ಕಡೂರು ತಹಶೀಲ್ದಾರ್ ವಿರುದ್ಧ ಭೂ ಕಬಳಿಕೆ ಆರೋಪ; ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯರ ಒತ್ತಾಯ

ತಹಶೀಲ್ದಾರ್ ಉಮೇಶ್ ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ಕರ್ತವ್ಯಲೋಪ ಎಸಗಿದ್ದಾರೆಂದು ಕಂಡು ಬರುತ್ತಿದೆ ಎಂದು ವರದಿ ನೀಡಿದ್ದಾರೆ. ಆದರೆ, ಪ್ರಕರಣದಲ್ಲಿ ಬಲಿಯಾಗಿರೋದು ಮಾತ್ರ ಇಬ್ಬರು ರೆವಿನ್ಯೂ ಇನ್ಸ್​​ಪೆಕ್ಟರ್ ಹಾಗೂ ಓರ್ವ ಗ್ರಾಮ ಲೆಕ್ಕಾಧಿಕಾರಿ.

ಕಡೂರು

ಕಡೂರು

  • Share this:
ಚಿಕ್ಕಮಗಳೂರು(ಮಾ.03): ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಮ್ಮೆದೊಡ್ಡೆ ಗ್ರಾಮದಲ್ಲಿ ಕಡೂರು ತಹಶೀಲ್ದಾರ್ ಉಮೇಶ್ ತನ್ನ ಅಜ್ಜ-ಅಜ್ಜಿಗೆ ತಲಾ 4 ಎಕರೆ 38 ಗುಂಟೆ ಹಾಗೂ ಕಡೂರಿನ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಗಳಿಗೆ ಬೆಳ್ಳಿಗುತ್ತಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನ ಅಕ್ರಮವಾಗಿ ಮಾಡಿಕೊಟ್ಟಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಅಸಲಿಗೆ ತಹಶೀಲ್ದಾರ್ ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನವರು. ಪುರಸಭೆ ಮುಖ್ಯಾಧಿಕಾರಿ ತುಮಕೂರು ಜಿಲ್ಲೆಯವರು.ಅಲ್ಲಿಂದ ಬಂದಿರೋ ಅಧಿಕಾರಿಗಳು ಸಂಬಂಧಿಕರ ಹೆಸರಿಗೆ ಹೇಗೆ ಜಮೀನು ಮಾಡಿಕೊಟ್ಟರು? ಎಂಬ ಯಕ್ಷ ಪ್ರಶ್ನೆ ಸ್ಥಳೀಯರನ್ನ ಕಾಡ್ತಿದೆ. ವಿಷಯ ಹೊರಗೆ ಬರ್ತಿದ್ದಂತೆ ಸ್ಥಳಿಯರು ದಾಖಲೆ ಸಂಗ್ರಹ ಮಾಡುತ್ತಿದ್ದಂತೆ ಭೂಮಿ ಕೇಂದ್ರದ ಕಚೇರಿಯಲ್ಲಿ ದಾಖಲೆಗಳೇ ಡಿಲೀಟ್ ಆಗಿವೆ. ಇದಕ್ಕೆಲ್ಲಾ ತಹಶೀಲ್ದಾರವರೇ ಕಾರಣ. ಅಧಿಕಾರ ಬಳಸಿಕೊಂಡು ದಾಖಲೆ ಡಿಲೀಟ್ ಮಾಡಿಸಿದ್ದಾರೆ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆರೋಪಿಸಿದ್ದಾರೆ.

ಕಡೂರು ಪ್ರಸ್ತುತ ತಹಶೀಲ್ದಾರ್ ಉಮೇಶ್. ಆದ್ರೆ, ಇವ್ರು ತಹಶೀಲ್ದಾರ್ ಆಗಿ ಬಂದ ಮೇಲೆ, ನಿಯಮದ ಪ್ರಕಾರ, ಈ ಹಿಂದೆ ಕಡೂರಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದವರ ಲಾಗಿನ್ ಕ್ಲೋಸ್ ಮಾಡಿ, ಇವರ ಲಾಗಿನ್‍ನಲ್ಲಿ ಕೆಲಸ ಮಾಡಬೇಕು. . ಆದ್ರೆ, ಇವ್ರು ಹಳೇ ತಹಶೀಲ್ದಾರ್ ಐಡಿಯನ್ನ ಕ್ಲೋಸ್ ಮಾಡಿಲ್ಲ. ಬದಲಾಗಿ ಅದೇ ಐಡಿ ಯೂಸ್ ಮಾಡಿ ಸಾಗುವಳಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡು ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮರದಡಿ ಜೀವನ ಆರಂಭಿಸಿದ ಮಹಿಳೆ!

ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ. ಆದರೆ, ತನಿಖೆ ನಡೆಸಿರುವ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನಾಗರಾಜ್ ಪ್ರಾಥಮಿಕ ಹಂತದ ತನಿಖೆ ನಡೆಸಿ ತಾತ್ಕಾಲಿಕ ವರದಿ ನೀಡಿದ್ದಾರೆ. ಅದರಲ್ಲಿ ತಹಶೀಲ್ದಾರ್ ಉಮೇಶ್ ಮೇಲ್ನೋಟಕ್ಕೆ ಉದ್ದೇಶ ಪೂರ್ವಕವಾಗಿ ಕರ್ತವ್ಯಲೋಪ ಎಸಗಿದ್ದಾರೆಂದು ಕಂಡು ಬರುತ್ತಿದೆ ಎಂದು ವರದಿ ನೀಡಿದ್ದಾರೆ. ಆದರೆ, ಪ್ರಕರಣದಲ್ಲಿ ಬಲಿಯಾಗಿರೋದು ಮಾತ್ರ ಇಬ್ಬರು ರೆವಿನ್ಯೂ ಇನ್ಸ್​​ಪೆಕ್ಟರ್ ಹಾಗೂ ಓರ್ವ ಗ್ರಾಮ ಲೆಕ್ಕಾಧಿಕಾರಿ.

ಅಷ್ಟೆ ಅಲ್ಲದೆ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಎಮ್ಮೆದೊಡ್ಡಿ ಗ್ರಾಮದಲ್ಲಿ 30 ಎಕರೆ ಸರ್ಕಾರಿಗೆ ಬೇಲಿ ಹಾಕಿಕೊಂಡು ರೆಸಾರ್ಟ್ ರೀತಿ ಮಾಡಿದ್ದಾರೆ. ಆದರೆ, ಹೇಳೋರಿಲ್ಲ. ಕೇಳೋರಿಲ್ಲದಂತಾಗಿದೆ ಎಂದು ವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. 1994ನೇ ಇಸವಿಯ ಫಾರಂ 53 ಅಡಿ ಸ್ಥಳಿಯರು ಹಾಕಿದ ಅರ್ಜಿಯಲ್ಲಿ ತಹಶೀಲ್ದಾರ್ ಸಂಬಂಧಿಗಳ  ಹೆಸರೇ ಇಲ್ಲ. ಕೈಬರಹದಲ್ಲಿ ಹೆಸರನ್ನ ಸೇರಿಸಿದ್ದಾರೆಂದು ಆರೋಪಿಸಿರೋ ಸ್ಥಳೀಯರು, ಕೂಡಲೇ ತಹಶೀಲ್ದಾರ್ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕಂದಾಯ ಹಾಗೂ ಭೂಕಬಳಿಕೆ ಕಾಯ್ದೆ ತಹಶೀಲ್ದಾರ್ ಮೇಲೆ ಎಫ್.ಐ.ಆರ್. ದಾಖಲಿಸಬೇಕೆಂದು ಕಾಂಗ್ರೆಸ್ ಮುಖಂಡ ಬಿ.ಎಂ.ಸಂದೀಪ್ ಒತ್ತಾಯಿಸಿದ್ದಾರೆ.

ಒಟ್ಟಾರೆ, ಎಸಿಯವರ ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಕಡೂರು ತಹಶೀಲ್ದಾರ್ ತಪ್ಪು ಮಾಡಿದ್ದಾರೆ ಎಂದು ತನಿಖೆಯ ವರದಿ ನೀಡಿದ್ದಾರೆ.  ಈ ಮಧ್ಯೆ ತಹಶೀಲ್ದಾರ್​​ನ್ನು ಸಸ್ಪೆಂಡ್ ಮಾಡದಿರೋದ್ರಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಮತ್ತೆ ಸಾಕ್ಷಿಗಳನ್ನ ನಾಶ ಮಾಡ್ತಿದ್ದಾರೆಂಬ ಮಾತು ಕೇಳಿಬರ್ತಿವೆ. ಈ ಪ್ರಕರಣದ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಗೈಗೊಳ್ಳಬೇಕೆಂಬ ಸ್ಥಳೀಯರ ಒತ್ತಾಯವಾಗಿದೆ.
Published by:Latha CG
First published: