ಚಿಕ್ಕಮಗಳೂರು ಆ್ಯಸಿಡ್​ ದಾಳಿ ಪ್ರಕರಣ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ; ಕಡೆಗೂ ನನಗೆ ನ್ಯಾಯ ಸಿಕ್ಕಿತು ಎಂದ ಸಂತ್ರಸ್ತೆ

ಆರು ವರ್ಷದ ತಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ನನಗಾದಂತೆ ಬೇರೆ ಯಾವ ಹೆಣ್ಣು ಮಗಳಿಗೂ ಆಗಬಾರದು ಎಂದು ಸಂತ್ರಸ್ಥೆ ಕಣ್ಣೀರಿಟ್ಟಿದ್ದಾರೆ ಸಂತ್ರಸ್ತೆ

ನ್ಯಾಯಾಲಯ

ನ್ಯಾಯಾಲಯ

  • Share this:
ಚಿಕ್ಕಮಗಳೂರು (ಜು. 15) : ಜಿಲ್ಲೆಯ ಶೃಂಗೇರಿಯಲ್ಲಿ ಧರ್ಮಕ್ಷೇತ್ರ ಹೊರನಾಡಿನ ದಾರಿ ಕೇಳುವ ನೆಪದಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಲ್ವರು ಆರೋಪಿಗಳಿಗೆ ಚಿಕ್ಕಮಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಜೊತೆ ನಾಲ್ವರಿಗೂ ತಲಾ ಐದು ಲಕ್ಷದಂತೆ 20 ಲಕ್ಷ ಹಣವನ್ನ ದಂಡ ಹಾಕಿ ಆ ಹಣವನ್ನ ಸಂತ್ರಸ್ತೆಗೆ ನೀಡುವಂತೆ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ ತೀರ್ಪು ನೀಡಿದ್ದಾರೆ. ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆ ಆರು ವರ್ಷದ ತಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ನನಗಾದಂತೆ ಬೇರೆ ಯಾವ ಹೆಣ್ಣು ಮಗಳಿಗೂ ಆಗಬಾರದು ಎಂದು ಸಂತ್ರಸ್ಥೆ ಕಣ್ಣೀರಿಟ್ಟಿದ್ದು, ಪೊಲೀಸರು, ಕೋರ್ಟ್, ಸಂತ್ರಸ್ತೆ ಪರ ವಾದ ಮಂಡಿಸಿದ  ಮಮತ ಬಿ.ಎಸ್  ಹಾಗೂ ನ್ಯಾಯಾಧೀಶರಿಗೆ ಅಭಿನಂದನೆ ಸಲ್ಲಿಸಿದ್ದಾಳೆ

ಏನಿದು ಘಟನೆ? 

ಸುಮನಾ ಎಂಬ ಸಂತ್ರಸ್ತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಗಂಡನಿಂದ ದೂರಾಗಿದ್ದ ಆಕೆಗೆ ಅದೇ ಊರಿನ ಗಣೇಶ್​ ಎಂಬಾಂತ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಸುಮನಾ ನಿರಾಕರಿಸಿದ್ದಳು. ಇದೇ ಸಿಟ್ಟಿನಿಂದ ಗಣೇಶ್  2015ರ ಏಪ್ರಿಲ್ 18ರಂದು ಸ್ನೇಹಿತರಾದ ಮಹಮದ್ ಕಬೀರ್, ವಿನೋದ್ ಕುಮಾರ್ ಹಾಗೂ ಅಬ್ದುಲ್ ಮಜೀಜ್ ಜೊತೆಗೂಡಿ ಆಕೆ ಮೇಲೆ ಆಸಿಡ್ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಸುಮನಾ ಒಂದು ಕಣ್ಣು ಸಂಪೂರ್ಣ ದೃಷ್ಠಿ ಕಳೆದುಕೊಂಡಿದ್ದರು.  ಮತ್ತೊಂದು ಕಣ್ಣು ಶೇಕಡ 50 ರಷ್ಟು ಕಾಣದಂತಾಗಿತ್ತು.  ಇದರಿಂದ ಸುಮನಾ ಬದುಕಿನಲ್ಲಿ ಅಂದಕಾರವನ್ನು ಈ ದುಷ್ಟರು ತಂದರು. ಈ ಘಟನೆ ಬಳಿಕ ಧೃತಿ ಗೆಡದ ಸುಮನಾ ಬದುಕನ್ನ ಹಾಳು ಮಾಡಿದ ನಾಲ್ವರ ವಿರುದ್ಧ ಕಳೆದ ಆರು ವರ್ಷಗಳಿಂದ ಹೋರಾಡಿ ಇಂದು ಗೆದ್ದಿದ್ದಾಳೆ. ಕಳೆದ ಆರು ವರ್ಷಗಳಿಂದ ನಿರಂತರ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಚಿಕ್ಕಮಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಶಿಕ್ಷೆಯಾಗಿದೆ. ನಾಲ್ವರಿಗೂ ಜೀವಾವಧಿ ಶಿಕ್ಷೆ ಜೊತೆ ತಲಾ 5 ಲಕ್ಷದಂತೆ 20 ಲಕ್ಷ ಹಣವನ್ನ ದಂಡ ಹಾಕಿ, ಆ ಹಣವನ್ನ ಆಕೆಗೆ ನೀಡುವಂತೆ ಕೋರ್ಟ್ ಆದೇಶಿಸಿದೆ.

ಇದನ್ನು ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ‌ನೆಲಕಚ್ಚಿದ್ದ ಮತ್ಸ್ಯೋದ್ಯಮ; ಕಂಗಾಲಾದ ಮೀನುಗಾರರು
 
ನನಗೆ ನ್ಯಾಯ ಸಿಗುತ್ತೆ ಎಂದು ನಂಬಿಕೆ ಇತ್ತು. ಇಂದು ನ್ಯಾಯ ಸಿಕ್ಕಿದೆ. ಬೇರೆ ಯಾವ ಹೆಣ್ಣು ಮಕ್ಕಳಿಗೂ ಹೀಗಾಗಬಾರದು ಎಂದು ಸಂತ್ರಸ್ಥೆ ಸುಮನಾ ಕಣ್ಣೀರಿಟ್ಟಿದ್ದಾರೆ. ಈ ತೀರ್ಪು ನನಗೆ ಉಸಿರಾಡುವಂತೆ ಮಾಡಿದೆ. ಅಂದಿನಿಂದ ಈವರೆಗೆ ನಾನು ಬದುಕಿದ್ದು ಸತ್ತಂತೆ ಇದ್ದೆ. ಇಂದಿನ ತೀರ್ಪು ನನಗೆ ತೃಪ್ತಿ ತಂದಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ನನ್ನ ಜೀವನ ಬೆಂಕಿಗೆ ಹಾಕಿ ಸುಟ್ಟಂತೆ ಆಗಿದೆ.  ಈ ನೋವು  ಆ್ಯಸಿಡ್​ ಹಾಕಿದವರಿಗೂ ಗೊತ್ತಾಗಬೇಕು. ಪ್ರಕರಣದಲ್ಲಿ ಅಂದಿನ ತನಿಖಾಧಿಖಾರಿಯಾಗಿದ್ದ ಸುಧೀರ್ ಹೆಗ್ಡೆ ನನಗೆ ತುಂಬಾ ಸಹಕಾರ ನೀಡಿದ್ದಾರೆ. ಸರ್ಕಾರ ನನಗೊಂದು ಸರ್ಕಾರಿ ಕೆಲಸ ನೀಡಿದರೆ ಮಗನನ್ನ ಸಾಕಲು ಅನುಕೂಲವಾಗುತ್ತೆ ಎಂದು ನೋವು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟ ಆತಂಕ ಸೃಷ್ಟಿಸಿದ್ದ ಪ್ರಕರಣದ ತೀರ್ಪಿನಿಂದ ಕಾಫಿನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಗಳಿಗೆ ಅವರಿಗೆ ಯಾವ ಶಿಕ್ಷೆಯೂ ಕಡಿಮೆಯೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಆ ನಾಲ್ವರಿಗೂ ಜೀವಾವಧಿ ಶಿಕ್ಷೆ ನೀಡಿರೋದು ಸಮಾಧಾನ ತಂದಿದೆ.  ಮುಂದಿನ ದಿನಗಳಲ್ಲಿ ಯಾವ ಹೆಣ್ಣಿಗೂ ಈ ರೀತಿಯ ಪರಿಸ್ಥಿತಿ ಬಾರದಿರಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
Published by:Seema R
First published: