HOME » NEWS » State » CHIKKAMAGALURU 9 YEAR OLD GIRL MADE A WORLD RECORD IN BHARATANATYAM

9ನೇ ವಯಸ್ಸಿಗೆ ಭರತನಾಟ್ಯದಲ್ಲಿ ದಾಖಲೆ ಬರೆದ ಮಲೆನಾಡಿ ಪೋರಿ

ಕೇವಲ 9 ವರ್ಷದ ಈ ಪೋರಿ ಈಗಾಗಲೇ 115 ಪ್ರದರ್ಶನ ನೀಡಿದ್ದಾಳೆ. ಅಲ್ಲದೇ, ಕರ್ನಾಟಕ ಅಚೀವರ್ಸ್ ಪ್ರಶಸ್ತಿ  ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

news18-kannada
Updated:February 7, 2020, 3:06 PM IST
9ನೇ ವಯಸ್ಸಿಗೆ ಭರತನಾಟ್ಯದಲ್ಲಿ ದಾಖಲೆ ಬರೆದ ಮಲೆನಾಡಿ ಪೋರಿ
ಸಾಧನೆ ಮಾಡಿದ ಬಾಲಕಿ ವೇದಶ್ರೀ
  • Share this:
ಚಿಕ್ಕಮಗಳೂರು (ಫೆ.07): ಆಟವಾಡುತ್ತ ಕಲಿಯುವ ವಯಸ್ಸಿನಲ್ಲಿ ಈ ಪೋರಿ ವಿಶ್ವದಾಖಲೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾಳೆ. ಮೂರ್ತಿ ಚಿಕ್ಕದಾದರೂ ಕೀರ್ತಿ ಅಪಾರ ಎಂಬಂತೆ ಇದೆ ಈಕೆಯ ಸಾಹಸ. 

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ 9 ವರ್ಷದ ವೇದಾಶ್ರೀ ಸಾಧನೆ ಮಾಡಿದ ಬಾಲಕಿ. ಭರತ ನಾಟ್ಯದ ಬಗ್ಗೆ ಹೆಚ್ಚು ಒಲವಿರುವ ಈಕೆ ಇದರಲ್ಲಿ ವಿಭಿನ್ನ ಪ್ರಯೋಗ ಮಾಡಿ ಹೆಸರು ಮಾಡಿದ್ದಾಳೆ.ಭರತನಾಟ್ಯದಲ್ಲಿ ಕೇವಲ ನೃತ್ಯಭಂಗಿ ಮಾಡದೇ ಮೂಲಕ ತಟ್ಟೆ ಮೇಲೆ ಕೂಡ ನಾಟ್ಯವಾಡಬಲ್ಲ ಮಯೂರಿ ಈಕೆ . ಜೊತೆಗೆ ಡ್ಯಾನ್ಸ್​ ಮಾಡುತ್ತಲೇ ಸೋಂಟಕ್ಕೆ ರಿಂಗ್​ ಹಾಕಿ ಸುತ್ತಿಸುವುದು, ಮೊಳೆ ಮೇಲೆ ಹೆಜ್ಜೆ ಹಾಕುವುದು ಈಕೆಗೆ ಕರಗತ.ಕೇವಲ 9 ವರ್ಷದ ಈ ಪೋರಿ ಈಗಾಗಲೇ 115 ಪ್ರದರ್ಶನ ನೀಡಿದ್ದಾಳೆ. ಅಲ್ಲದೇ, ಕರ್ನಾಟಕ ಅಚೀವರ್ಸ್ ಪ್ರಶಸ್ತಿ  ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

ಇದನ್ನು ಓದಿ: ಎಸಿಬಿ ದಾಳಿ, ಲೋಕಾಯುಕ್ತ ಪ್ರಕರಣವಿದ್ದರೂ ಭಯವಿಲ್ಲ ಚಿಕ್ಕಮಗಳೂರಿನ ಈ 41 ಅಧಿಕಾರಿಗಳಿಗೆಕೇವಲ ನಾಟ್ಯದಲ್ಲಿ ಮಾತ್ರವಲ್ಲದೆ ಓದಿನಲ್ಲಿ ಕೂಡ ಚುರುಕಾಗಿರುವ ಈಕೆಗೆ ಪೋಷಕರು ಹಾಗೂ ಶಾಲೆಯ ಶಿಕ್ಷಕರು ಬೆಂಬಲವಾಗಿ ನಿಂತಿದ್ದಾರೆ.  ಅತಿ ಚಿಕ್ಕ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿದ ಈಕೆಗೆ ಅಭಿನಂದನೆ ಸುರಿಮಳೆ ಕೂಡ ಸುರಿದಿದೆ.
Youtube Video
First published: February 7, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories