Chikkamagaluru: ನ್ಯೂಸ್ 18 ವರದಿಯಿಂದ ಸಿಕ್ತು ಸೇತುವೆ ಭಾಗ್ಯ, ಬ್ರಿಡ್ಜ್ ನಿರ್ಮಾಣಕ್ಕೆ ಸಿಗ್ತು 90 ಲಕ್ಷ

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದ್ರು ಆ ಗ್ರಾಮಕ್ಕೆ ಓಡಾಡೋಕೆ ರಸ್ತೆ ಇರ್ಲಿಲ್ಲ. ಮೈದುಂಬಿ ಹರಿಯೋ ಹಳ್ಳವೇ ಅವರಿಗೆ ದಾರಿಯಾಗಿತ್ತು. ಅಗತ್ಯವಿದ್ರೆ ಹೊತ್ತಲ್ಲದ ಹೊತ್ತಲ್ಲೂ ಹಳ್ಳದಲ್ಲೇ ಸಾಗಬೇಕಿತ್ತು. 

ಸೇತುವೆ ನಿರ್ಮಾಣದ ಭರವಸೆ

ಸೇತುವೆ ನಿರ್ಮಾಣದ ಭರವಸೆ

  • Share this:
ಚಿಕ್ಕಮಗಳೂರು (ಮೇ 13) : ಸ್ವಾತಂತ್ರ್ಯ (Freedom) ಬಂದು ಏಳು ದಶಕಗಳೇ ಕಳೆದ್ರು ಆ ಗ್ರಾಮಕ್ಕೆ (Village) ಓಡಾಡೋಕೆ ರಸ್ತೆ ಇರ್ಲಿಲ್ಲ. ಮೈದುಂಬಿ ಹರಿಯೋ ಹಳ್ಳವೇ ಅವರಿಗೆ ದಾರಿಯಾಗಿತ್ತು. ಅಗತ್ಯವಿದ್ರೆ ಹೊತ್ತಲ್ಲದ ಹೊತ್ತಲ್ಲೂ ಹಳ್ಳದಲ್ಲೇ ಸಾಗಬೇಕಿತ್ತು. ಜನರ ಈ ಶತಮಾನದ (Century) ಸಮಸ್ಯೆ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತಾರವಾಗಿ ಸುದ್ದಿ ಮಾಡುತ್ತಿದ್ದಂತೆ ಇದೀಗ 90 ಲಕ್ಷದಲ್ಲಿ ಬಹೃತ್ ಸೇತುವೆ (Big Bridge) ನಿರ್ಮಾಣವಾಗುತ್ತಿದ್ದು ಆ ಹಳ್ಳಿಯ ಜನ ನ್ಯೂಸ್ 18 ಕನ್ನಡಕ್ಕೆ (News18 Kannada) ನಾವು ಋಣಿ ಎಂದಿದ್ದಾರೆ. 

ರಸ್ತೆ ಇಲ್ಲದೆ ಐದಳ್ಳಿ ಗ್ರಾಮದ ಜನರ ಪರದಾಟ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಜನರ ಗೋಳು ಹೇಳತೀರದಂತಿತ್ತು. ಹಳ್ಳ ದಾಟಿ ದುರ್ಗಾ, ಬೆಟ್ಟದಹಳ್ಳಿ, ಗಡಬನಹಳ್ಳಿ, ಐದಳ್ಳಿ ಸೇರಿದಂತೆ ಐದಾರು ಹಳ್ಳಿಗಳಿಗೆ ಓಡಾಡಬೇಕಿತ್ತು. 250ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಇವರಿಗೆ ಏಳೆಂಟು ದಶಕಗಳಿಂದ ಓಡಾಡೋದಕ್ಕೆ ರಸ್ತೆ ಇಲ್ಲದೆ ಹಳ್ಳದಲ್ಲೇ ಸಾಗುತ್ತಾ ಬದುಕು ಕಟ್ಟಿಕೊಂಡಿದ್ದರು. ದುಸ್ಥಿತಿ, ಯಾರೇ ಹುಟ್ಲಿ, ಯಾರೇ ಸಾಯ್ಲಿ. ಮಕ್ಕಳು ಶಾಲೆಗೆ ಹೋಗೋಕ್ಕಾಗ್ಲಿ, ಜನ ಕೆಲಸಕ್ಕೆ ಹೋಗೋಕ್ಕಾಗ್ಲಿ ಎಲ್ಲದಕ್ಕೂ ಈ ಹಳ್ಳವೇ ಗತಿಯಾಗಿತ್ತು.

ಸೇತುವೆ ನಿರ್ಮಿಸಿಕೊಡುವ ಭರವಸೆ

ಈ ನ್ಯೂಸ್ 18 ಕನ್ನಡ ಸುದ್ದಿ ಮಾಡುತ್ತಿದ್ದಂತೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ, ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು ಇನ್ನೆರಡು ತಿಂಗಳಲ್ಲಿ ಓಡಾಟಕ್ಕೆ ಮುಕ್ತವಾಗಲಿದೆ. ಆದ್ದರಿಂದ ಇಲ್ಲಿನ ಜನ ನ್ಯೂಸ್ 18 ಗೆ ನಾವು ಋಣಿ ಎಂದಿದ್ದಾರೆ. ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಬಹುಪಯೋಗಿ ಮಾರ್ಗ. ಐದಳ್ಳಿ ಗ್ರಾಮದಲ್ಲೂ ಸುಮಾರು 40 ಮನೆಗಳಿವೆ.

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ಮಳೆಯಲ್ಲಿ ಶಾಲೆಗೆ ಹೋಗ್ತಿರಲಿಲ್ಲ ಮಕ್ಕಳು

ಇವ್ರು ಕೇವಲ ಮುಕ್ಕಾಲು ಕಿ.ಮೀ. ದೂರದ ಕಣತಿಗೆ ಬರಬೇಕಂದ್ರೆ ಆರು ಕಿ.ಮೀ. ಸುತ್ತಿ ಬರಬೇಕು. ಇದೀಗ ಈ ಸೇತುವೆ  ನಿರ್ಮಾಣವಾಗೋದ್ರಿಂದ ಸುಮಾರು ಅರ್ಧ ಕಿ.ಮೀನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಂದ್ರೆ ಜೋಳಿಗೆ ಕಟ್ಕೊಂಡ್ ಹೊತ್ಕೊಂಡ್ ಹೋಗಬೇಕಿತ್ತು.

ವರದಿ ಪ್ರಸಾರ ಮಾಡಿ ನ್ಯೂಸ್​ 18ಗೆ ಅಭಿನಂದನೆ

ಹಳ್ಳ ದಾಟುವಾಗ ಯುವಕರು ಕೊಚ್ಚಿ ಹೋಗಿ ಈಜಿ ದಡ ಸೇರಿದ್ದು ಇದೆ. ಆದರೀಗ, ಈ ಗ್ರಾಮಗಳ ಏಳೆಂಟು ದಶಕಗಳಿಂದ ಕಾಡಿನ ಜನಗಳಂತೆ ಬದುಕಿದ್ದ ಇವ್ರಿಗೆ ಇದೀಗ, ಸೇತುವೆ ನಿರ್ಮಾಣವಾಗ್ತಿರೋದು ಖುಷಿ ತಂದಿದೆ. ಹಾಗಾಗಿ, ನ್ಯೂಸ್ 18 ಸುದ್ದಿಯಿಂದಲೇ ಇಂದು ಈ ಸೇತುವೆ ನಿರ್ಮಾಣವಾಗ್ತಿರೋದು ಎಂದು ನ್ಯೂಸ್ 18 ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸೇತುವೆ ನಿರ್ಮಾಣದ ಭರವಸೆ, ಜನ ಫುಲ್​ ಖುಷ್​

ಒಟ್ಟಾರೆ, ಏಳೆಂಟು ದಶಕಗಳಿಂದ ಅನಾಗರಿಕರಂತೆ ಬದುಕಿದ ಜನರ ನೋವಿಗೆ ಹೆಗಲಾದ ನ್ಯೂಸ್ 18 ಯ ವರದಿಯಿಂದ ಇಂದು ಹಳ್ಳಿಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಹಾಗಾಗಿ, ಇಲ್ಲಿನ ಜನರ ಮೊಗದಲ್ಲಿ ಮಂದಹಾಸ ಮೂಡಿದ್ದು, ಇಲ್ಲಿನ ಜನ ನ್ಯೂಸ್ 18 ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ನಾವು ಹತ್ತಾರು ವರ್ಷಗಳಿಂದ ಮನವಿ ಮಾಡ್ತಿದ್ವಿ. ಬೇಡಿದ್ವಿ. ಹೋರಾಡಿದ್ವಿ. ಆದರೆ, ಒಂದು ಸೇತುವೆ ನಿರ್ಮಿಸಿಕೊಟ್ಟಿರಲಿಲ್ಲ. ಆದರೆ, ನ್ಯೂಸ್ 18 ಯ ಒಂದು ವರದಿಯಿಂದ ನಮ್ಮ ಶತಮಾನದ ಬದುಕಿಗೆ ಮುಕ್ತಿ ಸಿಗುತ್ತಿದೆ ಎಂದು ಜನ ನಾವು ನ್ಯೂಸ್ 18 ಗೆ ಋಣಿ ಎಂದಿದ್ದಾರೆ.
Published by:Pavana HS
First published: