• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Monsoon Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್; ಅಪಾಯದ ಗ್ರಾಮಗಳನ್ನು ಗುರುತಿಸಿದ ಜಿಲ್ಲಾಡಳಿತ

Monsoon Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್; ಅಪಾಯದ ಗ್ರಾಮಗಳನ್ನು ಗುರುತಿಸಿದ ಜಿಲ್ಲಾಡಳಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chikkamagaluru Rains: ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಿ 64 ಜೆಸಿಬಿ, 65 ಹಿಟಾಚಿ, 83 ಟ್ರ್ಯಾಕ್ಟರ್, 155 ಟಿಪ್ಪರ್​​ಗಳನ್ನ ಪ್ರವಾಹವನ್ನ ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ.

  • News18 Kannada
  • 3-MIN READ
  • Last Updated :
  • Chikmagalur, India
  • Share this:

ಚಿಕ್ಕಮಗಳೂರು: ಮುಂಗಾರು ಮಳೆ (Monsoon Rain) ಅಬ್ಬರದ ಮುನ್ಸೂಚನೆ ಇರೋದ್ರಿಂದ ಕಾಫಿನಾಡ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಫಿನಾಡಲ್ಲಿ ಮಳೆ (Chikkamagaluru Rain) ಅಬ್ಬರ ಹೇಳತೀರದ್ದಾಗಿತ್ತು. ಶತಮಾನಗಳ ಬದುಕು ಕಣ್ಣೆದುರೇ ಕೊಚ್ಚಿ ಹೋಗಿತ್ತು. ಜೀವ ಹಾನಿಯೂ ಸಂಭವಿಸಿತ್ತು. ಹಾಗಾಗಿ ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ. ಮುಂಜಾಗ್ರತ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನ ಗುರುತಿಸಲಾಗಿದೆ. 47 ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿದೆ.


ಎನ್.ಆರ್.ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನ ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ.


ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಿ 64 ಜೆಸಿಬಿ, 65 ಹಿಟಾಚಿ, 83 ಟ್ರ್ಯಾಕ್ಟರ್, 155 ಟಿಪ್ಪರ್‍ಗಳನ್ನ ಪ್ರವಾಹವನ್ನ ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ.


ಜೊತೆಗೆ, ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನ ನಿಯೋಜಿಸಿದೆ.


108 ಅಪಾಯ ಸ್ಥಳಗಳೆಂದು ಗುರುತು


ಮಳೆಯ ಪ್ರಮಾಣ ಹೇಗಿರುತ್ತೋ ಎಂಬ ಕಾರಣದಿಂದ ಜಿಲ್ಲಾಡಳಿತ 47 ಗ್ರಾಮ ಪಂಚಾಯಿತಿ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿ 108 ಸ್ಥಳಗಳನ್ನ ಅಪಾಯದ ಸ್ಥಳ ಎಂದು ಗುರುತಿಸಲಾಗಿದೆ. ಇದರ ಜೊತೆ ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾದ್ಯಂತ 40ಕ್ಕೂ ಹೆಚ್ಚು ಸುರಕ್ಷಿತ ಪ್ರದೇಶವನ್ನೂ ಐಡೆಂಟಿಫೈ ಮಾಡಿದೆ.


ಸಾಂದರ್ಭಿಕ ಚಿತ್ರ


ಪ್ರವಾಸಿ ಸ್ಥಳದಲ್ಲಿ ಎಚ್ಚರಿಕೆಯ ಸೂಚನೆ


ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು-ಪ್ರವಾಸಿಗರು ಮೋಜು-ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು. ಹಾಗಾಗಿ, ಅಂತಹ ಜಾಗದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಹೆಚ್ಚಾಗಿ ಆಪಾಯದ ಮುನ್ಸೂಚನೆ ಸಿಕ್ಕರೆ ಕೂಡಲೇ ಜನಸಾಮಾನ್ಯರನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಆದೇಶಿಸಿದ್ದಾರೆ.


ಒಟ್ಟಾರೆ, ಕಳೆದ ಮೂರ್ನಾಲ್ಕು ವರ್ಷದ ಮಳೆ ಮಲೆನಾಡಿಗರ ಬದುಕನ್ನ ಮೂರಾಬಟ್ಟೆಯನ್ನಾಗಿಸಿತ್ತು. ಎಲ್ಲಾ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತನ್ನ ಮರೆತಿರೋದು ದುರಂತ.




ಮುಂಗಾರು ಆರಂಭಕ್ಕೂ ಮುನ್ನವೇ ಅಲರ್ಟ್


ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲಾ ಕಳೆದುಕೊಂಡು ಮೇಲೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಜೀವ ಉಳಿಸಿಕೊಂಡು ಉಪಯೋಗವೇನು ಎಂಬ ಪ್ರಶ್ನೆ ಮಲೆನಾಡಿಗರದ್ದು.


ಇದನ್ನೂ ಓದಿ:  Bengaluru Traffic: ಸಚಿವರ ಪ್ರಮಾಣ ವಚನ; ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್!

top videos


    ಹಾಗಾಗಿ, ಸರ್ಕಾರ ಪ್ರವಾಹದಿಂದ ಜನರನ್ನ ರಕ್ಷಣೆ ಮಾಡುವುದರ ಜೊತೆ ಎಲ್ಲಾ ಕಳೆದುಕೊಂಡವರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ನೀಡಲಿ ಅನ್ನೋದು ಜನರ ಆಗ್ರಹವಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು