Chikkamagaluru: ಹಿಂದೂ ಮಹಾ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ; ಯುವಕರ ಜೊತೆ ಹೆಜ್ಜೆ ಹಾಕಿದ ಸಿ ಟಿ ರವಿ

ಕಾಫಿನಾಡಿನ ಪ್ರತಿಷ್ಠಿತ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಅದ್ಧೂರಿ‌ ನಡೆಸಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ.

ಗಣೇಶ ವಿಸರ್ಜನಾ ಮೆರವಣಿಗೆ

ಗಣೇಶ ವಿಸರ್ಜನಾ ಮೆರವಣಿಗೆ

  • Share this:
ಚಿಕ್ಕಮಗಳೂರು : ಕಾಫಿನಾಡಿನ ಪ್ರತಿಷ್ಠಿತ ಹಿಂದೂ ಮಹಾ ಗಣಪತಿಯ (Hindu Maha Ganapati Visarjana) ವಿಸರ್ಜನಾ ಮೆರವಣಿಗೆಯನ್ನು ಅದ್ಧೂರಿ‌ಯಾಗಿ ನಡೆಸಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಕಳೆದ 9 ವರ್ಷಗಳಿಂದ ಚಿಕ್ಕಮಗಳೂರು (Chikkamagaluru City) ನಗರದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪುಟಾಣಿ ಮಕ್ಕಳು (Children), ಯುವಕ, ಯುವತಿಯರು (Youth Dance) ಕುಣಿದು, ಕುಪ್ಪಳಿಸಿ ಗಣಪನಿಗೆ ಸಂಭ್ರಮದ ಬೀಳ್ಕೊಡುಗೆ ನೀಡಿದರು. ಮೆರವಣಿಗೆಯುದ್ದಕ್ಕೂ ಕಾಫಿನಾಡಿನ ಜನ ಗಣೇಶನಿಗೆ (Lord Ganesha) ವಿಶೇಷ ಪೂಜೆ, ಮಂಗಳಾರತಿ ಮಾಡಿಸಿ ಲಂಬೋದರನಿಗೆ ವಂದಿಸಿದರು.

ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿ ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಬಸವನಹಳ್ಳಿ ಕೆರೆ ತಲುಪಿತು.

ಅಲಂಕೃತ ಪ್ರಭಾವಳಿಯಲ್ಲಿ ವಿನಾಯಕ ವಿರಾಜಮಾನನಾಗುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದರು. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ, ಭಾವವನ್ನು ತುಂಬಿದರು.

Chikkamagaluru Hindu Maha Ganapati grand Visarjana vctv mrq
ಗಣೇಶ ವಿಸರ್ಜನಾ ಮೆರವಣಿಗೆ


ಮೆರವಣಿಗೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ

ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ವೀರ ಸಾವರ್ಕರ್  (Veer Savarkar Photo) ಅವರ ಆಕರ್ಷಕ ಭಾವಚಿತ್ರ ಗಮನ ಸೆಳೆಯಿತು. ನೂರಾರು ಭಕ್ತರು ಭಾವಚಿತ್ರದೊಂದಿಗೆ ಫೊಟೋ ತೆಗೆಸಿಕೊಂಡರು. ಮೆರವಣಿಗೆ ಮುಂಚೂಣಿಯಲ್ಲಿ ಸಾಗಿಬಂದ ಬೃಹತ್ ಹನುಮಂತನ ಸ್ತಬ್ಧ ಚಿತ್ರ ವಿಶೇಷವಾಗಿತ್ತು. ಅದರೊಂದಿಗೆ ವೀರಗಾಸೆ, ಡೊಳ್ಳು ತಂಡಗಳು ಮೆರವಣಿಗೆಗೆ ರಂಗು ತುಂಬಿದವು.

Chikkamagaluru Hindu Maha Ganapati grand Visarjana vctv mrq
ಗಣೇಶ ವಿಸರ್ಜನಾ ಮೆರವಣಿಗೆ


ದಾರಿಯುದ್ಧಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಮಂದಿ ಏಕ ಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯ ಆಕರ್ಷಕವಾಗಿತ್ತು. ಯುವತಿಯರ ಗುಂಪು ನೃತ್ಯ ಮಾಡಿ, ಕುಣಿದು ಕುಪ್ಪಳಿಸಿದರು. ಗಣಪತಿ ಬಪ್ಪ ಮೋರೆಯಾ, ವಿನಾಯಕನಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.ಇದನ್ನೂ ಓದಿ:  Student Missing: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ; ಕ್ಯಾಂಪಸ್ ಒಳಗೆ ಬಂದ ಬಾಲಕ ಮಿಸ್ಸಿಂಗ್

ಡಿಜೆಗೆ ಸ್ಟೆಪ್ ಹಾಕಿದ ಸಿ.ಟಿ.ರವಿ

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ (Chikkamagaluru MLA CT Ravi) ಅವರು ಯುವಕರೊಂದಿಗೆ ಸ್ಟೇಪ್ ಹಾಕಿದರು. ಬೆಂಗಳೂರಿನಿಂದ ಆಗಮಿಸಿದ ಸಿ.ಟಿ ರವಿ ಮೆರವಣಿಗೆಯಲ್ಲಿ ಭಾಗಿಯಾಗಿ ಯುವಕರೊಂದಿಗೆ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆದರು.

Chikkamagaluru Hindu Maha Ganapati grand Visarjana vctv mrq
ಗಣೇಶ ವಿಸರ್ಜನೆ


ಇದೇ ವೇಳೆಯಲ್ಲಿ ಯುವಕರು ಸಿ.ಟಿ.ರವಿ ಅವರನ್ನ ಹೊತ್ತು ಡ್ಯಾನ್ಸ್ ಮಾಡಿದ್ರು. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂದೂ ಗಣಪತಿ ಸಮಿತಿ ಸದಸ್ಯರ ಜೊತೆ ವಾದ್ಯಕ್ಕೆ ಹೆಜ್ಜೆ ಹಾಕಿದರು. ಇನ್ನು ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ ಸಿ‌.ಟಿ.ರವಿ ಕೂಡ ಡಿಜೆ ಸೌಂಡ್​​ಗೆ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು. ಯುವಕರೊಂದಿಗೆ ಸೇರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

Chikkamagaluru Hindu Maha Ganapati grand Visarjana vctv mrq
ಗಣೇಶ ವಿಸರ್ಜನಾ ಮೆರವಣಿಗೆ


ಮೆರವಣಿಗೆ ಮಾರ್ಗದಲ್ಲಿ ಪೊಲೀಸರ ಪಥಸಂಚಲನ

ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಇಕ್ಕೆಲಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಮುಂಜಾಗ್ರತೆಯಾಗಿ ಮಧ್ಯಾಹ್ನವೇ ಮೆರವಣಿಗೆ ಸಾಗಿಬರುವ ಬೀದಿಗಳಲ್ಲಿ ಪೊಲೀಸ್ ಪಥಸಂಚಲನ ನೆಡಸಲಾಗಿತ್ತು.

ಇದನ್ನೂ ಓದಿ:  BBMP Notice: ಮಳೆ ನಿಂತ ಬಳಿಕ ರೈನ್ ಬೋ ಲೇಔಟ್ ವಿಲ್ಲಾ ನಿವಾಸಿಗಳಿಗೆ ಶಾಕ್ ನೀಡಿದ ಬಿಬಿಎಂಪಿ

ಗಣೇಶ ವಿಸರ್ಜನೆ ವೇಳೆ ಯುವಕನ ಬರ್ಬರ ಹತ್ಯೆ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುಗಳಿಹಾಳ ಗ್ರಾಮದ ಅರ್ಜುನ್ ಗೌಡ ಪಾಟೀಲ್ (20) ಕೊಲೆಯಾದ ಯುವಕ.

Chikkamagaluru Hindu Maha Ganapati grand Visarjana vctv mrq
ಗಣೇಶ ವಿಸರ್ಜನಾ ಮೆರವಣಿಗೆ


ಗಣೇಶ ವಿಸರ್ಜನೆ ‌ವೇಳೆ ಎರಡು ಗುಂಪು ಮಧ್ಯೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ಚಾಕುವಿನಿಂದ ಇರಿದು ಅರ್ಜುನ್ ಗೌಡನನ್ನು ಕೊಲೆ ಮಾಡಲಾಗಿದೆ. ಅರ್ಜುನ್ ಗೌಡ ಕುಸಿದು ಬೀಳ್ತಿದ್ದಂತೆ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
Published by:Mahmadrafik K
First published: