HOME » NEWS » State » CHIKKAMAGALURU FARMER DEMOLISH CABBAGE CROP DUE TO NO PROPER PRICE IN MARKET VCTV LG

Chikmagaluru: ಎಲೆಕೋಸಿಗೆ ಸೂಕ್ತ ಬೆಲೆ ಸಿಗದ ಕಾರಣ ಟ್ರ್ಯಾಕ್ಟರ್​ನಿಂದ 2 ಎಕರೆ ಬೆಳೆ ನಾಶ ಮಾಡಿದ ರೈತ...!

ಚೀಲಕ್ಕೆ 30-40 ರೂಪಾಯಿ ಕೇಳ್ತಿರೋದು ರೈತರನ್ನ ಮತ್ತಷ್ಟು ಕಂಗೆಡಿಸಿದೆ. ಇದರಿಂದ ಬೇಸತ್ತ ರೈತ ಬಸವರಾಜು ಹೊಲದ ತುಂಬಾ ಟ್ರ್ಯಾಕ್ಟರ್ ಹೊಡಿಸಿ ಕೋಸಿನ ಬೆಳೆಯನ್ನ ಹೊಲಕ್ಕೆ ಗೊಬ್ಬರವಾಗಿಸಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬೆಳೆ ಬೆಳೆದ್ರು ಲಾಭ ಬರದ ಕಾರಣ ರೈತ ಸಮುದಾಯ ದಿಗ್ಭ್ರಾಂತರಾಗಿದೆ.

news18-kannada
Updated:March 24, 2021, 9:54 AM IST
Chikmagaluru: ಎಲೆಕೋಸಿಗೆ ಸೂಕ್ತ ಬೆಲೆ ಸಿಗದ ಕಾರಣ ಟ್ರ್ಯಾಕ್ಟರ್​ನಿಂದ 2 ಎಕರೆ ಬೆಳೆ ನಾಶ ಮಾಡಿದ ರೈತ...!
ಬೆಳೆ ನಾಶ ಮಾಡಿ ಕಂಗಾಲಾಗಿ ಕುಳಿತಿರುವ ರೈತ
  • Share this:
ಚಿಕ್ಕಮಗಳೂರು(ಮಾ.24) : ಸಾಲ-ಸೋಲ ಮಾಡಿ ಬೆಳೆದ ಬೆಳೆ ಬೆಲೆ ಇಲ್ಲದೆ ಕೈಕೊಡ್ತು ಅಂತ ಮನನೊಂದ ರೈತ ಎಲೆ ಕೋಸಿನ ಹೊಲಕ್ಕೆ ಟ್ರ್ಯಾಕ್ಟರ್ ಹೊಡೆಸಿರೋ ಮನಕಲಕುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ. ಹಿರೇಗೌಜ ಗ್ರಾಮದ ಬಸವರಾಜು ಎರಡು ಎಕರೆ ಹೊಲದಲ್ಲಿ ಕೋಸನ್ನ ಬೆಳೆದಿದ್ರು. ಕಳೆದೊಂದು ವರ್ಷದಲ್ಲಿ ಇದು ನಾಲ್ಕನೇ ಬೆಳೆ. ಲಾಕ್‍ಡೌನ್‍ನಲ್ಲೂ ಕೋಸನ್ನ ಬೆಳೆದಿದ್ರು. ಆದ್ರೆ, ನಾಲ್ಕು ಬೆಳೆಯಲ್ಲಿ ಯಾವ ಬೆಳೆಯೂ ಒಂದು ರೂಪಾಯಿ ಲಾಭ ತರಲಿಲ್ಲ. ನಷ್ಟವೇ ಹೆಚ್ಚು. ನಷ್ಟ ಅಂದ್ರೆ ಹಾಕಿದ ಹಣವೂ ಇಲ್ಲದಂತೆ. ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದ್ರು ಆಗ್ಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ.

ಹೊಲ ತುಂಬಾ ಒಳ್ಳೆ ಸೈಜಿನ ಕೋಸು ನಳನಳಿಸ್ತಿತ್ತು. ಆದರೆ, ಮಾರ್ಕೇಟ್ ಹೋಗಿ ರೇಟ್ ಕೇಳಿದ್ರೆ 10 ಕೆಜಿಗೆ ಚೀಲಕ್ಕೆ 30-40-50 ರೂಪಾಯಿ. ಇದರಿಂದ ಮನನೊಂದ ರೈತ ಸರ್ಕಾರ-ಮಧ್ಯವರ್ತಿಗಳ ಮೇಲಿನ ಸಿಟ್ಟನ್ನ ಹೀಗೆ ತೀರಿಸಿಕೊಂಡಿದ್ದಾರೆ.

ಭೂಮಿಯ ಸಮೀಪ ಹಾದು ಹೋದ 2001 FO32 ಅಪಾಯಕಾರಿ ಕ್ಷುದ್ರಗ್ರಹ : ತಪ್ಪಿದ ಭಾರೀ ಗಂಡಾಂತರ

ಇನ್ನೂ ಎರಡು ಎಕರೆ ಹೊಲದಲ್ಲಿ ಕೋಸನ್ನ ಬೆಳೆಯಲು ಸುಮಾರು 40-50 ಸಾವಿರ ಹಣವನ್ನ ಖರ್ಚು ಮಾಡಿದ್ದಾರೆ. ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ-ಸೋಲ ಮಾಡಿ ಬೆಳೆದ ಬೆಳೆ ಕೊಟ್ಟಿದ್ದು ಸಾಲದ ಭಯ. ಈ ಮಧ್ಯೆ ಗಗನ ಮುಟ್ಟಿರೊ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿತ್ತು. ಹೀಗಿದ್ರು, ಕೃಷಿ ಮೇಲಿನ ಪ್ರೀತಿಯಿಂದ ಬೆಳೆದ ಬೆಳೆ ಇಂದು ಕೃಷಿಯನ್ನ ಬೇಜಾರು ತರಿಸಿದೆ.

ಚೀಲಕ್ಕೆ 30-40 ರೂಪಾಯಿ ಕೇಳ್ತಿರೋದು ರೈತರನ್ನ ಮತ್ತಷ್ಟು ಕಂಗೆಡಿಸಿದೆ. ಇದರಿಂದ ಬೇಸತ್ತ ರೈತ ಬಸವರಾಜು ಹೊಲದ ತುಂಬಾ ಟ್ರ್ಯಾಕ್ಟರ್ ಹೊಡಿಸಿ ಕೋಸಿನ ಬೆಳೆಯನ್ನ ಹೊಲಕ್ಕೆ ಗೊಬ್ಬರವಾಗಿಸಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬೆಳೆ ಬೆಳೆದ್ರು ಲಾಭ ಬರದ ಕಾರಣ ರೈತ ಸಮುದಾಯ ದಿಗ್ಭ್ರಾಂತರಾಗಿದೆ. ಇದು ಕೇವಲ ಬಸವರಾಜು ಒಬ್ಬರ ಸಮಸ್ಯೆಯಲ್ಲ. ಜಿಲ್ಲೆಯ ಬಹುತೇಕ ಬೆಳೆಯ ಬಹುತೇಕ ರೈತರದ್ದು ಇದೇ ಸಮಸ್ಯೆ. ಬಹಳ ಜನ ಹೀಗೆ ಬೆಳೆಯನ್ನ ಹೊಲದಲ್ಲೇ ನಾಶ ಮಾಡಲು ಮುಂದಾಗಿದ್ದಾರೆ.

ಒಟ್ಟಾರೆ, ಮೂರ್ನಾಲ್ಕು ತಿಂಗಳು ನೀರಾಯಿಸಿ, ರಣಬಿಸಿಲಲ್ಲಿ ನೊಂದು-ಬೆಂದು ಬೆವರು ಸುರಿಸಿದ್ರು ಲಾಭವಲ್ಲ, ಹಾಕಿದ ಬಂಡವಾಳವೂ ಬರಲಿಲ್ಲ. ಹಾಕಿದ ಬಂಡವಾಳವಾದ್ರು ಸಿಕ್ಕಿದ್ರೆ ರೈತ ಸಮುದಾಯ ನಿಟ್ಟುಸಿರು ಬಿಡ್ತಿದ್ರು. ಆದ್ರೆ, ಈಗಿರೋ ರೇಟಿಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ತಾನೇ ಮಕ್ಕಳಂತೆ ಬೆಳೆಸಿದ ಕೋಸಿನ ಫಸಲಿಗೆ ಟ್ರ್ಯಾಕ್ಟರ್ ಹತ್ತಿಸಿ ಸಂಪೂರ್ಣ ನಾಶ ಮಾಡಿದ್ದಾರೆ.
ಸರ್ಕಾರ ಕೃಷಿ ಮಾರುಕಟ್ಟೆಗೆ ಹೊಸ-ಹೊಸ ಕಾನೂನುಗಳನ್ನ ತರೋ ಬದಲು, ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿದ್ರೆ ಬಡ ರೈತರು ಬದುಕಿಕೊಳ್ತಾರೆ ಅನ್ನೋದು ರೈತರ ಅಳಲು.
Published by: Latha CG
First published: March 24, 2021, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories