ಎಸ್​ಎಸ್​ಎಲ್​ಸಿ ಪರೀಕ್ಷೆ: ರಾಜ್ಯಕ್ಕೆ ಮೊದಲು ಬಂದ ಚಿಕ್ಕಮಗಳೂರು ರೈತರ ಮಗಳು

ತಂದೆ ತಾಯಿ ಸರ್ಕಾರಿ ನೌಕರಿಯಲ್ಲಿದ್ದರೂ, ಇವರದ್ದು ಸಾಧಾರಣ ಗ್ರಾಮೀಣ ರೈತಾಪಿ ಕುಂಟುಬ. ಇವರ ತಂದೆ ರೈತರು ಕೂಡ ಹೌದು. ತನ್ಮಯಿ ಇಷ್ಟು ಸಾಧನೆ ಮಾಡಿದ್ದಾಳೆ. ಪ್ರಯತ್ನಪಟ್ಟರೇ ಏನುಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಎಂದರು ಸಿಟಿ ರವಿ.

news18-kannada
Updated:August 11, 2020, 9:21 AM IST
ಎಸ್​ಎಸ್​ಎಲ್​ಸಿ ಪರೀಕ್ಷೆ: ರಾಜ್ಯಕ್ಕೆ ಮೊದಲು ಬಂದ ಚಿಕ್ಕಮಗಳೂರು ರೈತರ ಮಗಳು
ವಿದ್ಯಾರ್ಥಿ ಮನೆಗೆ ಭೇಟಿ ನೀಡಿದ್ದ ಸಚಿವ ಸಿಟಿ ರವಿ
  • Share this:
ಚಿಕ್ಕಮಗಳೂರು(ಆ.11): ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಾಫಿನಾಡಿನ ವಿದ್ಯಾರ್ಥಿನಿ ರಾಜ್ಯಕ್ಕೆ ಮೊದಲು ಬರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ವಿದ್ಯಾರ್ಥಿನಿ ಪಿ ತನ್ಮಯಿ 625ಕ್ಕೆ 625ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು, ಕುಟುಂಬಸ್ಥರಲ್ಲೂ ಹರ್ಷ ಮೂಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸಚಿವ ಸಿ.ಟಿ ರವಿ ನಗರದ ಇಂದಾವರದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. 

ವಿದ್ಯಾರ್ಥಿನಿ ಪಿ.ತನ್ಮಯಿ ಮಾತನಾಡಿ, 625ಕ್ಕೆ 625ಅಂಕ ಬಂದಿರುವುದು ತುಂಬಾ ಖುಷಿ ನೀಡಿದೆ. ಪ್ರತೀ ದಿನ 2 ಗಂಟೆಕಾಲ ಓದುತ್ತಿದ್ದೇ. ಪರೀಕ್ಷೆ ಸಮಯದಲ್ಲಿ ಇನ್ನಷ್ಟು ಹೆಚ್ಚಿನ ಸಮಯ ಓದಿದ್ದೆ. ಪಟ್ಟ ಶ್ರಮಕ್ಕೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ರು. ಇನ್ನು ನಾನು ಟೂಷನ್​ಗೆ ಹೋಗುತ್ತಿರಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆನ್​ಲೈನ್​ ಪಾಠ ನನಗೆ ಉಪಯೋಗವಾಯಿತು. ಶಾಲೆಯಲ್ಲಿ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಇದೆಲ್ಲವೂ ನನ್ನ ಸಾಧನೆಗೆ ಕಾರಣವಾಯ್ತು. ಮುಂದೇ ವೈದ್ಯೆ ಆಗಬೇಕೆಂಬ ಆಸೆ ಇದೆ ಎಂದರು.

ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಸಚಿವ ಸಿ ಟಿ ರವಿ

ಚಿಕ್ಕಮಗಳೂರು ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಪಿ.ತನ್ಮಯಿ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸಿ.ಟಿ ರವಿ ಇಂದಾವರದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಇದೇ ವೇಳೆ ಮಾತಾನಾಡಿದ ಅವರು ಪಿ.ತನ್ಮಯ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕಮಗಳೂರಿನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ನನಗೆ ನೆನಪಿಲ್ಲ. ಆದರೀಗ ಪಿ.ತನ್ಮಯಿ ಉತ್ತಮ ಸಾಧನೆ ಮಾಡಿದ್ದಾಳೆ ಎಂದರು.

ತಂದೆ ತಾಯಿ ಸರ್ಕಾರಿ ನೌಕರಿಯಲ್ಲಿದ್ದರೂ, ಇವರದ್ದು ಸಾಧಾರಣ ಗ್ರಾಮೀಣ ರೈತಾಪಿ ಕುಂಟುಬ. ಇವರ ತಂದೆ ರೈತರು ಕೂಡ ಹೌದು. ತನ್ಮಯಿ ಇಷ್ಟು ಸಾಧನೆ ಮಾಡಿದ್ದಾಳೆ. ಪ್ರಯತ್ನಪಟ್ಟರೇ ಏನುಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಎಂದರು ಸಿಟಿ ರವಿ.

ಛಲವಿದ್ದರೇ ಏನುಬೇಕಾದರೂ ಸಾಧಿಸಬಹುದು. ಯಾವುದು ಅಸಾಧ್ಯವಲ್ಲ. ಪಿ.ತನ್ಮಯಿ ಅವಳ ಸಾಧನೆ ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ. ಜೀವನದಲ್ಲಿ ಯಶಸ್ಸುಗಳಿಸಿ ಸಮಾಜಕ್ಕೆ, ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದರು.

ಜೀವನದಲ್ಲಿ ಯಶಸ್ಸು ಎಂಬುದು ಜಾರು ಬಂಡೆ ಇದ್ದಂತೆ ಏರುವುದು ಕಷ್ಟ ಜಾರುವುದು ಸುಲಭ, ಅಹಂಬೇಡ ಆತ್ಮವಿಶ್ವಾಸ ಹೆಚ್ಚಾಗಲಿ ಎಂದು ವಿದ್ಯಾರ್ಥಿನಿ ಶುಭಕೋರಿದ್ರು.ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಾಫಿನಾಡು ರಾಜ್ಯದಲ್ಲಿ 20ನೇ ಸ್ಥಾನ ಪಡೆದುಕೊಂಡಿದೆ. ಹಿಂದಿನ ವರ್ಷ 14ನೇ ಸ್ಥಾನದಲ್ಲಿದ್ದ ಜಿಲ್ಲೆ ಈಗ 20ನೇ ಸ್ಥಾನಕ್ಕೆ ಬಂದಿದೆ.

ಇದನ್ನೂ ಓದಿ: ‘ಎಸ್​ಎಸ್​ಎಲ್​​ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲು ಬರಲು ವಿದ್ಯಾರ್ಥಿಗಳೇ ಕಾರಣ‘ - ಡಿಸಿ ಆರ್​​. ಲತಾ

ಇನ್ನು, ಜಿಲ್ಲೆಯಲ್ಲಿ ಪಿ. ತನ್ಮಯಿ 625ಕ್ಕೆ 625, ಶರಣ್ಯ ಜೆವಿಎಸ್ ಶಾಲೆ 622, ಶ್ರೇಯಸ್ ಭಟ್ ಪೂರ್ಣಪ್ರಜ್ಞಾ ಶಾಲೆ 621, ಹರ್ಷ ಸೆಂಟ್ ಮೇರಿಸ್ ಶಾಲೆ 621, ಯಶಸ್ವಿನಿ ಸಿಟಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೊಕ್ಕೆ ತರೀಕೆರೆ 621, ಲಿಖಿತ್ ಟಿಎಸ್ ಸರ್ಕಾರಿ ಪ್ರೌಢಶಾಲೆ ಸೊಕ್ಕೆ 620, ರಕ್ಷೀತ್ ಜಿ.ಎಂ. ಕರ್ನಾಟಕ ಪಬ್ಲಿಕ್​​ ಸ್ಕೂಲ್ ಬೇಗಾರ್ ಶೃಂಗೇರಿ 619 ಅಂಕ ಪಡೆದುಕೊಂಡಿದ್ದಾರೆ.
Published by: Ganesh Nachikethu
First published: August 11, 2020, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading