ಚಿಕ್ಕಬಳ್ಳಾಪುರ ಜೆಡಿಎಸ್​ ಅಭ್ಯರ್ಥಿ ಕೆಪಿ ಬಚ್ಚೇಗೌಡ ನಾಮಪತ್ರ ತಿರಸ್ಕಾರ

ತಮ್ಮ ನಾಮಪತ್ರ ತಿರಸ್ಕಾರಗೊಂಡ ಕುರಿತು ಪ್ರತಿಕ್ರಿಯಿಸಿದ ಅವರು , ಕಡೆಯ ಕ್ಷಣದಲ್ಲಿ ಕುಮಾರಸ್ವಾಮಿ ಅವರು  ಖಾಲಿ ಬಿ ಫಾರಂ ನನಗೆ ಕಳಿಸಿಕೊಟ್ಟಿದ್ದರು. ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ದವಿರಲಿಲ್ಲ. ಕಡೆಯ ಕ್ಷಣದಲ್ಲಿ ಅವರು ಬಿ ಫಾರಂ ನೀಡಿದ್ದರಿಂದ ನಾನು ನಾಮಪತ್ರ ಸಲ್ಲಿಸಿದೆ ಎಂದರು

Seema.R | news18-kannada
Updated:November 19, 2019, 5:05 PM IST
ಚಿಕ್ಕಬಳ್ಳಾಪುರ ಜೆಡಿಎಸ್​ ಅಭ್ಯರ್ಥಿ ಕೆಪಿ ಬಚ್ಚೇಗೌಡ ನಾಮಪತ್ರ ತಿರಸ್ಕಾರ
ಕೆಪಿ ಬಚ್ಚೇಗೌಡ
  • Share this:
ಚಿಕ್ಕಬಳ್ಳಾಪುರ (ನ.19): ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್​ನಿಂದ ನಾಮಪತ್ರ ಸಲ್ಲಿಸಿದ್ದ ಕೆಪಿ ಬಚ್ಚೇಗೌಡ ಅವರ ನಾಮಪತ್ರ ತಿರಸ್ಕಾರಗೊಂಡಿದೆ.  

ನಾಮಪತ್ರ ಸಲ್ಲಿಕೆಗೆ ಕಡೆಯದಿನವಾದ ನಿನ್ನೆ ಅವರು ಜೆಡಿಎಸ್​ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ನಾಮಪತ್ರ ಸಂಪೂರ್ಣ ಮಾಹಿತಿ ಒಳಗೊಂಡಿಲ್ಲ ಎಂದು ಇಂದು ನಾಮಪತ್ರ ಪರಿಶೀಲಿಸಿದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಇನ್ನು ಇವರ ಜೊತೆಗೆ ಜೆಡಿಎಸ್​ನಿಂದ ಮತ್ತೊಬ್ಬ ಅಭ್ಯರ್ಥಿಯಾಗಿ ರಾಧಾಕೃಷ್ಣ ನಾಮಪತ್ರ ಸಲ್ಲಿಸಿದ್ದರು, ಅವರ ನಾಮಪತ್ರ ಸರಿಯಾಗಿದ್ದು, ಅಂಗೀಕಾರವಾಗಿದೆ,

ಇನ್ನು ತಮ್ಮ ನಾಮಪತ್ರ ತಿರಸ್ಕಾರಗೊಂಡ ಕುರಿತು ಪ್ರತಿಕ್ರಿಯಿಸಿದ ಅವರು , ಕಡೆಯ ಕ್ಷಣದಲ್ಲಿ ಕುಮಾರಸ್ವಾಮಿ ಅವರು  ಖಾಲಿ ಬಿ ಫಾರಂ ನನಗೆ ಕಳಿಸಿಕೊಟ್ಟಿದ್ದರು. ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ದವಿರಲಿಲ್ಲ. ಕಡೆಯ ಕ್ಷಣದಲ್ಲಿ ಅವರು ಬಿ ಫಾರಂ ನೀಡಿದ್ದರಿಂದ ನಾನು ನಾಮಪತ್ರ ಸಲ್ಲಿಸಿದೆ ಎಂದರು.

ಇನ್ನು ನಾಮಪತ್ರ ಅಂಗೀಕಾರಗೊಂಡಿರುವ ರಾಧಕೃಷ್ಣ ಅವರಿಗೆ ನಾನೇ ನನ್ನ ಕೈಯಾರೆ ಬಿಫಾರಂ ನೀಡಿದ್ದೆ. ಅವರು ಗೆಲುವಿಗೆ ನಾವು ಹೋರಾಡುತ್ತೇವೆ. ನಮ್ಮಲ್ಲಿ ಯಾವುದೇ ಟಿಕೆಟ್​ ಗೊಂದಲ ಇಲ್ಲ, ನಾನು ನನ್ನ ಮನಸಾರೆ ಅವರ ಗೆಲುವಿಗೆ ಹೋರಾಡುತ್ತೇನೆ ಎಂದರು.

ಇದನ್ನು ಓದಿ: ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವ ಮಾತನ್ನು ಪುನರುಚ್ಚರಿಸಿದ ಬಸವರಾಜ್​ ಹೊರಟ್ಟಿ

ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಕಾಂಗ್ರೆಸ್​ ಇಬ್ಬಾಗವಾಗಿದೆ. ನಿಷ್ಠಾವಂತ ಕಾರ್ಯಕರ್ತರ ಪಡೆ ನಮ್ಮಲ್ಲಿ ಇದೆ. ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ