾ ಕ್ರೀಡೆಗಳಲ್ಲೂ ಭಾಗಿಯಾಗುವ ಮೂಲಕ ಜಿಲ್ಲೆಯ ಜನರಿಗೆ ಇನ್ನಷ್ಟು ಸ್ಪೂರ್ತಿ ನೀಡುತ್ತಿರುವುದು ವಿಶೇಷ.
First published: February 26, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading