Chikkamagaluru Rains: ಭಾರೀ ಮಳೆ, 391 ಕೋಟಿ ರೂ ನಷ್ಟ; ಜಿಲ್ಲಾಡಳಿತದಿಂದ ಸರ್ಕಾರ ವರದಿ ಸಲ್ಲಿಕೆ; ಪರಿಹಾರ ಯಾವಾಗ?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ ಅರ್ಧಕರ್ಧ ದಿನ ಮಳೆ ಬಂದಿಲ್ಲ. ಆದರೆ, ಅನಾಹುತಗಳು ಮಾತ್ರ ಭಯಂಕರ. ಕಾಫಿನಾಡಲ್ಲಿ 391 ಕೋಟಿಗೂ ಅಧಿಕ ನಷ್ಟವಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru Rains) ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ ಅರ್ಧಕರ್ಧ ದಿನ ಮಳೆ ಬಂದಿಲ್ಲ. ಆದರೆ, ಅನಾಹುತಗಳು (Rain Effect) ಮಾತ್ರ ಭಯಂಕರ. ಕಾಫಿನಾಡಲ್ಲಿ 391 ಕೋಟಿಗೂ ಅಧಿಕ ನಷ್ಟವಾಗಿದೆ. ಒಟ್ಟು 945 ಮನೆಗಳು ಹಾನಿಯಾಗಿವೆ. 71 ಮನೆ ಪೂರ್ಣ, 386 ಮನೆಗಳು ಭಾಗಶಃ, 468 ಮನೆಗಳಿಗೆ ಸಾಧಾರಣ ಹಾನಿಯಾಗಿದೆ. 9,815 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು (Crop Loss) ಮಣ್ಣುಪಾಲಾಗಿದೆ. ಈರುಳ್ಳಿ 3499 ಹೆಕ್ಟೇರ್, ಅಡಿಕೆ 353 ಹೆಕ್ಟೇರ್, ಆಲೂಗೆಡ್ಡ 870 ಹೆಕ್ಟೇರ್, ಕಡ್ಲೆಕಾಯಿ 277 ಹೆಕ್ಟೇರ್ ಸೇರಿದಂತೆ ಹತ್ತಾರು ಬೆಳೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಕಾಫಿನಾಡಿನ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಈ ವರ್ಷ ಸುರಿದ ಭಾರೀ ಮಳೆಯಿಂದ ಜನಜೀವನ ಅಲ್ಲೋಲ-ಕಲ್ಲೋಲವಾಗಿದೆ. ಸರ್ಕಾರ ಅನಾಹುತಗಳ ಪಟ್ಟಿ ಮಾಡಿದಷ್ಟೇ ವೇಗವಾಗಿ ದುರಸ್ತಿಯನ್ನೂ ಮಾಡಬೇಕಾಗಿದೆ.

ಮೂರು ತಿಂಗಳ ಮಳೆಗೆ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 512 ಕೊಠಡಿಗಳು ಹಾನಿಯಾಗಿವೆ. ಇಷ್ಟೇ ಅಲ್ಲದೆ, 329 ಕಿ.ಮೀ. ಸ್ಟೇಟ್ ಹೈವೇ ಹಾಳಾಗಿದೆ. 327 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಡ್ಯಾಮೇಜ್ ಆಗಿದೆ.

ಕತ್ತಲಲ್ಲಿ ಕುಗ್ರಾಮಗಳು

ಇನ್ನು 1278 ಕಿ.ಮೀ. ಗ್ರಾಮೀಣ ರಸ್ತೆ ಹಾಳಾಗಿದೆ. ಜಿಲ್ಲಾದ್ಯಂತ ಸುಮಾರು 91 ಸೇತುವೆಗಳಿಗೆ ಹಾನಿಯಾಗಿದೆ. ಮಳೆ-ಗಾಳಿ ಅಬ್ಬರಕ್ಕೆ 1910ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಸುಮಾರು 38 ಕಿ.ಮೀ.ನಷ್ಟು ಉದ್ದ ವಿದ್ಯುತ್ ತಂತಿಗಳು ನಾಶವಾಗಿದ್ದು ಕುಗ್ರಾಮಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಐದು ಟ್ರಾನ್ಸ್‍ಫರ್ಮರ್‍ಗಳು ನಾಶವಾಗಿವೆ.

Chikkamagaluru District Administration estimates rain-related losses at Rs 391 crore vctv mrq
ಬೆಳೆ ನಾಶ


ಜಿಲ್ಲಾದ್ಯಂತ 391.57 ಕೋಟಿಯಷ್ಟು ನಷ್ಟ

ಮಳೆ ಹಾಗೂ ಕೆರೆ-ಕಟ್ಟೆಗಳು ಕೋಡಿ ಬಿದ್ದು ನೀರು ನುಗ್ಗಿದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಚಾನಲ್‍ಗಳಿಗೆ ಹಾನಿಯಾಗಿದೆ. ಮಳೆಯಿಂದ ಜಿಲ್ಲಾದ್ಯಂತ 6 ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಕಾಫಿನಾಡಿನ ಈ ವರ್ಷದ ಮಳೆ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಮೂರು ತಿಂಗಳ ಮಳೆ ಅಬ್ಬರಕ್ಕೆ ಜಿಲ್ಲಾದ್ಯಂತ 391.57 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಇದನ್ನೂ ಓದಿ:  KPTCL Exam Scam: ಪರೀಕ್ಷಾ ಅಕ್ರಮದ ತನಿಖೆ ಚುರುಕು; ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದ ಅಭ್ಯರ್ಥಿ ಅರೆಸ್ಟ್

Chikkamagaluru District Administration estimates rain-related losses at Rs 391 crore vctv mrq
ಬೆಳೆ ನಾಶ


ಪರಿಹಾರ ಯಾವಾಗ?

ಒಟ್ಟಾರೆ, ಜಿಲ್ಲಾಡಳಿತ ಅನಾಹುತಗಳ ಪಟ್ಟಿಯನ್ನೇನೋ ಚೆನ್ನಾಗಿ ಸಿದ್ದಪಡಿಸಿದೆ. ಆದರೆ, ಅದಕ್ಕೆ ಪರಿಹಾರ ಯಾವಾಗ. ಕಳೆದ ನಾಳ್ಕೈದು ವರ್ಷಗಳಿಂದಲೂ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ. ಸಾಕಷ್ಟು ಅನಾಹುತ-ಅವಘಡಗಳು ಸಂಭವಿಸಿವೆ. ಆದರೆ, ಅವುಗಳಿಗೆಲ್ಲಾ ಸಮರ್ಪಕ ಹಾಗೂ ಸೂಕ್ತವಾದ ಪರಿಹಾರ ಇನ್ನೂ ಬಂದಿಲ್ಲ.

ಜಿಲ್ಲಾಡಳಿತ ಈ ವರದಿ ಜನರ ಸಮಾಧಾನಕ್ಕೋ ಅಥವಾ ಸರ್ಕಾರದ ದಾಖಲೆಗಳಿಗೋ ಗೊತ್ತಿಲ್ಲ. ಹಿಂದಿನದ್ದು ನೋಡಿದರೆ ಪರಿಹಾರ ಸಿಗುತ್ತಾ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ, ಈ ಬಾರಿ ಹಾಗಾಗದಿರಲಿ ಅನ್ನೋದು ಜಿಲ್ಲೆಯ ಜನರ ಆಶಯ.

ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದು ಯುವತಿ ಸಾವು

ಬೀದರ್​ ಜಿಲ್ಲೆಯಲ್ಲಿ ದಾಖಲೆಯ ಮಳೆ

ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್  (Bidar Rains) ಜಿಲ್ಲೆಯಲ್ಲಿ ಮನೆಗಳು ಕುಸಿದಿದ್ದು ಜನರನ್ನ ಬೀದಿಪಾಲು ಮಾಡಿದೆ. ಇನ್ನೂ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ತಾಲೂಕಿನ ಚಿಕ್ಕಪೇಟ್ ಗ್ರಾಮದಲ್ಲಿನ ಐದಾರು ಮನೆಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮವಾಗಿ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಿಂದ ಹಾಳಾಗಿದ್ದು ಬದುಕು ಬೀದಿಗೆ ಬಿದ್ದಿದ್ದು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪ್ರವಾಹ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಒಳನಾಡಿನಲ್ಲಿ ಮಳೆ

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾರೆ. ಕಲಬುರಗಿ, ಬೀದರ್, ಗದಗ, ಕೊಪ್ಪಳ, ಯಾದಗಿರಿ ಭಾಗಗಳಲ್ಲಿ ದಾಖಲೆಯ ಮಳೆಗೆ (Heavy Rainfall) ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನುಳಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದೆ.
Published by:Mahmadrafik K
First published: